4ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ
ಪಟ್ಟಣದಲ್ಲಿ ಹಾದು ಹೋಗುವ ಬಿ.ಎಚ್. ರಸ್ತೆ ಅಗಲೀಕರಣಕ್ಕೆ ಸುಮಾರು ₹ 27ಕೋಟಿ ಅಂದಾಜು ವೆಚ್ಚವಾಗಲಿದ್ದು ಆ ರಸ್ತೆ ಯನ್ನು ಮುಂದಿನ ದಿನಗಳಲ್ಲಿ ದ್ವಿಪಥವಾಗಿ ಅಭಿವೃದ್ಧಿಪಡಿಸಲಾಗುವುದು. ಉಳಿದಂತೆ ಪಟ್ಟಣದ ಎಲ್ಲಾ ವಾರ್ಡಗಳಿಗೂ ಮುಂಬರುವ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ ಮಾಡಿಸಿ ಆ ಕಾಮಗಾರಿಗೂ ಒತ್ತು ನೀಡಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ವನಿತಮಧು ಮಾತನಾಡಿ, ಬೀರೂರು ಪಟ್ಟಣವನ್ನು ಶಾಸಕರು ಅಭಿವೃದ್ಧಿಪಡಿಸುತ್ತಿರುವುದು ಶ್ಲಾಘನೀಯ. ಭಗವತ್ ನಗರ ಮತ್ತು ಪುರಿಭಟ್ಟಿ ಬಡಾವಣೆಗಳಿಗೆ ರಸ್ತೆಯೇ ಇಲ್ಲದೆ ಜನ ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಶಾಸಕರು ಗಮನ ಹರಸಿ ಶೀಘ್ರ ಅವರ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ ಅವರು, ಮಾರ್ಗದ ಕ್ಯಾಂಪ್ ನಲ್ಲಿ ಸುಮಾರು 5-6ವಾರ್ಡ ಗಳಿದ್ದು ಜನ ಪಟ್ಟಣದ ಒಳ ಭಾಗಕ್ಕೆ ಬರಲು ಸುತ್ತಿಕೊಂಡು ಬರುವ ಪರಿಸ್ಥಿತಿ ಇದೆ. ಇತ್ತೀಚೆಗೆ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಬಂದಾಗ, ಮಾರ್ಕೆಟ್ ರಸ್ತೆಯಿಂದ ಭೂತನಗುಡಿ ಬೀದಿವರೆಗೂ ರೈಲ್ವೆ ಒವರ್ ಬ್ರಿಡ್ಜ್ ಮಾಡಿಕೊಡುವಂತೆ ಪುರಸಭೆ ಮತ್ತು ನಾಗರಿಕರು ಮನವಿ ಮಾಡಿದ್ದರು. ಅದು ಸದ್ಯ ಯಾವ ಸ್ಥಿತಿಯಲ್ಲಿದೆ ಎಂದು ಶಾಸಕರು ಗಮನ ಹರಸಿ ಸಚಿವರೊಂದಿಗೆ ಚರ್ಚಿಸಿ ಶೀಘ್ರ ರೈಲ್ವೆ ಒವರ್ ಬ್ರಿಡ್ಜ್ ಕಾಮಗಾರಿಗೆ ಚಾಲನೆ ನೀಡುವಂತೆ ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಶಾಸಕರು, ರೈಲ್ವೆ ಒವರ್ ಬ್ರಿಡ್ಜ್ ಕಾಮಗಾರಿ ಬಗ್ಗೆ ಸಚಿವ ಸೋಮಣ್ಣ ಅವರು ಈ ಕಾಮಗಾರಿ ಮಾಡುವಂತೆ ಪಟ್ಟಿಯಲ್ಲಿ ಸೇರಿಸಿದ್ದಾರೆಂಬ ಮಾಹಿತಿ ಇದೆ. ಮತ್ತೊಮ್ಮೆ ಚರ್ಚಿಸಿ ಬ್ರಿಡ್ಜ್ ಮಾಡಿಸಲಾಗುವುದು. ಉಳಿದಂತೆ ಭಗವತ್ ನಗರದ ರಸ್ತೆ ಸಮಸ್ಯೆ ಬಗ್ಗೆ ಎಲ್ಲಾ ಕಡೆ ಕೇಳಿಬರುತ್ತಿದ್ದು ಶೀಘ್ರ ನನ್ನ ಅನುದಾನವನ್ನೆ ಹಾಕಿ ರಸ್ತೆ ಕಾಮಗಾರಿ ಮಾಡಿಸಿ ಅಲ್ಲಿನ ಜನರ ಸಮಸ್ಯೆಗೆ ಮುಕ್ತಿ ನೀಡುತ್ತೇನೆ ಎಂಬ ಭರವಸೆ ನೀಡಿದ ಅವರು ಗುತ್ತಿಗೆದಾರರು ಕಾಮಗಾರಿಯನ್ನು ಗುಣ ಮಟ್ಟದಿಂದ ಮಾಡಿ ಕಾಮಗಾರಿಯ ಗಾಂಭಿರ್ಯತೆ ಉಳಿಸಬೇಕು ಇದಕ್ಕೆ ಪುರಸಭೆ ಅಧ್ಯಕ್ಷ ಮತ್ತು ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಪುರಸಭೆ ಸದಸ್ಯೆ ಜ್ಯೋತಿ ಸಂತೋಷ್ ಕುಮಾರ್, ಜಿಮ್ ರಾಜು ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಮಾನಿಕ್ ಭಾಷ, ಬಿ.ಕೆ.ಶಶಿಧರ್, ಎಲೆರವಿಕುಮಾರ್, ಲೋಕೇಶಪ್ಪ, ಆಶ್ರಯ ಕಮಿಟಿ ಸದಸ್ಯರಾದ ಬಿ.ಟಿ. ಚಂದ್ರಶೇಖರ್, ಮುಬಾರಕ್, ಪಿಡಬ್ಲೂಡಿ ಎಇಇ ವೈ.ಆರ್. ಬಸವರಾಜ್, ಎಇ ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಗುತ್ತಿಗೆದಾರ ವಿನಯ್ ಸೇರಿದಂತೆ ಸಾರ್ವಜನಿಕರು ಇದ್ದರು.
23 ಬೀರೂರು 1ಬೀರೂರು ಪಟ್ಟಣದ ಎಸ್.ಎಂ.ಕೃಷ್ಣ ಸಮುದಾಯ ಭವನದ ಮುಂಭಾಗ ಬುಧವಾರ ₹ 4ಕೋಟಿ ವೆಚ್ಚದ ರಸ್ತೆ ಅಗಲೀಕರಣ ಹಾಗೂ ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಅಧ್ಯಕ್ಷೆ ವನಿತಾ ಮಧು ಬಿ.ಕೆ.ಶಶಿಧರ್, ಪ್ರಕಾಶ್, ಮತ್ತಿತರಿದ್ದರು.