ಜನಾಭಿಪ್ರಾಯದಡಿ ಪ್ರಜಾಸೌಧ ನಿರ್ಮಾಣ: ಎಸಿ ಶ್ವೇತಾ ಬೀಡಿಕರ

KannadaprabhaNewsNetwork |  
Published : Dec 05, 2025, 02:45 AM IST
ಜನಾಭಿಪ್ರಾಯದಡಿ ಪ್ರಜಾಸೌಧ ನಿರ್ಮಾಣ : ಶ್ವೇತಾ ಬೀಡಿಕರ. | Kannada Prabha

ಸಾರಾಂಶ

ಜಿಲ್ಲಾಡಳಿತ ಪ್ರಜಾಸೌಧ ನಿರ್ಮಾಣದ ಕುರಿತು ಸ್ಥಳಾವಕಾಶ ಗುರುತಿಸುವ ಕುರಿತು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸ್ಥಳಗಳನ್ನು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದಿಢೀರ ಬೆಳವಣಿಗೆಯೊಂದರಲ್ಲಿ ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಜಾಸೌಧ ನಿರ್ಮಾಣದ ಕನಸು ಹತ್ತಿರವಾಗುತ್ತಿದ್ದಂತೆ ಕಾಣುತ್ತಿದೆ. ಶೀಘ್ರದಲ್ಲೇ ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಜಾಸೌಧ ನಿರ್ಮಾಣದ ಪ್ರಶಸ್ತವಾದ ಜಾಗಕ್ಕೆಂದು ಮೂರ್ನಾಲ್ಕು ಹೆಸರುಗಳನ್ನು ಸೂಚಿಸಲಾಗಿದ್ದು, ಸಾರ್ವಜನಿಕರು ಸಹಕಾರ ತೋರುವ ಕಡೆ ನಿರ್ಮಾಣ ಆಗುವ ಸಾಧ್ಯತೆ ಇದೆ.

ಗುರುವಾರ ಜಿಲ್ಲಾಡಳಿತ ಪ್ರಜಾಸೌಧ ನಿರ್ಮಾಣದ ಕುರಿತು ಸ್ಥಳಾವಕಾಶಕ್ಕೆ ವೇಗ ನೀಡಿದಂತಾಗಿದೆ. ಅದರ ಭಾಗವಾಗಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಇಲ್ಲಿಗೆ ಆಗಮಿಸಿ, ಸ್ಥಳಗಳನ್ನು ಪರಿಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿಗೆ ಸಂಬಂಧಿಸಿದ ಪ್ರಜಾಸೌಧ ನಿರ್ಮಾಣಕ್ಕೆ ರಬಕವಿ ಜಿಎಲ್‌ಬಿಸಿ, ಮದನಮಟ್ಟಿ ಪುನರ್ವಸತಿ ಕೇಂದ್ರ, ಮದನಮಟ್ಟಿ ಹತ್ತಿರದ ಕಂದಾಯ ಭೂಮಿ ಹಾಗೂ ಬನಹಟ್ಟಿಯ ನೂಲಿನ ಗಿರಣಿ ಹತ್ತಿರ ಸೇರಿದಂತೆ ಒಟ್ಟು ೪ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದರು.

ಇವೆಲ್ಲದರ ಕುರಿತು ಜನಾಭಿಪ್ರಾಯ ಸಂಗ್ರಹದೊಂದಿಗೆ ಸೂಕ್ತ ಜಾಗ ನಿಗದಿಪಡಿಸಲು ಸಹಾಯ, ಸಹಕಾರ ಅಗತ್ಯವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಶೀಘ್ರವೇ ಕಾರ್ಯಾಲಯ ಕಾಮಗಾರಿಗೆ ಹಸಿರು ನಿಶಾನೆ ತೋರಲಾಗುವುದು ಎಂದು ಸ್ಪಷ್ಟಪಡಿಸಿದರು. ಒಂದೂವರೆ ವರ್ಷದಿಂದ ಪ್ರಜಾಸೌಧ ನಿರ್ಮಾಣಕ್ಕೆಂದು ₹8.6 ಕೋಟಿಗಳಷ್ಟು ವೆಚ್ಚದಲ್ಲಿ ಅನುಮತಿಯಿದೆ. ಸೂಕ್ತ ಜಾಗ ಹಾಗೂ ಸಾರ್ವಜನಿಕರ ಸಮರ್ಪಕ ವಿಳಂಬವಾಗುತ್ತಿದೆ. ಇವೆಲ್ಲದಕ್ಕೂ ತಿಲಾಂಜಲಿ ಇಟ್ಟು, ಸೂಕ್ತ ಸ್ಥಳದಲ್ಲಿ ಮತ್ತು ತ್ವರಿತವಾಗಿ ಪ್ರಜಾಸೌಧ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಲಿದೆ ಎಂದರು.

ಅಧಿಕಾರಿಗಳ ಸಹಕಾರವಿದೆ:ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕು ಕೇಂದ್ರಗಳು ಪ್ರತ್ಯೇಕವಾಗಿರಬಹುದು. ಈ ಭಾಗದ ಜನತೆಗೆ ಸರ್ಕಾರಿ ಇಲಾಖೆಗಳಿಂದ ಅಸಹಕಾರ ದೊರಕುತ್ತಿದೆಯೆಂಬ ಆರೋಪ ಸುಳ್ಳು ಎಂದ ಅವರು, ಯಾವುದೇ ಇಲಾಖೆಗೆ ತೆರಳಿದರೂ ಸುಲಭವಾಗಿ ಕಟ್ಟಕಡೆಯ ಜನರ ಸೇವೆ ಒದಗಿಸುವಲ್ಲಿ ಯಾವುದೇ ತಾರತಮ್ಯವಾಗುತ್ತಿಲ್ಲ. ಈ ಕುರಿತು ನಾನೂ ಸ್ವತಃ ಆಯಾ ಇಲಾಖೆಗಳ ಅಧಿಕಾರಿಗಳೊಂದಿಗೆ ಮಾತನಾಡಿ ಸ್ಪಂದಿಸುವತ್ತ ಕ್ರಮ ಜರುಗಿಸುವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಗಿರೀಶ ಸ್ವಾದಿ, ಮಂಗಳವಾರ ಪೇಟ ದೈವ ಮಂಡಳಿ ಹಾಗೂ ಸೋಮವಾರಪೇಟ ದೈವಮಂಡಳಿಯ ಶ್ರೀಶೈಲ ದಬಾಡಿ, ಮಲ್ಲಿಕಾರ್ಜುನ ತುಂಗಳ, ಶಂಕರ ಸೊರಗಾಂವಿ, ಭೀಮಶಿ ಮಗದುಮ್, ಮಲ್ಲಿಕಾರ್ಜುನ ಬಾಣಕಾರ, ರಾಜೇಂದ್ರ ಭದ್ರನ್ನವರ, ಶ್ರೀಶೈಲ ಬೀಳಗಿ, ಶ್ರೀಶೈಲ ಯಾದವಾಡ, ಪ್ರವೀಣ ದಬಾಡಿ, ಬಾಳು ಗಣೇಶನವರ ಸೇರಿದಂತೆ ಪ್ರಮುಖರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾಪ್ರತಿಭಟನೆ
ಐಪಿಎಲ್ ಸೀಜನ್-೮ರ ಪ್ರೀಮಿಯರ್‌ ಕ್ರಿಕೆಟ್‌ ಲೀಗ್‌ ಗೆ ನಾಳೆ ಚಾಲನೆ