ಕನ್ನಡಪ್ರಭ ವಾರ್ತೆ ಮದ್ದೂರು
ನಗರಸಭೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಟೋ ಚಾಲಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು.
ಆಟೋ ಮತ್ತು ಟ್ಯಾಕ್ಸಿ ಚಾಲಕರ ಬಹುದಿನಗಳ ಬೇಡಿಕೆಯಂತೆ ಹಾಗೂ ಮಾಜಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಶಿಪಾರಸ್ಸಿನ ಮೇರೆಗೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಕಳೆದ ಮಾರ್ಚ್ 7ರಂದು ಸಂಸದರ ಪ್ರದೇಶ ಅಭಿವೃದ್ಧಿ ನಿಧಿಯಿಂದ 30 ಲಕ್ಷ ರು, ಹಾಗೂ ಬಿಡ್ಜ ಅಂಡ್ ರೋಪ್ ಕಂಪನಿಯ ಸಿಆರ್‌ಎಸ್ ಅನುದಾನ 40 ಲಕ್ಷ ರು. ಸೇರಿದಂತೆ ಒಟ್ಟು 70 ಲಕ್ಷ ರು.ವೆಚ್ಚದಲ್ಲಿ ಆಟೋ ಮತ್ತು ಟ್ಯಾಕ್ಸಿ ನಿಲ್ದಾಣದ ಮೇಲ್ಚಾವಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.ಕಳೆದ ಕೆಲವು ದಿನಗಳ ಹಿಂದೆ ಸ್ಥಳದಲ್ಲಿದ್ದ ಮರಗಳನ್ನು ತೆರವುಗೊಳಿಸಿದ್ದ ಗುತ್ತಿಗೆದಾರರು ಕಾಮಗಾರಿ ನಿರ್ಮಾಣಕ್ಕಾಗಿ ಬೇಕಾದ ವಸ್ತುಗಳನ್ನು ಸ್ಥಳದಲ್ಲಿ ದಾಸ್ತಾನು ಮಾಡಿದ್ದರು. ಈ ವೇಳೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ ನಗರಸಭೆ ಆಯುಕ್ತೆ ರಾಧಿಕಾ ಸೋಮಶೇಖರ್ ಕಾಮಗಾರಿ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಎಂಬ ಕಾರಣವೊಡ್ಡಿ ಕಾಮಗಾರಿ ಗೆ ಅಡ್ಡಿಪಡಿಸಿ ಸ್ಥಳದಲ್ಲಿ ದಾಸ್ತಾನು ಮಾಡಲಾಗಿದ್ದ ರೋಪ್ ನಿರ್ಮಾಣದ ಕಬ್ಬಿಣ ವಸ್ತುಗಳನ್ನು ಆಟೋ ಚಾಲಕರ ಮತ್ತು ಸಾರ್ವಜನಿಕರ ತೀವ್ರವಿರೋಧದ ನಡುವೆ ವಶಕ್ಕೆ ಪಡೆದುಕೊಂಡರು ನಗರಸಭೆಗೆ ಸಾಗಿಸಿದ್ದಾರೆ.ಆಟೋ ತಂಗುದಾಣ ನಿರ್ಮಾಣಕ್ಕೆ ತಡೆ ಖಂಡನೆ, ಪ್ರತಿಭಟನೆ ಎಚ್ಚರಿಕೆ
ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಬಿಸಿಲಿನ ಬವಣೆ ತಪ್ಪಿಸಲು ನೆರಳಿನ ನಿಲ್ದಾಣವನ್ನು ಸಿಎಸ್ಆರ್ ನಿಧಿಯಿಂದ ಕೆಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ನಗರಸಭೆ ಅಧಿಕಾರಿಗಳು ನಮ್ಮಿಂದ ಅನುಮತಿ ಪಡೆದಿಲ್ಲ ಎಂದು ಕಾಮಗಾರಿ ನಿಲ್ಲಿಸಿ ಸಾಮಗ್ರಿಗಳನ್ನು ನಗರಸಭೆ ವಶಕ್ಕೆ ಪಡೆದಿರುವುದು ಖಂಡನೀಯ. ತಂಗುದಾಣ ನಿರ್ಮಾಣದಿಂದ ನಾಗರಿಕರ ಸಂಚಾರಕ್ಕೆ ಯಾವುದೇ ಅಡೆತಡೆ ಇರಲಿಲ್ಲ. ಆದರೂ ಈ ರೀತಿ ನಡೆದುಕೊಂಡಿರುವುದು ಬಡ ಆಟೋ ಚಾಲಕರ ಮೇಲೆ ದೌರ್ಜನ್ಯ ಎಸಗಿದಂತೆ. ಆದ್ದರಿಂದ ಈ ಕೂಡಲೇ ನಗರಸಭೆ ಅಧಿಕಾರಿಗಳು ನೆರಳಿನ ವ್ಯವಸ್ಥೆಗೆ ತಂಗುದಾಣ ನಿರ್ಮಿಸಲು ಅನುಮತಿ ನೀಡಬೇಕು. ಇಲ್ಲವಾದರೆ ಆಟೋಗಳ ಸಹಿತ ನಗರಸಭೆ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಸಂಘ ಮ.ನ.ಪ್ರಸನ್ನ ಕುಮಾರ್ ಎಚ್ಚರಿಕೆ ನೀಡಿದ್ದಾರೆ.ಆಟೋ-ಟ್ಯಾಕ್ಸಿ ನಿಲ್ದಾಣ ಕಾಮಗಾರಿಗೆ ತಡೆ, ಇಂದು ಡೀಸಿ ಕಚೇರಿ ಎದುರು ಪ್ರತಿಭಟನೆ
ಸುಮಾರು 40 ಲಕ್ಷ ಸಿಎಸ್‌ಆರ್ ನಿಧಿಯಿಂದ ಆಟೋ ನಿಲ್ದಾಣ ಹಾಗೂ 30 ಲಕ್ಷ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಟ್ಯಾಕ್ಸಿ ನಿಲ್ದಾಣ ನಿರ್ಮಾಣವಾಗುತ್ತಿದೆ. ಆದರೆ, ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಸಾಮಗ್ರಿಗಳನ್ನು ಸ್ಥಳಾಂತರಿಸಿರುವುದು ಖಂಡನೀಯ.ಈ ಹಿನ್ನೆಲೆಯಲ್ಲಿ ಆ.14ರ ಬೆಳಗ್ಗೆ 11:30ಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಮದ್ದೂರಿನ ಎಲ್ಲಾ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡುವಂತೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮನವಿ ಮಾಡಿದ್ದಾರೆ.