ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾಮಗಾರಿಗೆ ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಭೂಮಿಪೂಜೆ ನೆರವೇರಿಸಿದರು.
ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಕುರುಗೋಡು
ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾಮಗಾರಿಗೆ ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ೨೫ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಕೆರೆ ಬಳಸಿಕೊಂಡು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ₹೯.೯೬ ಕೋಟಿ ಅನುದಾನದಲ್ಲಿ ನೂತನ ಬೃಹತ್ ಕೆರೆ ನಿರ್ಮಾಣ ಮಾಡಲಾಗುವುದು. ಸಿರಿಗೇರಿ, ಕೊಂಚಿಗೇರಿ, ಸಿದ್ದರಾಂಪುರ ಮತ್ತು ದಾಸಾಪುರ ಗ್ರಾಮಗಳ ಜನರಿಗೆ ಯೋಜನೆ ಸದುಪಯೋಗವಾಗಲಿದೆ ಎಂದರು.
ನಾಲ್ಕು ಗ್ರಾಮಗಳಲ್ಲಿ ನೀರು ಸರಬರಾಜು ಮಾಡಲು ಹೊಸ ಪೈಪ್ ಮಾರ್ಗ ಮತ್ತು ನೀರು ಸಂಗ್ರಹ ತೊಟ್ಟಿಗಳನ್ನು ನಿರ್ಮಾಣ ಮಾಡಲು ಹೆಚ್ಚುವರಿ ಅನುದಾನ ನೀಡಲಾಗುವುದು. ಸಿರಿಗೇರಿ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಕೆರೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಹುಲುಗಪ್ಪ, ಅಭಿವೃದ್ಧಿ ಅಧಿಕಾರಿ ಉಪ್ಪಾರು ರಾಮಪ್ಪ, ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗರುದ್ರಗೌಡ, ಉಪಾಧ್ಯಕ್ಷ ಎಸ್.ಎಂ. ನಾಗರಾಜ ಸ್ವಾಮಿ, ಮುಖಂಡರಾದ ಸಿ.ಎಂ. ನಾಗರಾಜ ಸ್ವಾಮಿ, ಎಸ್.ಎಂ. ಅಡಿವೆಯ್ಯ ಸ್ವಾಮಿ, ಕೆ.ಎಂ. ಮಲ್ಲಯ್ಯ, ಬಿ.ಸೋಮಶೇಖರಪ್ಪ, ಬಿ.ನಾಗೇಂದ್ರ, ವಿ.ರೇಣುಕಪ್ಪ, ಗರ್ಜಿಲಿಂಗಪ್ಪ, ಮುದುಕನಗೌಡ, ಸಣ್ಣ ವೀರನಗೌಡ, ವಿರೂಪಾಕ್ಷ ಮತ್ತು ಎ.ಕೆ. ಗಾದಿಲಿಂಗಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.