ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ, ಶ್ರೀಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜ ಮತ್ತು ಯುವ ಮಂಡಳಿ ಇವರ ವತಿಯಿಂದ ನಗರದ ಮಹಾವೀರ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೈನ ಸಮುದಾಯಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ ಜೈನ ಸಮುದಾಯದವರು ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.ಜೈನ ಸಮುದಾಯದವರು ಸರಳ ಮತ್ತು ಸಾಮೂಹಿಕ ವಿವಾಹ ಮಾಡಿಕೊಳ್ಳುವ ಜೋಡಿಗಳಿಗೆ ೫೦ ಸಾವಿರ ರು. ಪ್ರೋತ್ಸಾಹ ದನ ನೀಡುತ್ತಿದೆ. ಇದನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಒಂದನೇ ತರಗತಿಯಿಂದ ಪಿಎಚ್.ಡಿ ವರೆಗಿನ ವಿದ್ಯಾಭ್ಯಾಸ ಮಾಡುವುದಕ್ಕೆ ವಿದ್ಯಾರ್ಥಿ ವೇತನ ಹಾಗೂ ವಿದೇಶಗಳಿಗೆ ತೆರಳಿ ಅಧ್ಯಯನ ಮಾಡಲು ಸಹಾಯಧನ ನೀಡುತ್ತಿದೆ ಎಂದು ವಿವರಿಸಿದರು.
ಕನ್ನಡ ಸಾಹಿತ್ಯಕ್ಕೆ ಜೈನ ಸಮುದಾಯದಕೊಡುಗೆ ಅಪಾರವಾಗಿದೆ. ಸಾಹಿತ್ಯ ಕ್ಷೇತ್ರದ ತ್ರಿವಳಿ ರತ್ನಗಳಾದ ರನ್ನ, ಪೊನ್ನ, ಪಂಪ ಇವರ ಕೊಡುಗೆಗಳು ಸಹ ಅಮೂಲ್ಯವಾದದ್ದು. ಜೈನ ಧರ್ಮದಲ್ಲಿ ತುಂಬಾ ಕಟ್ಟುಪಾಡುಗಳನ್ನು ಕಾಣಬಹುದಾಗಿದೆ. ಜೈನ ಮುನಿಗಳು ಬಂದಾಗ ಅವರಿಗೆ ಆಹಾರ ನೀಡಲು ಪೈಪೋಟಿ ಇರುವುದನ್ನು ಸಹ ಕಂಡಿದ್ದೇನೆ. ಈಗಿನ ಕಾಲದಲ್ಲೂ ಹಿರಿಯರು ಹಾಕಿಕೊಟ್ಟ ಕಟ್ಟುಪಾಡುಗಳನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.