-ಕವಾಡಿಗರಹಟ್ಟಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ: ಡಿಡಿಪಿಐ ಮಂಜುನಾಥ್ ಅಭಿಮತ
-----ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಸಂವಿಧಾನವೇ ತಳಪಾಯವೆಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಹೇಳಿದರು.ಕವಾಡಿಗರಹಟ್ಟಿಯ ಸರ್ಕಾರಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡತನ, ಜಾತಿಪದ್ಧತಿ, ಆರ್ಥಿಕ ಅಸಮತೋಲನ, ರಾಗ- ದ್ವೇಷಗಳ ಮಧ್ಯೆ ಭಾರತ ಒಗ್ಗಟಿನಲ್ಲಿ ಇರಲು ಮತ್ತು ಸಮಷ್ಟಿಯ ಹಿತ ಕಾಪಾಡುವಲ್ಲಿ ಸಂವಿಧಾನಕ್ಕೆ ಅಗ್ರಮಾನ್ಯ ಸ್ಥಾನ ದೊರಕಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಇ.ಸಂಪತ್ ಕುಮಾರ್ ಮಾತನಾಡಿ, ಭವ್ಯ ಭಾರತದ ಭದ್ರಬುನಾಧಿ ಸಂವಿಧಾನದಲ್ಲಿ ಅಡಗಿದೆ. ಅದನ್ನು ಪಾಲಿಸಿ ರಕ್ಷಿಸುವ ಜವಾಬ್ದಾರಿ ಶಾಲೆಗಳು ವಿದ್ಯಾರ್ಥಿಗಳಲ್ಲಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹಾಗೂ ವಿಚಾರ ವಿನಿಮಯ ಮಾಡುವ ಮೂಲಕ ಜಾಗೃತಿ ಭಾವ ಮೂಡಿಸಬೇಕು. ಭವಿಷ್ಯದಲ್ಲಿ ಸಂವಿಧಾನ ಎತ್ತಿಹಿಡಿಯುವ ಕಾರ್ಯ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.ಸಿಆರ್ ಪಿ ಅಜಯ್ ಕುಮಾರ್ ಮಾತನಾಡಿ, ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಪಾಲನೆಯಿಂದ ಮಕ್ಕಳು ಕಾನೂನು ಸುವ್ಯವಸ್ಥೆ ಪಾಲನೆಯ ಅಭ್ಯಾಸ ಬೆಳಸಿಕೊಳ್ಳುವುದರೊಂದಿಗೆ ಸಂವಿಧಾನದ ರಚನೆಯ ಮಹತ್ವ ಅರಿತು ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಪಠಣ ಮಾಡುವಂತೆ ಕಿವಿ ಮಾತು ಹೇಳಿದರು,
ಶಾಲಾ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಪಠಣ ಮಾಡಿದರು. ಹಿರಿಯ ವಿದ್ಯಾರ್ಥಿಗಳು ಸಂವಿಧಾನದ ಅಶಯ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಲೇಖನಗಳನ್ನು ಓದಿದರು. ಎಸ್ ಡಿಎಂಸಿ ಸದಸ್ಯರು ಪೋಷಕರು, ಶಿಕ್ಷಕ ವೃಂದ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು.ಶಿಕ್ಷಕ ತಿಪ್ಪೇಸ್ವಾಮಿ ನಿರೂಪಿಸಿದರು. ಮುಖ್ಯ ಶಿಕ್ಷಕ ರುದ್ರಮುನಿ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ವಂದನೆ ಸಲ್ಲಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
-------------------ಪೋಟೋ: ಚಿತ್ರದುರ್ಗ ತಾಲೂಕಿನ ಕವಾಡಿಗರಹಟ್ಟಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಸಂವಿಧಾನ ದಿನ ಆಚರಣೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
--------------ಪೋಟೋ: 26 ಸಿಟಿಡಿ9
--