ದೇಶಾದ್ಯಂತ ನಿರ್ಭಯದಿಂದ ಓಡಾಡಲು ದೇಶದ ಸಂವಿಂಧಾನವೇ ಕಾರಣ: ಖಾದರ್

KannadaprabhaNewsNetwork | Published : Nov 27, 2024 1:04 AM

ಉಳ್ಳಾಲ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ, ಉಪಾಧ್ಯಕ್ಷರಾದ ಸಪ್ನ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಶ್ರಫ್, ಕೋಟೆಕಾರು ಪ.ಪಂ. ನೂತನ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸುಳ್ಳೆಂಜೀರ್, ಸೋಮೇಶ್ವರ ಪುರಸಭೆಯ ನೂತನ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ದೇಶದ ಪ್ರತಿಯೊಬ್ಬ ನಾಗರಿಕನೂ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ನಿರ್ಭಯದಿಂದ ಒಡಾಡಲು ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಂಧಾನವೇ ಮೂಲ ಕಾರಣ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ .ಖಾದರ್ ಅಭಿಪ್ರಾಯಪಟ್ಟರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಮಂಗಳವಾರ ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ನಡೆದ ‘ಭಾರತ ಸಂವಿಧಾನ- ಅಮೃತ ಮಹೋತ್ಸವ’ 75ರ ಸಂಭ್ರಮದ ಉಪನ್ಯಾಸ ಹಾಗೂ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸಂವಿಂಧಾನ ಅಮೃತ ಮಹೋತ್ಸವದ ಬಗ್ಗೆ ಉಪನ್ಯಾಸ ನೀಡಿದ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ.ಬಿ.ಕೆ. ರವೀಂದ್ರ ಮಾತನಾಡಿ, ಯಾವ ದೇಶಕ್ಕೆ ಹೋದರೂ ಭಾರತದ ಸಂವಿಂಧಾನಕ್ಕೆ ಇರುವ ಗೌರವವೇ ವಿಭಿನ್ನವಾಗಿದೆ. ದೇಶದಲ್ಲಿ ನಡೆದ ಕ್ರಾಂತಿಗಳಿಂದಾಗಿ ಸಂವಿಂಧಾನ ರಚಿಸಲ್ಪಟ್ಟಿತು. ನಮ್ಮ ಯಾವುದೆ ಮೂಲಭೂತ ಹಕ್ಕುಗಳನ್ನ ಪಡಕೊಳ್ಳಲು ಸಂವಿಂಧಾನದ ಮೂಲಕವೇ ಹೋಗಬೇಕಿದೆ. ಸಂವಿಂಧಾನದ ಲೋಪ ದೋಷಗಳ ಬಗ್ಗೆ ಪ್ರಶ್ನಿಸಬಹುದು, ಆದರೆ ಸಂವಿಂಧಾನವೇ ಬೇಡ ಅನ್ನೋದು ತಪ್ಪು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು.ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಸದಸ್ಯರಾದ ಆಲಿಯಬ್ಬ, ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷರಾದ ಹುಸೇನ್ ಕುಂಙಮೋನು, ಪೌರಾಯುಕ್ತ ಮತ್ತಡಿ ಮೊದಲಾದವರು ಉಪಸ್ಥಿತರಿದ್ದರು.ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿದರು. ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಕೆ. ಮಂಜನಾಡಿ ಅತಿಥಿಗಳನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು. ಸತ್ಯ ಜೆ.ಕೆ. ಉಳ್ಳಾಲ್ ವಂದಿಸಿದರು.ಸನ್ಮಾನ: ಉಳ್ಳಾಲ ನಗರಸಭೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ, ಉಪಾಧ್ಯಕ್ಷರಾದ ಸಪ್ನ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಶ್ರಫ್, ಕೋಟೆಕಾರು ಪ.ಪಂ. ನೂತನ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ, ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸುಳ್ಳೆಂಜೀರ್, ಸೋಮೇಶ್ವರ ಪುರಸಭೆಯ ನೂತನ ಅಧ್ಯಕ್ಷೆ ಕಮಲ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಅವರನ್ನು ಸನ್ಮಾನಿಸಲಾಯಿತು.