ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೈಲ್ವೆ ಇಲಾಖೆಗೆ ಮೊದಲ ಆದ್ಯತೆ
ಪ್ರಧಾನಿ ಮೋದಿರವರು ದೇಶದ ಅಭಿವೃದ್ಧಿಯಲ್ಲಿ ಮೊದಲನೇ ಪಾಲನ್ನು ರೈಲ್ವೆ ಇಲಾಖೆಗೆ ನೀಡಿದ್ದಾರೆ, ದೇಶ ಪ್ರಗತಿಯಾದರೆ ಎಲ್ಲ ವರ್ಗ ಜನರೂ ಪ್ರಗತಿ ಕಾಣಬಹುದೆಂಬ ಅಭಿಲಾಷೆ ಪ್ರಧಾನಿ ಅವರದ್ದಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯನ್ನು ಮತ್ತಷ್ಟು ಅಭಿವೃದ್ದಿಗೊಳಿಸಲು ಪ್ರಧಾನಿ ಉತ್ಸುಕರಾಗಿದ್ದಾರೆ, ಅವರ ಆಶಯದಂತೆ ನಾವು ಶ್ರಮಿಸಬೇಕು, ಎಲ್ಲಿ ಅಗತ್ಯವಿದೆಯೋ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.ಕಾಮಸಮುದ್ರ ಗ್ರಾಮದ ಬಳಿ ಹತ್ತು ನಿಮಿಷಕ್ಕೊಂದು ರೈಲು ಸಂಚಾರವಾಗುವುದರಿಂದ ಅಲ್ಲಿ ಗೇಟ್ ಹಾಕುವುದರಿಂದ ವಾಹನ ಸವಾರರರಿಗೆ ತೊಂದರೆಯಾಗುತ್ತಿದೆ ಎಂದು ಸಂಸದ ಮಲ್ಲೇಶಬಾಬು ಈಗಾಗಲೇ ಮನವಿ ಸಲ್ಲಿಸಿದ್ದು ಅಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಕಾರಿ ಆರಂಭಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸುದರು.ಭಾರತ್ ರೈಲು ನಿಲುಗಡೆಗೆ ಕ್ರಮ
ಇದಲ್ಲದೆ ಒಂದೇ ಭಾರತ್ ರೈಲನ್ನು ಪಟ್ಟಣದಲ್ಲಿ ನಿಲುಗಡೆಗೂ ಮನವಿ ಬಂದಿದ್ದು ಅದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮವಹಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ಪಟ್ಟಣದಲ್ಲಿ ನಿರ್ಮಾಣವಾಗಿರುವ ಎರಡನೇ ಟಿಕೆಟ್ ಬುಕ್ಕಿಂಗ್ ಕೌಂಟರ್ ಕಾಮಗಾರಿಯನ್ನು ಅಧಿಕಾರಿಗಳು ಉತ್ತಮವಾಗಿ ಮಾಡಿಸಿದ್ದಾರೆಂದು ಅಭಿನಂದಿಸಿದರು.ಕಾಂಗ್ರೆಸ್‌ನಿಂದ ಸಚಿವರಿಗೆ ಮನವಿಬೆಂಗಳೂರು ಹೊರತುಪಡಿಸಿದರೆ ಬಂಗಾರಪೇಟೆ ಅತಿ ದೊಡ್ಡ ರೈಲು ನಿಲ್ದಾಣವಾಗಿದೆ ಹಾಗೂ ಆದಾಯದಲ್ಲೂ ಎರಡನೇ ಸ್ಥಾನ ಪಡೆದಿದೆ, ಆದರೆ ಇಲ್ಲಿಂದ ನೇರವಾಗಿ ಬೆಂಗಳೂರಿಗೆ ರೈಲು ಸಂಪರ್ಕವಿಲ್ಲ. ತಮಿಳುನಾಡು, ಕೇರಳ, ಆಂಧ್ರದಿಂದ ಬರುವ ರೈಲುಗಳಲ್ಲೇ ಪ್ರಯಾಣಕರು ಪ್ರಯಾಣಿಸಬೇಕಿದೆ. ಇಲ್ಲಿಂದ ನಿತ್ಯ ೨೫ ಸಾವಿರ ಜನರು ಬೆಂಗಳೂರಿಗೆ ಪ್ರಯಾಣ ಮಾಡುರು ಅವರಿಗೆ ಸ್ಥಳಾವಕಾಶ ಕೊರತೆ ಇದೆ ಆದ್ದರಿಂದ ಪಟ್ಟಣದಿಂದಲೇ ನೇರ ರೈಲುಗಳನ್ನು ಆರಂಭಿಸಬೇಕು ಎಂದು ಕೋರಿ ಸಚಿವರಿಗೆ ಕಾಂಗ್ರೆಸ್‌ನ ಎಸ್.ಎನ್.ಪಾರ್ಥಸಾರಥಿ, ಅ.ನಾ.ಹರೀಶ್,ಶಂಷುದ್ದಿನ್ ಬಾಬು ಮನವಿ ಸಲ್ಲಿಸಿದರು.
ಒಂದೇ ಭಾರತ್ ಹಾಗೂ ಶತಾಬ್ಧಿ ರೈಲನ್ನು ಇಲ್ಲಿ ನಿಲುಗಡೆ ಮಾಡಬೇಕು, ಕಾಮಸಮುದ್ರ, ದೇಶಿಹಳ್ಳಿ, ಕೋಲಾರ ಮುಖ್ಯರಸ್ತೆಯ ಎಸ್.ಎನ್.ರೆಸಾರ್ಟ್ ಬಳಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು, ಬೂದಿಕೋಟೆ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿದ್ದು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕೆಂದು ಮನವಿ ಮಾಡಿದರು.ಈ ವೇಳೆ ಸಂಸದ ಎಂ.ಮಲ್ಲೇಶಬಾಬು, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿ.ವಿ.ಮಹೇಶ್, ಶಾಂತಿನಗರ ಮಂಜುನಾಥ್, ಕಪಾಲಿ ಶಂಕರ್, ಸಂಪಂಗಿರೆಡ್ಡಿ, ನಾಗೇಶ್, ಸೀತಾರಾಮಪ್ಪ, ಬಾಲಚಂದ್ರ, ಬಾಲಕೃಷ್ಣೇಗೌಡ ಇತರರು ಇದ್ದರು.