ಕನ್ನಡಪ್ರಭ ವಾರ್ತೆ ಕುಣಿಗಲ್
ಕುಣಿಗಲ್ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕೆಂಪೇಗೌಡರು ಹೋರಾಟ ಮನೋಭಾವದ ವ್ಯಕ್ತಿ ಆಗಿದ್ದರು. ಜನಪರ ಕಾಳಜಿ ಹಾಗೂ ಪ್ರತಿಯೊಬ್ಬರಲ್ಲೂ ಇದ್ದಂಥ ವಿಶ್ವಾಸ ಹಾಗೂ ಅವರ ಆಡಳಿತ ವೈಖರಿಯಿಂದ 500 ವರ್ಷ ಕಳೆದರೂ ಅವರನ್ನು ನಾವು ದೇವರಂತೆ ಪೂಜಿಸುತ್ತಾ ಬಂದಿದ್ದೇವೆ. ಅವರ ನಿಜವಾದ ತತ್ವ- ಸಿದ್ಧಾಂತಗಳು ಇಂದಿಗೂ ಕೂಡ ಜೀವಂತವಾಗಿವೆ ಎಂದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಬೆಂಗಳೂರನ್ನು ಅಂದು ನಿರ್ಮಾಣ ಮಾಡಲು ಅವರಲ್ಲಿದ್ದ ದೂರ ದೃಷ್ಟಿ ಹಾಗೂ ಬೃಹದಾಕಾರದ ಯೋಜನೆಗಳ ಅನುಷ್ಠಾನದ ಫಲವಾಗಿ ಎಲ್ಲಾ ಕೋಮಿನವರಿಗೂ, ಧರ್ಮದವರಿಗೂ, ಕುಶಲಕರ್ಮಿಗಳಿಗೂ ಪ್ರತ್ಯೇಕವಾದ ವ್ಯವಸ್ಥೆಯನ್ನು ಮತ್ತು ಮೂಲಭೂತ ಸೌಕರ್ಯವನ್ನು ಕಲ್ಪಿಸಿದ ಮಹಾಪುರುಷ ಕೆಂಪೇಗೌಡ ಎಂದರು.
ಇಂದು ಬೆಂಗಳೂರು ಕೆಂಪೇಗೌಡ, ಕುಣಿಗಲ್ ಕೆಂಪೇಗೌಡ, ಮಾಗಡಿ ಕೆಂಪೇಗೌಡ ಎಂಬ ಹಲವಾರು ನಾಮಗಳಿಂದ ಗುರುತಿಸಬಹುದು. ಆದರೆ ಕೆಂಪೇಗೌಡನ ವಂಶಸ್ಥರು ಮಾಡಿದ ಸಾಧನೆಯು ಕಟ್ಟಿದ ಕೋಟೆ, ನೀರಾವರಿ ವ್ಯವಸ್ಥೆ, ಚಟುವಟಿಕೆ ಎಲ್ಲವೂ ಕೂಡ ಇಂದಿನ ರಾಜಕಾರಣಿಗಳಿಗೆ ಮಾದರಿ ಆಗುತ್ತಿವೆ ಎಂದರು.
ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡರ ಮನೆಯ ಸೊಸೆ ನಿರ್ಮಿಸಿದ್ದ ಶೃಂಗಾರ ಸಾಗರ ಎಂಬ ಕೆರೆ ಹಾಗೂ ಕುಣಿಗಲ್ ಪಟ್ಟಣದ ಅಗ್ರಹಾರ ಎಂಬ ಬಡಾವಣೆಯನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಿದ ಮಹಾಪುರುಷರು. ತನ್ನ ತಂದೆ- ತಾಯಿಯಂತೆ ಅತ್ತೆ- ಸೊಸೆಗಳನ್ನು ಹಾಗೂ ಮಾವನನ್ನು ಕಾಣಬೇಕೆಂದು ಶಾಸನ ಬರೆಸಿದ್ದಾರೆ ಎಂದರು.
ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿಯವರಿಗೆ ಕೆಂಪೇಗೌಡರ ಭಾವಚಿತ್ರವುಳ್ಳ ರಥದ ಮೆರವಣಿಗೆ ಜೊತೆಗೆ ಹಲವಾರು ಶಾಲಾ ವಿದ್ಯಾರ್ಥಿಗಳು ಮತ್ತು ಕಲಾತಂಡಗಳು ಭಾಗವಹಿಸಿದ್ದವು.
ತಹಸೀಲ್ದಾರ್ ರಶ್ಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕಪನೀಪಾಳ್ಯ ರಮೇಶ್, ಭಾರತ ಜ್ಞಾನ ಅಭಿವೃದ್ಧಿ ಟ್ರಸ್ಟ್ ನ ತಲಕಾಡು ಚಿಕ್ಕ ರಂಗೇಗೌಡ, ಪುರಸಭಾ ಮುಖ್ಯ ಅಧಿಕಾರಿ ಮಂಜುಳಾ, ಅಧ್ಯಕ್ಷರಾದ ಮಂಜುಳಾ ನಾಗರಾಜ್ , ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.