ಕನ್ನಡಪ್ರಭ ವಾರ್ತೆ ತುರುವೇಕೆರೆ
ಹಲವಾರು ವರ್ಷಗಳಿಂದ ಈ ಗಂಗಾಧರ ನಗರಕ್ಕೆ ಮೂಲಭೂತ ಸೌಲಭ್ಯದ ಕೊರತೆ ಇತ್ತು. ಇದನ್ನು ಗಮನಿಸಿ ಕೆ ಆರ್ ಐ ಡಿ ಎಲ್ ನ ಭೂ ಸೇನಾ ಅಭಿವೃದ್ಧಿ ನಿಗಮದ ವತಿಯಿಂದ ಸುಮಾರು 50 ಲಕ್ಷ ರು. ಗಳ ಅನುದಾನವನ್ನು ತಂದು ಈ ನಗರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಈ ವೇಳೆ ಆನೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಭವ್ಯ, ಸದಸ್ಯರಾದ ಶ್ರೀನಿವಾಸ್, ರಾಮಕೃಷ್ಣ, ರಾಜಶೇಖರ್, ಬಸವರಾಜು, ಮುಖಂಡರಾದ ಹೊಸಳ್ಳಿ ದೇವರಾಜು, ತ್ಯಾಗರಾಜು, ಸೋಮೇನಹಳ್ಳಿ ಶಿವಾನಂದ್, ಮಲ್ಲಾಘಟ್ಟ ಆನಂದ್, ದೊಡ್ಡಾಘಟ್ಟ ದಯಾನಂದ್, ಭೂ ಸೇನಾ ಅಭಿವೃದ್ಧಿ ನಿಗಮದ ಜೂನಿಯರ್ ಇಂಜಿನಿಯರ್ ಗಿರೀಶ್ ಸೇರಿದಂತೆ ಹಲವು ಮುಖಂಡರು ಇದ್ದರು.