ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಕುವೆಂಪು ವೃತ್ತದಲ್ಲಿ ವೇದಿಕೆ ಕಾರ್ಯಕರ್ತರು ಹಾಗೂ ಡಿಎಸ್‌ಎಸ್ ಮುಖಂಡರು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಮುಖ್ಯ ಬೀದಿ ಮೂಲಕ ಅಂಬೇಡ್ಕರ್ ವೃತ್ತದ ವರೆಗೆ ಜಾಥ ನಡೆಸಿ ಸಂವಿಧಾನ ಆಶಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದರು.
ವೇದಿಕೆ ಸಂಚಾಲಕ ವಕೀಲ ಸಿ.ಎಸ್.ವೆಂಕಟೇಶ್ ಮಾತನಾಡಿ, ದೇಶದ ಸಂವಿಧಾನ ತಿಳಿಯಲು ಪ್ರತಿ ಮನೆಯಲ್ಲಿ ಸಂವಿಧಾನ ಪುಸ್ತಕವನ್ನು ಓದಿದರೆ ಇಲ್ಲಿನ ಕಾನೂನುಗಳ ಬಗ್ಗೆ ಸುಲಭವಾಗಿ ತಿಳಿದು ಸಮಾನ ಬದುಕನ್ನು ರೂಪಿಸಿಕೊಳ್ಳಬಹುದು ಎಂದರು.ಸಂವಿಧಾನೋತ್ಸವದ ಮೆರವಣಿಗೆ ನೇತೃತ್ವದ ವಹಿಸಿದ್ದ ವೇದಿಕೆ ಅಧ್ಯಕ್ಷ ವಕೀಲ ಸಿಎಸ್.ವೇಂಕಟೇಶ್ ವಾಹನಗಳ ಮೇಲೆ ಸಂವಿಧಾನದ ಕುರಿತ ಮಾಹಿತಿ ಪುಸ್ತಕಗಳ ಭಾವಚಿತ್ರಗಳನ್ನಿರಿಸಿ ಹೂವಿನಿಂದ ಅಲಂಕಾರಗೊಳಿಸಿದರು. ಟಮಟೆ ವಾದ್ಯಗಳೊಂದಿಗೆ ವೇದಿಕೆ ಸದಸ್ಯರು ಇತರ ಜನಪ್ರತಿನಿಧಿಗಳು ಭಾಗವಹಿಸಿ, ರಸ್ತೆಯುದ್ದಕ್ಕೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಾರ್ವಜನಿಕರಿಂದ ಪುಷ್ಪ ನಮನ ಸಲ್ಲಿಸಿದರು.
ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮದ ಸಿ.ಬಿ.ಚಲುವೇಗೌಡರಿಗೆ ಅಂತರ ಜಿಲ್ಲಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಲಭಿಸಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಹಿರಿಯರ (75 ವರ್ಷ ಮೇಲ್ಪಟ್ಟ ವಿಭಾಗ) ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಚಲುವೇಗೌಡರು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನ ಮತ್ತು ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.