ಪೊಲೀಸ್ ವಾಹನದಲ್ಲಿ ರೈಫಲ್‌ನಿಂದ ಶೂಟ್: ಪೇದೆ ಆತ್ಮಹತ್ಯೆ

KannadaprabhaNewsNetwork |  
Published : Jul 09, 2026, 12:15 AM IST
ಫೋಟೋಗಳ | Kannada Prabha

ಸಾರಾಂಶ

Constable commits suicide by shooting himself with a rifle in a police vehicle.

-ಕಲಬುರಗಿ ಸಶಸ್ತ್ರ ಮೀಸಲು ಪಡೆಯ (CAR) ಪೇದೆ ಶಿವಕುಮಾರ್ ಮಾವನೂರ್ ಆತ್ಮಹತ್ಯೆ

----

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಹೃದಯಭಾಗವಾದ ಜಗತ್ ವೃತ್ತದಲ್ಲಿ ಸಾರ್ವಜನಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಮಂಗಳವಾರ ರಾತ್ರಿ ಸಂಭವಿಸಿದೆ.

ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆಯೊಬ್ಬರು ಇಲಾಖೆಯ ವಾಹನದಲ್ಲೇ ತಮಗೆ ನೀಡಲಾಗಿದ್ದ ಸರ್ಕಾರಿ ರೈಫಲ್‌ನಿಂದಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಗರ ಸಶಸ್ತ್ರ ಮೀಸಲು ಪಡೆಯ (CAR) ಪೇದೆ ಶಿವಕುಮಾರ್ ಮಾವನೂರ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ (32). ಇವರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಕಲಬುರಗಿ ನಗರಕ್ಕೆ ವರ್ಗಾವಣೆಯಾಗಿ ಬಂದು ಕರ್ತವ್ಯಕ್ಕೆ ಹಾಜರಾಗಿದ್ದರು.

ಶಿವಕುಮಾರ್ ಅವರು ಕರ್ತವ್ಯದ ಅವಧಿಯಲ್ಲಿ ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದೆ. ವಾಹನದ ಒಳಗಡೆಯೇ ತಮ್ಮ ಬಳಿಯಿದ್ದ ಸರ್ಕಾರಿ ರೈಫಲ್ ತೆಗೆದುಕೊಂಡು ಶೂಟ್ ಮಾಡಿಕೊಂಡಿದ್ದಾರೆ. ಗುಂಡು ಹಾರಿದ ಶಬ್ಧ ಕೇಳಿ ಸಹೋದ್ಯೋಗಿಗಳು ಓಡಿ ಬರುವಷ್ಟರಲ್ಲೇ ಅವರು ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ತಿಳಿದುಬಂದಿಲ್ಲ.

ಘಟನೆ ನಡೆದ ತಕ್ಷಣ ಜಗತ್ ವೃತ್ತದ ಬಳಿ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಉಪ ಪೊಲೀಸ್ ಆಯುಕ್ತೆ ಶಾಲೂ, ಹಿರಿಯ ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

-----------

....ಬಾಕ್ಸ್‌.....

ಜನ್ಮದಿನ ಮರುದಿನವೇ ಆತ್ಮಹತ್ಯೆ1

ಪೇದೆ ಶಿವಕುಮಾರ್‌ 1994 ರ ಜು. 6 ರಂದು ಜನಿಸಿದವರು. ಕುಟುಂಬ ಮೂಲಗಳ ಪ್ರಕಾರ ಹಾಗೂ ಸಹೋದ್ಯೋಗಿಗಳ ಪ್ರಕಾರ ಸಿವಕುಮಾರ್‌ ಈತ ಜನ್ಮದಿನ ಭರ್ಜರಿ ಆಚರಿಸಿಕೊಂಡ ಮಾರನೆ ದಿನ ಜು.7ರ ರಾತ್ರಿಯೇ ಸರ್ವೀಸ್‌ ರೈಫಲ್‌ ಬಳಸಿ ತಾವೇ ಗುಂಡುಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಶಿವಕುಮಾರ್‌ ಮೂಲತಃ ಯಾದಗಿರಿ ಜಿಲ್ಲೆಯ ಶಹಾಪೂರದವರು. ನಗರದಲ್ಲಿ ರಾಮ ಮಂದಿರ ಪ್ರದೇಶದಲ್ಲಿ ಮನೆ ಮಾಡಿದ್ದರು.

ಅಕಾಲಿಕ ಮರಣ ಹೊಂದಿದ ಕಲಬುರಗಿ ನಗರ ಸಿ.ಎ.ಆರ್ ಘಟಕದ ಸಿಬ್ಬಂದಿ ಶಿವಕುಮಾರ. ಶರಣಪ್ಪ ಮಾವನೂರ ಅಗಲಿಕೆಗೆ ಕಲಬುರಗಿ ನಗರ ಪೊಲೀಸ್‌ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

------------

....ಕೋಟ್‌....

ಪೇದೆ ಶಿವಕುಮಾರ್‌ ಬೆಂಗಳೂರು ಗ್ರಾಮಾಂತರದಲ್ಲಿ ಕೆಲಸ ಮಾಡ್ತಿದ್ದರು. ಅಂತರ್‌ ಜಿಲ್ಲಾ ವರ್ಗಾವಣೆಯಲ್ಲಿ ಈಚೆಗೆ 3, 4 ತಿಂಗಳ ಹಿಂದಷ್ಟೆ ಕಲಬುರಗಿಗೆ ಆಗಮಿಸಿ ನಗರ ಸಶಸ್ತ್ರ ಪಡೆ ಘಟಕದಲ್ಲಿ ಕೆಲಸದಲ್ಲಿದ್ದರು. ಮಂಗಳವಾರ ರಾತ್ರಿ ಇಲಾಖೆಯ ವಾಹನದಲ್ಲೇ ಸರ್ಕಾರದ ರೈಪಲ್‌ನಿಂದ ಶೂಟ್‌ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಜ್ಞರ ವರದಿ, ವೈಜ್ಞಾನಿಕ ವರದಿ ಸಂಗ್ರಹಿಸಲಾಗುತ್ತಿದೆ. ಕಳೆದ ವಾರ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂಬ ಮಾಹಿತಿ ಇದೆ. ಈ ಪ್ರಕರಣದಲ್ಲಿ ಕುಟುಂಬದವರ ದೂರು ಆಧರಿಸಿ, ಪೇದೆ ಸಾವಿನ ಪ್ರಕರಣ ದೂರು ದಾಖಲಿಸಿ ತನಿಖೆ ಮಾಡಲಾಗುತ್ತದೆ. ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ತನಿಖೆಗೆ ಒಳಪಡಿಸಲಾಗುತ್ತದೆ.-ಡಾ. ಶರಣಪ್ಪ ಢಗೆ, ಪೊಲೀಸ್‌ ಆಯುಕ್ತರು, ಕಲಬುರಗಿ

------------------

ಫೋಟೋಗಳು ಲಗತ್ತಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂಬಳಗೂಡು ಪಿಡಿಒ ಮನೆ ಮೇಲೆ ಲೋಕಾ ದಾಳಿ
ನಾಳೆ ನೀರಾವರಿ ಸಲಹಾ ಸಮಿತಿ ಸಭೆ: ಶಾಸಕ ಪಿ.ರವಿಕುಮಾರ್