ತೊಗರಿ ನೆಲಕ್ಕೆ ಸುರಿದು ರೈತರ ಪ್ರತಿಭಟನೆ

KannadaprabhaNewsNetwork |  
Published : Jan 03, 2025, 12:31 AM IST
೨ಬಿಎಸ್ವಿ೦೧- ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ನಾಡಕಚೇರಿಯಲ್ಲಿ ನೆಲಕ್ಕೆ ತೊಗರಿ ಹಾಕಿ ತೊಗರಿ ದರ ಹೆಚ್ಚಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ನಾಡಕಚೇರಿ ಆವರಣದಲ್ಲಿ ತೊಗರಿ ಬೆಲೆ ದಿಢೀರ್‌ ಕುಸಿತವಾಗಿರುವುದನ್ನು ಖಂಡಿಸಿ ಗುರುವಾರ ತೊಗರಿಯನ್ನು ಸುರಿದು ಪ್ರತಿಭಟನೆ ನಡೆಸಿದರು. ಅಲ್ಲದೇ, ಕೇಂದ್ರ ಸರ್ಕಾರ ತೊಗರಿ ಬೆಲೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್‌ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ನಾಡಕಚೇರಿ ಆವರಣದಲ್ಲಿ ತೊಗರಿ ಬೆಲೆ ದಿಢೀರ್‌ ಕುಸಿತವಾಗಿರುವುದನ್ನು ಖಂಡಿಸಿ ಗುರುವಾರ ತೊಗರಿಯನ್ನು ಸುರಿದು ಪ್ರತಿಭಟನೆ ನಡೆಸಿದರು. ಅಲ್ಲದೇ, ಕೇಂದ್ರ ಸರ್ಕಾರ ತೊಗರಿ ಬೆಲೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್‌ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಕಳೆದ ಐದಾರು ತಿಂಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ ₹೧೨ ಸಾವಿರ ಇದ್ದ ತೊಗರಿ ಬೆಳೆ ದರವನ್ನು ಕೇಂದ್ರ ಸರ್ಕಾರ ದಿಢೀರನೆ ದರ ಕಡಿಮೆ ಮಾಡಿ ಪ್ರತಿ ಕ್ವಿಂಟಾಲ್‌ಗೆ ₹ ೭,೫೫೦ ನಿಗದಿ ಮಾಡುವ ಮೂಲಕ ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡಿದೆ. ರೈತರು ಬೆಳೆದ ಯಾವುದೇ ಬೆಳೆಯ ಫಸಲನ್ನು ಕೇಂದ್ರ ಸರ್ಕಾರ ಖರೀದಿಸಲು ಮುಂದಾದ ಸಂದರ್ಭದಲ್ಲಿ ಬೆಲೆ ನಿಗದಿಪಡಿಸುವಾಗ ರೈತರೊಂದಿಗೆ ಚರ್ಚಿಸಿ ರೈತರ ಸಲಹೆ ಮೇರೆಗೆ ದರ ನಿಗದಿಪಡಿಸಬೇಕು. ರೈತರು ಬೆಳೆ ಬೆಳೆಯಲು ಸಾಕಷ್ಟು ಶ್ರಮಿಸುವ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಖರ್ಚು ಮಾಡುತ್ತಾರೆ. ಇದನ್ನು ಪರಿಗಣಿಸಿ ಬೆಳೆಗಳಿಗೆ ಯೋಗ್ಯ ಮಾರುಕಟ್ಟೆ ದರ ನಿಗದಿಪಡಿಸಬೇಕು. ಇದೀಗ ವಿದೇಶದಿಂದ ತೊಗರಿಯನ್ನು ಉದ್ದೇಶಪೂರ್ವಕವಾಗಿ ಆಮದು ಮಾಡಿಕೊಂಡು ತೊಗರಿ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಸರ್ಕಾರ ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ ಮೊದಲಿದ್ದಂತೆ ₹ ೧೨ ಸಾವಿರ ದರಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವಿಠ್ಠಲ ಬಿರಾದಾರ, ಹೊನಕೇರೆಪ್ಪ ತೆಲಗಿ, ಚನ್ನಬಸಪ್ಪ ಸಿಂಧೂರ, ಹಣಮಂತರಾಯ ಗುಣಕಿ, ಮಲ್ಲನಗೌಡ ನಾಡಗೌಡ, ಗುರುಸಂಗಪ್ಪ ಶಿವಯೋಗಿ, ಮಹೇಶ ಯಡಳ್ಳಿ, ಭಾಗಪ್ಪ ನಾಟೀಕಾರ, ದಾವಲಸಾಬ ನದಾಫ್, ಹಣಮಂತ ಮುರಾಳ, ಗಿರಿಮಲ್ಲಪ್ಪ ದೊಡಮನಿ, ಬಸವರಾಜ ಚೌಧರಿ, ಭೀಮನಗೌಡ ಪಾಟೀಲ, ಲಂಕೇಶ ತಳವಾರ, ಬಂಗೆಪ್ಪ ಸಾಸನೂರ, ನಿಂಗಣ್ಣ ನಾಡಗೌಡ, ಸಿದ್ದು ಮೇಟಿ, ರ್‍ಯಾಬಪ್ಪಗೌಡ ಪುಲೇಶಿ, ರಾಜೇಸಾಬ ವಾಲೀಕಾರ, ಬಂದಗೀಸಾ ಹಳ್ಳೂರ, ಲಕ್ಷ್ಮಣ ಚೌಧರಿ, ಶ್ರೀಶೈಲ ಮಾಳೂರ, ಈರಯ್ಯ ಹಿರೇಮಠ, ಶರಣಬಸಪ್ಪ ಹಾದಿಮನಿ, ಗುರುಲಿಂಗಪ್ಪ ಪಡಸಲಗಿ, ಈರಣ್ಣ ಬ್ಯಾಕೋಡ, ಪ್ರಕಾಶ ಶಂಕ್ರೆಪ್ಪಗೋಳ, ವೀರಭದ್ರಯ್ಯ ಜಂಗಿನಗಡ್ಡಿ, ಎಸ್.ಎಸ್.ಬೂದಿಹಾಳ, ಅರವಿಂದ ಬ್ಯಾಕೋಡ, ಮಹಾಂತೇಶ ಕೋರಿ, ಮಲ್ಲಪ್ಪ ಮಾದರ ಸೇರಿದಂತೆ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!