ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರಜ್ಞಾವಂತರ ವೇದಿಕೆ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆ ಸಂಚಾಲಕ, ವಕೀಲ ಸಿ.ಎಸ್.ವೆಂಕಟೇಶ್ ಮಾತನಾಡಿ, ದೇಶದ ಸಂವಿಧಾನ ತಿಳಿಯಲು ಪ್ರತಿ ಮನೆಯಲ್ಲಿ ಸಂವಿಧಾನ ಪುಸ್ತಕವನ್ನು ಇಟ್ಟುಕೊಳ್ಳಬೇಕು. ಇದರಿಂದ ಸಣ್ಣ ಕಾನೂನುಗಳು ಸಹ ಸುಲಭವಾಗಿ ತಿಳಿದುಕೊಳ್ಳಬಹುದು. ಪ್ರತಿಯೊಬ್ಬ ಪ್ರಜೆಗೂ ದೇಶದಲ್ಲಿ ಉನ್ನತ ಸ್ಥಾನಗಳು ದೊರೆಯಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಮೆರವಣಿಗೆಯಲ್ಲಿ ವಾಹನಗಳ ಮೇಲೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಸಂವಿಧಾನ ಕುರಿತ ಮಾಹಿತಿ ಪುಸ್ತಕಗಳ ಭಾವಚಿತ್ರವಿಟ್ಟು ಹೂವಿನಿಂದ ಅಲಂಕಾರಗೊಳಿಸಿದರು. ಟಮಟೆ ವಾದ್ಯಗಳೊಂದಿಗೆ ರಸ್ತೆಯುದ್ದಕ್ಕೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜಯಘೋಷಗಳೊಂದಿಗೆ ಮೈಸೂರು- ಬೆಂಗಳೂರು ಹೆದ್ದಾರಿ ವೃತ್ತದ ಮೂಲಕ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅಂತ್ಯಗೊಳಿಸಿದರು.
ಈ ವೇಳೆ ಬೌದ್ಧ ಮಹಾಸಭಾ ಅಧ್ಯಕ್ಷ ಕೆ.ಟಿ ರಂಗಪ್ಪ, ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಡಾ. ಇಲಿಯಾಸ್ ಆಹಮದ್ ಖಾನ್, ಮುಸ್ಮೀಂ ಸೌಹಾರ್ಧ ವೇದಿಕೆ ಅಪ್ಸರ್ ಪಾಷ, ಎಜಾಜ್‌ಪಾಷ, ರೈತ ಮುಖಂಡ ಪಾಂಡು, ಒಕ್ಕಲಿಗ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಕಾರ್ಯದರ್ಶಿ ಅಬ್ದುಲ್ ಸಕ್ಕೂರು, ಪುರಸಭೆ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಕಲಾವತಿ , ಸುಶೀಲಾ, ಪ್ರಜ್ಞಾವಂತರ ವೇದಿಕೆ ಕಾರ್ಯದರ್ಶಿ ಚಿಕ್ಕ ತಿಮ್ಮೆಗೌಡ, ರೈತ ಮುಖಂಡ ಬಾಲಣ್ಣ, ಬಿ.ಎಸ್. ರಮೇಶ್, ಕಡತನಾಳು ಜಯಶಂಕರ್, ಭೈರವ್, ಆಟೋ ಚಂದ್ರ ಸೇರಿದಂತೆ ಇತರರು ಇದ್ದರು.ಭತ್ತ ಮತ್ತು ರಾಗಿ ಖರೀದಿಸಲು ಡಿ.31ರ ವರೆಗೆ ನೋಂದಣಿ ಪ್ರಕ್ರಿಯೆ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಆದೇಶದಂತೆ ತಾಲೂಕಿನ ರೈತರಿಂದ ಭತ್ತ ಮತ್ತು ರಾಗಿ ಖರೀದಿಸಲು ನ.25 ರಿಂದ ಡಿ.31ರ ವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ತಹಸೀಲ್ದಾರ್ ಚೇತನಾ ಯಾದವ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪಟ್ಟಣದ ರೈಲ್ವೆ ನಿಲ್ದಾಣದ ಹತ್ತಿರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ) ಇಲ್ಲಿ ನೋಂದಣಿ ಕ್ರೇಂದ್ರ ತೆರೆಯಲಾಗಿದೆ. ಭತ್ತ (ಸಾಮಾನ್ಯ) ಪ್ರತಿ ಕ್ವಿಂಟಾಲ್‌ಗೆ 2369, (ಗ್ರೇಡ್ ಎ) 2389 ಹಾಗೂ ರಾಗಿ ಕ್ವಿಂಟಾಲ್‌ಗೆ 4886 ರು. ಎಂ.ಎಸ್.ಪಿ ದರ ನಿಗಧಿ ಪಡಿಸಲಾಗಿದೆ.ಪ್ರತಿ ಸಣ್ಣ ಹಿಡುವಳಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ ನಿಂದ ಗರಿಷ್ಠ 50 ಕ್ವಿಂಟಾಲ್ ಭತ್ತ ಹಾಗೂ ಎಕರೆಗೆ 10 ಕ್ವಿಂಟಾಲ್ ನಿಂದ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆಯ ವಿವರ ಆಧರಿಸಿ ನೋಂದಣಿ ಕಾರ್ಯ ಮತ್ತು ಖರೀದಿ ಕಾರ್ಯ ಮಾಡಲಾಗುತ್ತದೆ.
ಹಾಗಾಗಿ ರೈತರು ಸಂಬಂಧಪಟ್ಟ ಸರ್ವೇ ನಂಬರಿಗೆ ಬೆಳೆ ಸಮೀಕ್ಷೆಯಲ್ಲಿ ಸರಿಯಾದ ಬೆಳೆ ಜೋಡಣೆಯಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳತಕ್ಕದ್ದು, ತಿದ್ದುಪಡಿ ಇದ್ದಲ್ಲಿ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.ರೈತರು ಫ್ರೂಟ್ಸ್ ಐಡಿ, ಆಧಾರ್‌ಕಾರ್ಡ್ ಜೋಡಣೆ ಮಾಡಿದ ಮತ್ತು ಎನ್‌ಪಿಸಿಐ ಆಕ್ಟಿವ್ ಆಗಿರುವ ಬ್ಯಾಂಕ್ ಅಕೌಂಟ್ ಪ್ರತಿ, ಆಧಾರ್ ಕಾರ್ಡ್ ಪ್ರತಿ ದಾಖಲೆಗಳನ್ನು ಒದಗಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.