ಕನ್ನಡಪ್ರಭವಾರ್ತೆ ಹಾರನಹಳ್ಳಿ
ಈ ಎಲ್ಲಾ ಕಾರಣದಿಂದಾಗಿ ಇಲ್ಲಿನ ರೈತರು ಶಾಸಕ ಶಿವಲಿಂಗೇಗೌಡರಿಗೆ ಕೆರೆಯ ಹಿಂಭಾಗದಲ್ಲಿ ಜಮೀನಿಗೆ ಹೋಗುವುದಕ್ಕೆ ತೊಂದರೆಯಾಗಿದೆ. ರಸ್ತೆ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದ್ದು, ಈ ಮನವಿಗೆ ಸ್ಪಂದಿಸಿದ ಶಾಸಕರು, ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 80 ಲಕ್ಷ ರು.ಗಳ ಅನುದಾನ ಬಿಡುಗಡೆಗೊಳಿಸಿ ಹೊಸದಾಗಿ ರಸ್ತೆ ನಿರ್ಮಾಣದ ಕಾರ್ಯ ನಡೆಯುತ್ತಿದ್ದು, ಈಗಾಗಲೇ ರಸ್ತೆಯ ಕಾರ್ಯ ಮುಗಿದಿದೆ. ಗುಡ್ಡದಿಂದ ಕೆರೆಗೆ ಹಳ್ಳದ ನೀರು ಬರುವ ಭಾಗದಲ್ಲಿ ಸೇತುವೆ ನಿರ್ಮಾಣ ಕಾರ್ಯ ಮುಗಿದಿದೆ. ಮಳೆಗಾಲದಲ್ಲಿ ರೈತರಿಗೆ ಜಮೀನಿಗೆ ಹೋಗಲು ಅನುಕೂಲವಾಗಿದೆ. ಇದರಿಂದ ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹಾರನಹಳ್ಳಿ ಕೆರೆ ಹಿಂಭಾಗ ರಸ್ತೆ ಮಾಡಿದ್ದರಿಂದ ನಮ್ಮ ಜಮೀನುಗಳಿಗೆ ಹೋಗಲು ಸಹಕಾರಿಯಾಗಿದೆ. ಕೆರೆ ನೀರು ತುಂಬಿದಂಥ ಸಂದರ್ಭದಲ್ಲಿ ನಮ್ಮ ಜಮೀನಿಗೆ ಹೋಗುವುದು ಕಷ್ಟದ ಪರಿಸ್ಥಿತಿಯಾಗಿತ್ತು. ಈ ಬಗ್ಗೆ ಅನೇಕ ಪತ್ರಿಕೆಗಳು ನಮ್ಮ ಸಮಸ್ಯೆ ಯ ಬಗ್ಗೆ ಲೇಖನ ಸುದ್ದಿಯನ್ನು ಪ್ರಕಟಿಸಿದ್ದವು. ಇದರಿಂದ ರಸ್ತೆ ಆಗಿದೆ. ನಮ್ಮ ಅನೇಕ ವರ್ಷದ ಸಮಸ್ಯೆ ಯನ್ನು ಮನಗಂಡ ಸ್ಥಳೀಯ ಶಾಸಕ ಕೆಎಂ ಶಿವಲಿಂಗೇಗೌಡರು ರಸ್ತೆ ಗೆ 80 ಲಕ್ಷ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ಮಾಡಿಸಿದ್ದಾರೆ. ಈ ಭಾಗದ ರೈತರು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.