ವಿವಿಧ ಇಲಾಖೆಗಳಿಂದ ಅರ್ಹ 1526 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಉದ್ಘಾಟಿಸಿ
ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡವನ್ನು ರಾಜ್ಯದಲ್ಲೇ ಮಾದರಿಯಾಗಿ ನಿರ್ಮಾಣ ಮಾಡುತ್ತೇನೆ ಎಂದು ತರೀಕೆರೆ ಶಾಸಕ ಜಿ.ಎಚ್ ಶ್ರೀನಿವಾಸ್ ತಿಳಿಸಿದರು.
ಶೆಟ್ರು ಸಿದ್ದಪ್ಪ ಕ್ರೀಡಾಂಗಣದಲ್ಲಿ ಕಂದಾಯ ಗ್ರಾಮ, ಉಪ ಗ್ರಾಮ 94 ಸಿ ಪೋಡಿ ಮುಕ್ತ ಗ್ರಾಮ ಸ್ವಾಮಿತ್ವ ಯೋಜನೆ ಹಕ್ಕು ಪತ್ರ ದಾಖಲೆಗಳು ಹಾಗೂ ವಿವಿಧ ಇಲಾಖೆಗಳಿಂದ ಸಂಬಂಧ ಪಟ್ಟ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮವನ್ನು ನಗಾರಿ ಬಾರಿಸಿ ಉದ್ಘಾಟಿಸಿ ಮಾತನಾಡಿದರು.ಸೌರ ಪಂಪ್ಸೆಟ್ ಶೇ. 80 ರಿಯಾಯಿತಿ ದರದಲ್ಲಿ ರೈತರಿಗೆ ಕೊಡಲಾಗುತ್ತದೆ. ಸ್ವಸಹಾಯ ಸಂಘದ ಮಹಿಳೆಯರು ತಯಾರು ಮಾಡಿದ ವಸ್ತುಗಳನ್ನು ಇಲ್ಲಿ ಬಂದಿರುವ ಜನರು ಕೊಂಡುಕೊಂಡರೆ ಅವರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಉಪ ವಿಭಾಗಾಧಿಕಾರಿ ನಟೇಶ್ ಮಾತನಾಡಿ ಶಾಸಕರು ನಿಜವಾಗಲೂ ಕಂದಾಯ, ಗ್ರಾಮಗಳ, ಉಪ ಗ್ರಾಮಗಳ ವಿಸ್ತರಣಾ ಮಾಡಿದ ಮಹಾಜನನಾಯಕನೆಂದು ಬಣ್ಣಿಸಿದರು, ಬಗರ್ ಹುಕ್ಕಂ ಸಾಗುವಳಿ ಹಕ್ಕು ಪತ್ರ ಕೊಡುವ ಬಗ್ಗೆ ಸುಲಭ ಮಾರ್ಗದಲ್ಲಿ ಮಾಜರ್ ಮಾಡಿ ನೀಡಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಎಚ್ ಕೀರ್ತನ ಸಂವಿಧಾನ ಪೀಠಿಕೆ ವಾಚಿಸಿದರು. ಈ ಸಮಾರಂಭಕ್ಕೆ " ಸಾರ್ಥಕತೆ ಸಂಭ್ರಮದ ಆಚರಣೆ "ಎಂದು ಹೆಸರಿಟ್ಟರು. ಈ ಸಭೆಯಲ್ಲಿ ಎಂ.ಸಿ ಶಿವಾನಂದ ಸ್ವಾಮಿ ಜಿಲ್ಲಾ ಗ್ಯಾರಂಟಿ ಅಧ್ಯಕ್ಷರು ಮಾತನಾಡಿದರು.
1526 ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ಕಿಟ್ ಮತ್ತು ಸಾಮಗ್ರಿಗಳನ್ನು ವಿತರಿಸಿದ್ದರು.ತಾಲೂಕು ಗ್ಯಾರಂಟಿ ಅಧ್ಯಕ್ಷ ಎಮ್.ಜೆ ಕುಮಾರ್, ಪಟ್ಟಣ ಪಂಚಾಯತಿ ಅಧ್ಯಕ್ಷ ರೇವಣ್ಣ, ಸದಸ್ಯರಾದ ಆರ್ ಅಣ್ಣಪ್ಪ, ನಿಸಾರ್ ಅಹಮದ್, ಕೆಡಿಪಿ ಸದಸ್ಯ ಮಸೂದ್ ಅಹಮ್ಮದ್, ತೀರ್ಥ ಪ್ರಸಾದ್, ಸುಮಲತಾ ಮಲ್ಲಿಕಾರ್ಜುನ್, ಕೆಡಿಪಿ ಸದಸ್ಯ ರಾದ ಮಹೇಂದ್ರಚಾರ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ತಿಪ್ಪೇಶ್ ಮಡಿವಾಳ್, ಕೆಪಿಸಿಸಿ ಸದಸ್ಯ ಜಿ ನಟರಾಜ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಟಿ.ಜೆ ರಮೇಶ್ , ತಾಪಂ ಇಒಎಂ ಕೆ ವಿಜಯ್ ಕುಮಾರ್ ಭಾಗವಹಿಸಿದ್ದರು. ತಾಪಂ ವಿಜಯಕುಮಾರ್, ಬಗರ್ ಹುಕುಂ ಸದಸ್ಯ ಜೋಗಿ ಪ್ರಕಾಶ್ , ಶೃತಿ, ತಹಸೀಲ್ದಾರ್ ವಿನಾಯಕ್ ಸಾಗರ್ ಭಾಗವಹಿಸಿದ್ದರು..