ಕೆಂಪೇಗೌಡ ಜಯಂತಿ ಮೆರವಣಿಗೆಗೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Jun 28, 2025, 12:22 AM IST
27ಎಚ್ಎಸ್ಎನ್5 : ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆ. | Kannada Prabha

ಸಾರಾಂಶ

ಮೊದಲು ಬೆಳ್ಳಿ ಸಾರೋಟದಲ್ಲಿ ಇಡಲಾಗಿದ್ದ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿದರು. ನಂತರ ಡೋಲು ಬಾರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಇದೇ ವೇಳೆ ಕೇಂಪೆಗೌಡರ ವೇಷಧಾರಿ, ದೇವರ ವೇಷ ಧರಿಸಿದ ಯುವತಿಯರಿಂದ ಕುಣಿತ, ಬೆದರುಬೊಂಬೆ, ನಂದಿಕುಣಿತ, ಕೋಲಾಟ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಾಲು, ಡೋಲು ಬಾರಿಸುವುದು, ಡಿಜೆ ಸೌಂಡ್ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.

ಹಾಸನ: ನಾಡಪ್ರಭು ಕಂಪೇಗೌಡರ ಜಯಂತಿ ಅಂಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಆಕರ್ಷಕ ಮೆರವಣಿಗೆಗೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ, ಶಾಸಕ ಎಚ್.ಪಿ. ಸ್ವರೂಪ್, ಮಹಾನಗರ ಪಾಲಿಕೆಯ ಮಹಾಪೌರರಾದ ಎಂ. ಚಂದ್ರೇಗೌಡ, ಡಿಸಿ ಕೆ.ಎಸ್. ಲತಾಕುಮಾರಿ, ಸಿಇಒ ಬಿ.ಆರ್‌. ಪೂರ್ಣಿಮಾ ಹಾಗೂ ಇತರರು ಚಾಲನೆ ನೀಡಿದರು.

ಮೊದಲು ಬೆಳ್ಳಿ ಸಾರೋಟದಲ್ಲಿ ಇಡಲಾಗಿದ್ದ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿದರು. ನಂತರ ಡೋಲು ಬಾರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಇದೇ ವೇಳೆ ಕೇಂಪೆಗೌಡರ ವೇಷಧಾರಿ, ದೇವರ ವೇಷ ಧರಿಸಿದ ಯುವತಿಯರಿಂದ ಕುಣಿತ, ಬೆದರುಬೊಂಬೆ, ನಂದಿಕುಣಿತ, ಕೋಲಾಟ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಾಲು, ಡೋಲು ಬಾರಿಸುವುದು, ಡಿಜೆ ಸೌಂಡ್ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದ ನಂತರ ಬಿ.ಎಂ. ರಸ್ತೆ, ಎನ್.ಆರ್‌. ವೃತ್ತ, ಮಹಾವೀರ ವೃತ್ತದ ಮೂಲಕ ಹಾಸನಾಂಬ ಕಲಾಕ್ಷೇತ್ರದವರೆಗೂ ಮೆರವಣಿಗೆ ಸಾಗಿತು. ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್. ರಘುಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ಪಿ. ತಾರನಾಥ್, ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಎಂಸಿಇ ಕಾಲೇಜು ಕಾರ್ಯದರ್ಶಿ ಜಗದೀಶ್ ಚೌಡಹಳ್ಳಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಎಚ್. ವೇಣುಕುಮಾರ್, ಗಿರಿಗೌಡ, ಬಿದರಿಕೆರೆ ಜಯರಾಂ, ಲಯನ್ಸ್ ಕ್ಲಬ್ ಹಿರಿಯರು ಎಚ್.ಆರ್‌. ಚಂದ್ರೇಗೌಡ ಇತರರು ಭಾಗವಹಿಸಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!