ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಿ.ಸಿ.ರೋಡಿನ ಹಿರಿಯ ವಕೀಲ ಜಯರಾಂ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಯಾವಾಗ ಸಂಘಟಿತರಾಗುತ್ತೇವೆಯೋ ಆಗ ಬೆಲೆ ಜಾಸ್ತಿ. ಸಂಘ ಕಟ್ಟುವಾಗ ಅದು ಬೇಕೇ? ಅದರಿಂದ ನಮಗೇನು ಪ್ರಯೋಜನ ಎನ್ನುವ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತದೆ. ಅದರ ಬದಲು ನಾವು ಹೇಗೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆಯೋ ಅದು ಅತ್ಯಂತ ಮುಖ್ಯವಾಗಿರುತ್ತದೆ ಎಂದರು.
ಕಷ್ಟಗಳು ಬಂದಾಗ ಎಂದಿಗೂ ಸದಸ್ಯರನ್ನು ಸಂಘ ಬಿಡವುದಿಲ್ಲ. ಅದು ನಮ್ಮಸಂಸ್ಥೆಯ ಸದಸ್ಯ ಎನ್ನುವ ಮನೋಭಾವದಿಂದ ನೆರವಾಗುತ್ತದೆ. ಸದಸ್ಯರಲ್ಲಿ ಸಕರಾತ್ಮಕ ಚಿಂತನೆ, ನಂಬಿಕೆ, ಭರವಸೆ, ವಿಶ್ವಾಸ ಇದ್ದಾಗ ಸಂಘಟನೆ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ ಎಂದರು.ನಿವೃತ್ತ ಬಿಎಸ್ ಎಫ್ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ನಿವೃತ್ತ ಯೋಧರು ತಮ್ಮ ಪಿಂಚಣಿ, ಮಕ್ಕಳ ವಿದ್ಯಾಭ್ಯಾಸ, ಕುಟುಂಬ ವ್ಯವಸ್ಥೆ, ಸಮಾಜ ಸೇವೆ ಮೊದಲಾದ ಕಾರ್ಯಗಳನ್ನು ಸೂಸೂತ್ರವಾಗಿ ಮಾಡಲು ಸಂಘ ಅಗತ್ಯ. ಹಲವು ಸಂದರ್ಭಗಳಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕಾನೂನಿನ ಅರಿವು ಇರುವುದಿಲ್ಲ ಆಗ ಸಂಘ ನೆರವಿಗೆ ಬರುತ್ತದೆ. ಸಂಘದಿಂದ ನಮಗೇನು ಲಾಭ ಎನ್ನುವ ಚಿಂತನೆ ಬಿಟ್ಟು ಸೇವಾ ಮನೋಭಾವನೆಯಿಂದ ಜೊತೆ ಸೇರಿದಾಗ ಸಂಘ ಬಲಿಷ್ಠವಾಗಲು ಸಾಧ್ಯ ಎಂದರು.
ಲಕ್ಷ್ಮಣ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಯಾನ ವೇಗಸ್ ವಂದಿಸಿದರು.