ಮಂಗಳೂರು: ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದ ಕ್ರಿಮಿನಾಲಜಿ ಮತ್ತು ನ್ಯಾಯ ವಿಜ್ಞಾನ (Forensic Science) ಸ್ನಾತಕೋತ್ತರ ವಿಭಾಗದ ವತಿಯಿಂದ ‘CRIFO 2K26 - ಫೋರೆನ್ಸಿಕ್ ಫ್ಯೂಷನ್’ ಎಂಬ ಎರಡು ದಿನಗಳ ಅಂತರಾಷ್ಟ್ರೀಯ ಸಮಾವೇಶವನ್ನು ಮಾರ್ಚ್ 17 ಮತ್ತು 18 ರಂದು ಕಾಲೇಜಿನ ಮರಿಯಾ ಪೈವಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಅಪರಾಧ ತನಿಖೆ ಮತ್ತು ನ್ಯಾಯ ವಿಜ್ಞಾನ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳ ಬಗ್ಗೆ ಚರ್ಚಿಸಲು ಈ ಸಮಾವೇಶ ಒಂದು ಜಾಗತಿಕ ವೇದಿಕೆಯನ್ನು ಒದಗಿಸಲಿದೆ. ದೇಶ-ವಿದೇಶಗಳ ಖ್ಯಾತ ತಜ್ಞರು ವಿವಿಧ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಫೋರೆನ್ಸಿಕ್ ಮತ್ತು ಫೋರೆನ್ಸಿಕ್ ಟಾಕ್ಸಿಕಾಲಜಿ ಕುರಿತು ವಿಶೇಷ ಉಪನ್ಯಾಸಗಳು, ನ್ಯಾಯ ವಿಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆ, ಥೀಮ್ಯಾಟಿಕ್ ರೀಲ್ ಮೇಕಿಂಗ್, ಸ್ಟ್ರೆಸ್ ಇಂಟರ್‌ವ್ಯೂ ಮತ್ತು ಚರ್ಚಾ ಸ್ಪರ್ಧೆಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಂದ ವಿವಿಧ ತಾಂತ್ರಿಕ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳ ಮಂಡನೆ ಇರಲಿದೆ.ನೋಂದಣಿ ಮಾಡಿಕೊಳ್ಳಲು ಮಾರ್ಚ್ 13, 2026 ಕೊನೆಯ ದಿನ. ಸಮಾವೇಶದಲ್ಲಿ ಭಾಗವಹಿಸುವ ಎಲ್ಲ ಪ್ರತಿನಿಧಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಹಾಗೂ ಕಾರ್ಯಕ್ರಮದ ದಿನಗಳಂದು ಊಟ ಮತ್ತು ಉಪಹಾರದ ವ್ಯವಸ್ಥೆ ಇರಲಿದೆ.

ಕಾಲೇಜಿನ ಪ್ರಾಂಶುಪಾಲೆ ಡಾ. ಸೋಫಿಯಾ ಎನ್. ಫರ್ನಾಂಡಿಸ್ ಮತ್ತು ಸಂಯೋಜಕಿ ಡಾ. ಸರಿತಾ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9743633882 ಅಥವಾ 8217294693 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.