ಕನ್ನಡಪ್ರಭ ವಾರ್ತೆ ಕೊಲ್ಹಾರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಜಾಥಾಗೆ ಪಟ್ಟಣದ ದಿಗಂಬರೇಶ್ವರ ಮಠದ ಬಳಿ ರಥವನ್ನು ಕೊಲ್ಹಾರ ತಾಲೂಕಾಡಳಿತದಿಂದ ಭವ್ಯವಾಗಿ ಸ್ವಾಗತಿಸಲಾಯಿತು. ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀ, ತಹಸೀಲ್ದಾರ್ ಎಸ್.ಎಸ್.ನಾಯಕಲ್ ಮಠ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ದಿಗಂಬರೇಶ್ವರ ಮಠದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಮ್.ಪಿ.ಎಸ್ ಶಾಲಾ ಮೈದಾನ ತಲುಪಿತು. ಮಹಿಳೆಯರ ಕುಂಭ ಮೇಳ ,ಆರತಿ, ಜಾಂಜ್ ಮೇಳ,ಗೊಂಬೆ,ಡೊಳ್ಳು ಕುಣಿತ,ಮಕ್ಕಳ ಲೇಜಿಮ್, ಮಹಾಪುರುಷರ ಮಕ್ಕಳ ಛಧ್ಮ ವೇಷಗಳು ಜನರ ಗಮನ ಸೆಳೆದವು. ಅಂಬೇಡ್ಕರ ವೃತ್ತದಲ್ಲಿ ಮಹಿಳೆಯರು ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
ತಹಸೀಲ್ದಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯತಿ ಸದಸ್ಯರು, ದಲಿತಪರ ಸಂಘಟನೆಗಳ ಮುಖಂಡರು ಡಾ.ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆ ಭಾವಚಿತ್ರಕ್ಕೆ ಪೂಜೆ ಸಲ್ಲಸಿ, ಪುಪ್ಪಾರ್ಚನೆ ಗೈದರು. ಬಳಿಕ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ನೃತ್ಯ ರೂಪಕ, ದೇಶ ಭಕ್ತಿ ಗೀತೆಗಳ ನೃತ್ಯ ಜನರ ಮನಸ್ಸನ್ನ ಸೂರೆಗೊಳಿಸಿದವು. ಮಕ್ಕಳು ಮತ್ತು ಮಹಿಳಾ ಸಾಹಿತಿಗಳಿಂದ ಸಂವಿಧಾನ ಕುರಿತು ರಚಿಸಿದ ಸ್ವರಚಿತ ಕವನ ವಾಚನಗಳು ಜರುಗಿದವು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಕ್ಷಕಿ ರುದ್ರಮ್ಮ ಗಿಡ್ಡಪ್ಪಗೋಳ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನ ಓದಲಾಗದಿದ್ದರೂ, ಸಂವಿಧಾನ ಪೀಠಿಕೆಯನ್ನಾದರೂ ಓದಿ ಅರ್ಥೈಸಿಕೊಂಡು ಎಲ್ಲರೂ ಒಂದಾಗಿ ಬದುಕಬೇಕು ಎಂದರು.
ಸಂಗೀತ ಶಿಕ್ಷಕಿ ಕಾಂಚನಾ ನಾಯ್ಕರ್ ,ತಬಲಾ ವಾದಕ ಪ್ರಾಣೇಶ ಪತ್ತಾರ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಶಾಲೆ ಮಕ್ಕಳು ಪ್ರಾರ್ಥಿಸಿದರು. ಸಂಗಮೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ನಾಡಗೀತೆ ಹೇಳಿದರು. ಮನು ಪತ್ತಾರ ಸಂವಿಧಾನ ಪೀಠಿಕೆ ಬೋಧಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಹಾಗೂ ಸಿ.ಆರ್.ಪಿ ಜಿ.ಆಯ್.ಗೊಡ್ಯಾಳ ಕಾರ್ಯಕ್ರಮ ನಡೆಸಿಕೊಟ್ಟರು.
ಕೋಟ್
-ನಾಗರಾಜ ಬನಸೋಡೆ ಶಿಕ್ಷಕ