.ಭಾರತ ಸಂವಿಧಾನ ನಮ್ಮೆಲ್ಲರ ಧರ್ಮ ಗ್ರಂಥ ಇದ್ದಂತೆ

KannadaprabhaNewsNetwork |  
Published : Nov 27, 2025, 01:30 AM IST
ಫೋಟೋ: 26 ಹೆಚ್‌ಎಸ್‌ಕೆ 1 ಹೊಸಕೋಟೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಡಿವೈಎಸ್‌ಪಿ ಮಲ್ಲೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಸಿದ್ದರಾಜು ಸೇರಿದಂತೆ ಹಲವಾರು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಶೋಷಿತರ ಧ್ವನಿಯಾಗಿರುವ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ರಾಜ್ಯಾಂಗಗಳ ಕಾರ್ಯಕ್ಷಮತೆ ಬಗ್ಗೆ ಹೇಳಿಕೊಡಲಾಗಿದೆ,

ಕನ್ನಡಪ್ರಭ ವಾರ್ತೆ ಹೊಸಕೋಟೆ

ನಮ್ಮ ಭಾರತದಲ್ಲಿ ಜಾರಿಯಲ್ಲಿರುವ ಸಂವಿಧಾನ ನಮ್ಮೆಲ್ಲರ ಧರ್ಮಗ್ರಂಥವಾಗಿದ್ದು, ಸಮಾನತೆ ಸಾರುವ ಮೂಲಕ ಪ್ರಜಾ ಪ್ರಭುತ್ವದ ತಳಹದಿಯಾಗಿದೆ ಎಂದು ಡಿವೈಎಸ್‌ಪಿ ಮಲ್ಲೇಶ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೋಷಿತರ ಧ್ವನಿಯಾಗಿರುವ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ರಾಜ್ಯಾಂಗಗಳ ಕಾರ್ಯಕ್ಷಮತೆ ಬಗ್ಗೆ ಹೇಳಿಕೊಡಲಾಗಿದೆ, ಪ್ರಪಂಚದಲ್ಲೇ ಮಾದರಿಯಾದ ಸಂವಿಧಾನವನ್ನು ಡಾ ಬಿ.ಆರ್. ಅಂಬೇಡ್ಕರ್ ನೀಡುವ ಮೂಲಕ ಸಮಾನತೆಗೆ ಹಕ್ಕು ಹಾಗೂ ಕರ್ತವ್ಯಗಳನ್ನು ಎಲ್ಲರಿಗೂ ನೀಡಿದ್ದಾರೆ. ನಮ್ಮ ಹಕ್ಕು ಹಾಗೂ ನಮ್ಮ ಸಂವಿಧಾನದ ದಿನಾಚರಣೆಗೆ ಕೇವಲ ದಲಿತರು ಮಾತ್ರ ಬಂದಿರುವುದು ಶೋಚನೀಯ ವಿಚಾರ ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಈ ಸಂವಿಧಾನ ದೂರದೃಷ್ಟಿಯನ್ನು ಹೊಂದಿದೆ. ಇದನ್ನು ರಚಿಸಲು ಬೇರೆ ದೇಶದ ಸಂವಿಧಾನಗಳನ್ನು ಅದ್ಯಯನ ಮಾಡಿ ಉತ್ತಮ ವಿಚಾರಗಳನ್ನು ಕಲೆಹಾಕುವ ಮೂಲಕ ಅತ್ಯಂತ ಸಮರ್ಥ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿಧ್ಯಾರ್ಥಿಗಳು ನಗರದ ಕೆಇಬಿ ವೃತ್ತದಿಂದ ತಾಲೂಕು ಕಚೇರಿ ಹಾಗೂ ಡಾ ಅಂಬೇಡ್ಕರ್ ಭವನದ ವರೆಗೆ ಸಂವಿಧಾನ ಜಾಥ ನೆಡೆಸಿ ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಇಒ ಮುನಿಯಪ್ಪ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ ಮಂಜುನಾಥ್, ಉಪತಹಸೀಲ್ದಾರ್ ಕೃಷ್ಣ, ತಾಪಂ ಮಾಜಿ ಅಧ್ಯಕ್ಷ ಡಾ ಡಿಟಿ ವೆಂಕಟೇಶ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರುಗಳಾದ ಗುಟ್ಟಳ್ಳಿ ನಾಗರಾಜ್, ಜಿನ್ನಾಗರ ಜಗನ್ನಾಥ್, ಅಭಿಮಾನಿ ಮುನಿರಾಜ್, ಎ.ನಾರಾಯಣಸ್ವಾಮಿ, ಕಿರಣ್ ಕುಮಾರ್, ಮುನಿಸ್ವಾಮಿ ಇದ್ದರು.ಫೋಟೋ: 26 ಹೆಚ್‌ಎಸ್‌ಕೆ 1 ಹೊಸಕೋಟೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಡಿವೈಎಸ್‌ಪಿ ಮಲ್ಲೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಸಿದ್ದರಾಜು ಸೇರಿದಂತೆ ಹಲವಾರು ಗಣ್ಯರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ