ನಂದಗುಡಿಯಲ್ಲಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣ: ಶಾಸಕ ಶರತ್‌ ಬಚ್ಚೇಗೌಡ

KannadaprabhaNewsNetwork |  
Published : Aug 14, 2024, 01:04 AM IST
ಫೋಟೋ : 12 ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ನಂದಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ನಂದಗುಡಿ ಪ್ರಾಥಮಿಕ ಶಾಲೆ ಆವರಣದಲ್ಲಿಯೇ 40 ಲಕ್ಷ ರು. ಅನುದಾನದಲ್ಲಿ ರಾಜ್ಯಕ್ಕೇ ಮಾದರಿ ಕೇಂದ್ರ ನಿರ್ಮಿಸಲಾಗುವುದು. ಪ್ರತ್ಯೇಕ ಮಕ್ಕಳ ಕಲಿಕಾ ಕೇಂದ್ರ, ತಾಯಂದಿಯರ ಹಾರೈಕೆ, ಆಹಾರ ವಿತರಣಾ ಕೇಂದ್ರ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳು ಒಂದೇ ಕಟ್ಟಡದಲ್ಲಿ ಲಭ್ಯವಿರುತ್ತದೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ತಾಲೂಕಿನ ನಂದಗುಡಿ ಗ್ರಾಮದಲ್ಲಿ ರಾಜ್ಯದಲ್ಲಿಯೇ ಪ್ರಥಮ ಮಾದರಿ ಅಂಗನವಾಡಿ ಕೇಂದ್ರವನ್ನು ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಛೇಗೌಡ ತಿಳಿಸಿದರು.

ಯುನೈಟೆಡ್ ವೇ ಕಂಪನಿ ಹಾಗೂ ನೆಕ್ಸ್ ಜೆನ್ ಕಂಪನಿಗಳ ಸಿಎಸ್ ಆರ್ ಅನುದಾನದಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಂದಗುಡಿ ಪ್ರಾಥಮಿಕ ಶಾಲೆ ಆವರಣದಲ್ಲಿಯೇ 40 ಲಕ್ಷ ರು. ಅನುದಾನದಲ್ಲಿ ರಾಜ್ಯಕ್ಕೇ ಮಾದರಿ ಕೇಂದ್ರ ನಿರ್ಮಿಸಲಾಗುವುದು. ಪ್ರತ್ಯೇಕ ಮಕ್ಕಳ ಕಲಿಕಾ ಕೇಂದ್ರ, ತಾಯಂದಿಯರ ಹಾರೈಕೆ, ಆಹಾರ ವಿತರಣಾ ಕೇಂದ್ರ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳು ಒಂದೇ ಕಟ್ಟಡದಲ್ಲಿ ಲಭ್ಯವಿರುತ್ತದೆ ಎಂದರು.

ಯುನೈಟೆಡ್ ವೇ ಕಂಪನಿ ಉಪಾಧ್ಯಕ್ಷ ವೆಂಕಟ ಸುಧಾಕರ್ ಮಾತನಾಡಿ, ಖಾಸಗಿ ಕಂಪನಿ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಮುಂದಾಗಿದ್ದೇವೆ. ಶಿಕ್ಷಣದಲ್ಲಿಯೂ ಸುಧಾರಣೆ ಕಾಣಬೇಕೆಂಬುದೇ ನಮ್ಮ ಉದ್ದೇಶ ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್ ಗೌಡ, ಮಾಜಿ ತಾಪಂ ಸದಸ್ಯರಾದ ಕೆಂಚೇಗೌಡ, ಭೀರಪ್ಪ, ಯುನೈಟೆಡ್ ವೇ ಕಂಪನಿ ವ್ಯವಸ್ಥಾಪಕಿ ಭಾಗ್ಯ ಕುಮಾರ್, ಸಿಡಿಪಿಒ ಶಿವಮ್ಮ, ದಾನಿಗಳಾದ ಮಲಿಯಪ್ಪನಹಳ್ಳಿ ಮಹದೇವಪ್ಪ, ಎಸ್‌ಎಫ್‌ಸಿಎಸ್ ನಿರ್ದೇಶಕ ರವೀಂದ್ರ, ಎಪಿಎಂಎಸಿ ಮಾಜಿ ಅಧ್ಯಕ್ಷ ಧರ್ಮೇಶ್, ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮ್ಮ, ಮಂದೀಪ್ ಗೌಡ, ರಮೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ