ಕನ್ನಡ ಪ್ರಭವಾರ್ತೆ,ಮಾಲೂರು
ಸಾಮಾಜಿಕ ಪರಿವರ್ತನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇತಿಹಾಸ ಅರಿತು ಸಮಾಜದಲ್ಲಿ ಸಾಮಾಜಿಕ ಬದಲಾವಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಇಲ್ಲಿನ ಮಹಾರಾಜ ವೃತ್ತದಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಅಂಗವಾಗಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಗಿರೀಶ್ ಮಾಚಹಳ್ಳಿ ಅವರ ನಿರ್ದೇಶನದ ಪ್ರಸ್ತುತ ಭಾರತ ಸಂವಿಧಾನ ಮತ್ತು ಮನುಸ್ಮೃತಿ ಎಂಬ ಸಾಮಾಜಿಕ ಪರಿವರ್ತನಾ ನಾಟಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಸಂವಿಧಾನವೇ ಪ್ರಜಾತಂತ್ರದ ಜೀವ
ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಭಾರತ ಸಂವಿಧಾನದ ಪ್ರಜಾಫ್ರಭುತ್ವದಲ್ಲಿ ನಾವೇಲ್ಲ ಬದುಕುತಿದ್ದೇವೆ. ಸಂವಿಧಾನದಡಿಯಲ್ಲಿ ನಾನು ರಾಜಕೀಯವಾಗಿ ಈ ಹಂತಕ್ಕೆ ಬಂದಿದ್ದೇನೆ. ಜನವರಿ ಒಂದನೇ ತಾರೀಖು ನಡೆದ ವೀರ ಕೋರೆಂಗಾವ್ ಯುದ್ಧದ ಇತಿಹಾಸದ ಬಗ್ಗೆ ಎಷ್ಟೋ ಜನಕ್ಕೆ ಗೊತ್ತಿಲ್ಲ. ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಇತಿಹಾಸ ಅರಿಯಲು ಸಾಧ್ಯ. ಹೊಸ ವರ್ಷದ ಪ್ರಥಮ ದಿನವೇ ಇಂತಹ ಕಾರ್ಯಕ್ರಮವನ್ನಹ ಅಚ್ಚುಕಟ್ಟಾಗಿ ಮೂಡಿಸಿದ ವೆಂಕಟೇಶ್ ಹಾಗೂ ವಿಜಿ ತಂಡದವರು ಅಭಿನಂದನೆಗೆ ಅರ್ಹರು ಎಂದರು.ಕದಸಂಸ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಪ್ರಾಸ್ತಾವಿಕ ಮಾತನ್ನಾಡುತ್ತ ಪ್ರಸ್ತುತ ಸಮಾಜದ ಜನರಲ್ಲಿ ವೈಚಾರಿಕ ಪ್ರಜ್ಞೆ ವೈಚಾರಿಕ ಮನೋಭಾವ ಸಾಮಾಜಿಕ ಚಿಂತನೆ ಹಾಗೂ ಮಾನವ ಹಕ್ಕುಗಳ ಅರಿವು-ಕಾನೂನು ಜ್ಞಾನ ಕ್ರೀಯಾತ್ಮಕವಾಗಿ ಬದಲಾಗಬೇಕಾದ ಅವಶ್ಯಕತೆ ಇದೆ. ಅದ್ದರಿಂದ ಗ್ರಾಮೀಣ ಭಾಗಗಳಲ್ಲಿ ದೇವಾಲಯದ ಪ್ರವೇಶ ಸಾರ್ವಜನಿಕ ಸ್ಥಳದಲ್ಲಿ ಮುಕ್ತ ಪ್ರವೇಶದ ಅವಶ್ಯಕತೆ ಇದೆ ಎಂದರು.
ಸಂವಿಧಾನ ಓದಿ ಅರ್ಥೈಸಿಕೊಳ್ಳಿಭಾರತದ ಸಂವಿಧಾನವು ಧರ್ಮ, ಜಾತಿ,ವರ್ಣ ವರ್ಗ ಪ್ರದೇಶ ಸೇರಿದಂತೆ ರಾಜಕೀಯ ನಿಲುವುಗಳ ಆಧಾರದ ಮೇಲೆ ತಾರತಮ್ಯ ಮಾಡಲು ಅವಕಾಶ ಇರುವುದಿಲ್ಲ. ದೇಶದ ಎಲ್ಲ ನಾಗರೀಕರು ವಿಚಾರ ನಂಬಿಕೆ ಧರ್ಮ ಉಪಾಸನೆ ಸ್ವಾತಂತ್ರ್ಯ ಹಾಗೂ ಸ್ಥಾನಗಳ ಸಮಾನತೆಯನ್ನು ಕೊಟ್ಟಿದೆ. ಪ್ರತಿಯೊಬ್ಬ ಪ್ರಜೆಯ ವೈಯುಕ್ತಕ ಘನತೆ ಕಾಪಾಡುವುದು ಭಾರತ ಸಂವಿಧಾನದ ಮುಖ್ಯ ಆಶಯವಾಗಿದೆ. ಅದನ್ನು ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ಓದಿ ಅರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಪರಿವರ್ತನಾ ಸಂಘಟನೆಯ ರಾಜ್ಯಾಧ್ಯಕ್ಷ ಎ.ಗೋಪಾಲ್ ,ಭೀಮ ಜ್ಯೋತಿ ಶ್ರೀನಿವಾಸ್ ಅವರು ಉಪಾನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷೆ ಕೋಮಲನಾರಾಯಣ್ ,ಸಿಪಿಐ ವಸಂತ್ ಕುಮಾರ್ ,ಯೋಜನಾ ಪ್ರಾಧಿಕಾರ ಅಧ್ಯಕ್ಷ ನಯೀಂ,ಕರವೇ ಅಧ್ಯಕ್ಷ ಶ್ರೀನಿವಾಸ್,ಮುಖಂಡ ಎಂ.ಆಂಜಿನಪ್ಪ,ಸಂಪಂಗೆರೆ ಮುನಿರಾಜು,ನಾಗೇಶ್,ಬೆಸ್ಕಂ ಎ.ಇ.ಇ. ಅನ್ಸರ್ ಪಾಷ,ವಿಶ್ವನಾಥ್ ರೆಡ್ಡಿ ,ಚವ್ವೇನಹಳ್ಳಿ ವಿಜಿ ,ತಾಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್ ,ಮುನಿಚೌಡಪ್ಪ,ರೋಜರಪಲ್ಲಿ ನಾರಾಯಣಸ್ವಾಮಿ ,ಡಿ.ನಾರಾಯಣಸ್ವಾಮಿ ಇನ್ನಿತರರು ಇದ್ದರು.