ಚಡಚಣದಲ್ಲಿ ಶೀಘ್ರ ನೌಕರರ ಭವನ ನಿರ್ಮಾಣ: ಮಜ್ಜಗಿ

KannadaprabhaNewsNetwork |  
Published : Apr 07, 2025, 12:36 AM IST
6ಸಿಡಿಎನ್01‌ ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಶನಿವಾರ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಪಟ್ಟಣದಲ್ಲಿ ಶೀಘ್ರ ಸುಸಜ್ಜಿತ ಸರ್ಕಾರಿ ನೌಕರರ ಭವನ ನಿರ್ಮಾಣ ಮಾಡಲಾಗುವದು ಎಂದು ತಾಲ್ಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಡಚಣ

ಪಟ್ಟಣದಲ್ಲಿ ಶೀಘ್ರ ಸುಸಜ್ಜಿತ ಸರ್ಕಾರಿ ನೌಕರರ ಭವನ ನಿರ್ಮಾಣ ಮಾಡಲಾಗುವದು ಎಂದು ತಾಲ್ಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ ತಿಳಿಸಿದರು.

ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 2025-29 ನೇ ಸಾಲಿಗೆ ಆಯ್ಕೆಯಾದ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನ ಎಲ್ಲ ಇಲಾಖೆಗಳ ನೌಕರರು ಅತ್ಯಂತ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟುವಂತ ಕಾರ್ಯ ಮಾಡುತ್ತಿದ್ದಾರೆ.ನಮ್ಮ ಸರ್ಕಾರಿ ನೌಕರರ ಮೂಲಭೂತ ಹಕ್ಕು ರಕ್ಷಣೆ ಮಾಡುವದು ಸಂಘದ ಜವಾಬ್ದಾರಿ. ಎನ್‌ಪಿಎಸ್ ತೊಲಗಿಸಿ ಒಪಿಎಸ್ ಜಾರಿಗೆ ಹೋರಾಟ ಮಾಡಲಾಗುವದು ಎಂದರು.ಶಿಕ್ಷಕರ ಸೊಸಾಯಿಟಿ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿ, ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳು ನೌಕರರ ಸೇವಕರಾಗಿ ಕಾರ್ಯ ನಿರ್ವಹಿಸಬೇಕು. ಸಂಘದ ಅಧ್ಯಕ್ಷ ಬಸವರಾಜ್ ಮಜ್ಜಗಿ ನೇತೃತ್ವದಲ್ಲಿ ಸಂಘವು ಅತ್ಯಂತ ಸದೃಢವಾಗಿ ಬೆಳೆಯುತ್ತಿದ್ದು, ಶೀಘ್ರ ತಾಲೂಕು ಕೇಂದ್ರದಲ್ಲಿ ನೂತನ ನಿವೇಶನ ಪಡೆದು ಸುಸಜ್ಜಿತ ನೌಕರರ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್.ಸೋನಗಿ, ಕಾರ್ಯದರ್ಶಿ ಐ.ಎಮ್.ಬೆದ್ರೇಕರ, ಸಂಘದ ಉಪಾಧ್ಯಕ್ಷ ಎಸ್.ಬಿ.ಪಾಟೀಲ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಸಿ.ಉಮ್ರಾಣಿ, ಉಪ ತಹಸಿಲ್ದಾರ್ ರವಿಕುಮಾರ್ ಚವ್ಹಾಣ, ನೌಕರರ ಸಂಘದ ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಖಜಾಂಚಿ ವಿಠ್ಠಲ ಕೋಳಿ ಹಾಗೂ ನಿರ್ದೇಶಕರು, ನೌಕರರು ಉಪಸ್ಥಿತರಿದ್ದರು.

ಶಿಕ್ಷಕ ಸುನೀಲ ಯಳಮೇಲಿ ಸ್ವಾಗತಿಸಿದರು. ಸತೀಶ್ ಬಗಲಿ ವಂದಿಸಿದರು. ಗುರು ಜೇವೂರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!