ಶೀಘ್ರವೇ ಐಟಿಐ, ಡಿಪ್ಲೋಮಾ ಕಾಲೇಜು

KannadaprabhaNewsNetwork |  
Published : Jul 31, 2024, 01:04 AM IST
ಫೋಟೋ 29ಪಿವಿಡಿ4ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಸಮಾರಂಭವನ್ನು ಶಾಸಕ ಎಚ್‌.ವಿ.ವೆಂಕಟೇಶ್‌ ಉದ್ಘಾಟಿಸಿದರು.ಫೋಟೋ 29ಪಿವಿಡಿ5ಸಮಾರಂದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಆಂಕಗಳಿಸಿದ್ದ 50ಕ್ಕಿಂತ ಹೆಚ್ಚು ತಾ,ವಿದ್ಯಾರ್ಥಿಗಳಿಗೆ ಶಾಸಕ ಎಚ್‌.ವಿ.ವೆಂಕಟೇಶ್‌ ಪ್ರತಿಭಾಪುರಸ್ಕಾರ ವಿತರಿಸಿ ಗೌರವಿಸಿದರು. | Kannada Prabha

ಸಾರಾಂಶ

ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳ ಸ್ಥಾಪನೆಗೆ ಈಗಾಗಲೇ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪ್ರಸ್ತಾವನೆ

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳ ಉದ್ಯೋಗ ಸೃಷ್ಟಿ ಹಿನ್ನೆಲೆಯಲ್ಲಿ ಶೀಘ್ರ ನಗರದ ಹೊರವಲಯದಲ್ಲಿ ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳ ಸ್ಥಾಪನೆಗೆ ಈಗಾಗಲೇ ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಎಚ್‌.ವಿ. ವೆಂಕಟೇಶ್‌ ಹೇಳಿದರು.

ಅವರು ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಡಾ.ಅಬ್ದುಲ್ ಕಲಾಂ ಮಹಾ ವೇದಿಕೆಯ ವತಿಯಿಂದ ಸೋಮವಾರ ಪಟ್ಟಣದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಕಾಣಬೇಕು.ಈ ಹಿನ್ನಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ.ಈಗಾಗಲೇ ಶಾಲಾ ಕಾಲೇಜು ಕೊಠಡಿ ನಿರ್ಮಾಣ ಇತರೆ ಪ್ರಗತಿ ಕಾರ್ಯಗಳಿಗೆ ವಿವಿಧ ಯೋಜನೆಯ ಕೋಟ್ಯಂತರ ರು ಹಣ ವಿನಿಯೋಗಿಸಲಾಗಿದೆ ಎಂದರು.

ತಾಲೂಕಿನ ಯುವಕರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ತಾಂತ್ರಿಕ, ಐಟಿಐ ಹಾಗೂ ಡಿಪ್ಲೋಮಾ ಕಾಲೇಜು ತೆರೆಯಲು ಉದ್ದೇಶಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಮಂಜೂರಾತಿ ಕಲ್ಪಿಸುವ ಭರವಸೆ ವ್ಯಕ್ತವಾಗಿದೆ ಎಂದರು. ಮರಿದಾಸನಹಳ್ಳಿ ಸಿ.ಕೆ.ಪುರ ಹಾಗೂ ನಗರದ ಬಿಸಿಎಂ ಹಾಸ್ಟಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.ಸುಸಜ್ಜಿತ ಹಾಸ್ಚಲ್ ವ್ಯವಸ್ಥೆಯಿದ್ದು ವಿದ್ಯಾರ್ಥಿನಿಲಯಗಳ ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು.

ನಿಮ್ಮೆಲ್ಲರ ಸಹಕಾರದ ಮೇರೆಗೆ,ತಂದೆ ಮಾಜಿ ಸಚಿವರಾದ ವೆಂಕಟರಮಣಪ್ಪ ಶಾಸಕರ ಅವಧಿಯಲ್ಲಿ ಅನೇಕ ರೀತಿಯ ಕಾಮಗಾರಿ ಅನುಷ್ಠಾನವಾಗಿದ್ದು ಈಗ ಪ್ರಗತಿ ಕಾಮಗಾರಿಗಳ ಉದ್ಘಾಟನೆ ನೆರೆವೇರಿಸುವ ಸೌಲಭ್ಯ ಸಿಕ್ಕಿದೆ. ಇದು ನನ್ನ ಪೂಣ್ಯ. ಮೊನ್ನೆ ಕೇಂದ್ರ ರೈಲ್ವೆ ಸಚಿವರು ಆಗಮಸಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ತಾಲೂಕಿನಲ್ಲಿ ಕೋವಿಡ್‌ ವ್ಯಾಪಿಸಿಕೊಂಡಿದ್ದ ವೇಳೆ ಅದನ್ನು ಲೆಕ್ಕಿಸದೇ ಕಾಮಗಾರಿ ನಿರ್ವಹಿಸಿದ ಹಿನ್ನಲೆಯಲ್ಲಿ ಈಗಾಗಲೇ ನಾಗಲಾಪುರ ಗಡಿಯಿಂದ ಕೆ.ರಾಮಪುರದವರೆವಿಗೆ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಉಳಿಕೆ ರೈಲ್ವೆ ಮಾರ್ಗದ ಕಾಮಗಾರಿ ಪ್ರಾರಂಭಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಶೀಘ್ರ ಕಾಮಗಾರಿ ಮುಗಿಸಿ ಇನ್ನೂ ಎರಡು ವರ್ಷದೊಳಗೆ ತುಮಕೂರು ರಾಯದುರ್ಗ ಮಾರ್ಗದ ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರುವುದಾಗಿ ಹೇಳಿದರು.

ಈ ವೇಳೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಮ್ಮ, ಪ್ರಾಧ್ಯಾಪಕ ಅನಿಲ್‌ಕುಮಾರ್‌ ಇಕ್ಬಾಲ್‌, ಸುದೇಶ್‌ಬಾಬು ಮಹಮ್ಮದ್‌ ಫಜುಲುಲ್ಲಾ, ಅನ್ವರ್‌ಸಾಬ್‌, ವೆಂಕಟಮ್ಮನಹಳ್ಳಿ ನಾಗೇಂದ್ರರಾವ್‌, ಮಾಜಿ ಅಧ್ಯಕ್ಷ ವೇಲುರಾಜು, ಮೈಲಪ್ಪ, ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಎ.ಶಂಕರರೆಡ್ಡಿ, ತೆಂಗಿನಕಾಯಿ ರವಿ, ಪಿ.ಎಚ್‌.ರಾಜೇಶ್‌, ಆರ್‌.ಎ.ಹನುಮಂತರಾಯಪ್ಪ, ಮಹಮ್ಮದ್‌ ಇರ್ಮಾನ್‌, ಬಾಲಸುಬ್ರಮಣ್ಯಂ, ರಿಜ್ವಾನ್‌, ಅನಿಲ್ ಅಂಡೆ, ಸ್ಟುಡಿಯೋ ಅಮರ್‌ ಇತರೆ ಆನೇಕ ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು
ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ