ಕ್ಯಾಲನೂರು ಕ್ರಾಸ್‌ನಲ್ಲಿ ಘಟನೆ । ಸೂಲಿಬೆಲೆ ಹೋಬಳಿಯ ಕಸಾಯಿಖಾನೆಗೆ ಸಾಗಾಟ
ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕ್ಯಾಲನೂರು ಕ್ರಾಸ್‌ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮೂರು ಹಸುಗಳು ಮೃತಪಟ್ಟಿವೆ.
ಅ.೨೨ರಂದು ತೆಲಂಗಾಣದಿಂದ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿಯ ಕಸಾಯಿಖಾನೆಗೆ ೨೪ರಿಂದ ೨೮ ಗೋವುಗಳನ್ನು ಸಾಗಿಸುತ್ತಿದ್ದ ಬೆಂಗಳೂರು ಮೂಲದ ಕಂಟೈನರ್, ಕ್ಯಾಲನೂರು ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿಸುವಾಗ ವೇಗದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬ, ಅಂಗಡಿಗಳತ್ತ ಪಲ್ಟಿ ಹೊಡೆದಿದೆ.ಮೂರು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಒಂದರ ಕೊಂಬು ಮುರಿದಿದ್ದು, ನಾಲ್ಕೈದು ಹಸುಗಳಿಗೆ ಗಾಯಗಳಾಗಿವೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಕೆಲವರು ಜಾನುವಾರುಗಳನ್ನು ತೋಟದ ಕಡೆ ಸಾಗಿಸಿದರು, ಕೆಲವು ಓಡಿಹೋದವು. ಸ್ಥಳೀಯರು ಮತ್ತು ಪೊಲೀಸರು ಹುಡುಕಿ ಒಟ್ಟು ೨೧ ಗೋವುಗಳನ್ನು ರಕ್ಷಿಸಿ ನಂದಗುಡಿ ವ್ಯಾಪ್ತಿಯ ಎನ್.ಹೊಸಹಳ್ಳಿ ಗೋಶಾಲೆಗೆ ರವಾನಿಸಿದ್ದಾರೆ.
ಗೋಹತ್ಯೆ ನಿಷೇಧ ಇದ್ದರೂ ಕಂಟೈನರ್‌ನಲ್ಲಿ ಹಿಂಸಿಸಿ ಗೋವು ಸಾಗಾಟ ಖಂಡನೀಯ. ಸಿಸಿಟಿವಿ ಆಧರಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ, ಗೋವುಗಳನ್ನು ಗೋಶಾಲೆಗೆ ರವಾನಿಸಬೇಕು.-ರಾಮು ಶಿವಣ್ಣ, ರೈತ ಸಂಘ