ಕೆಐಎಡಿಬಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

KannadaprabhaNewsNetwork |  
Published : Nov 13, 2025, 12:45 AM IST
ಫೆÇೀಟೋ 4 : ಸೋಂಪುರ ಹೋಬಳಿಯ ಹನುಮಂತಪುರ ಗೇಟ್ ಬಳಿ ಖಾಸಗಿ ಹೋಟೆಲ್ ನಲ್ಲಿ ರೈತ ಮುಖಂಡರು ಪತ್ರಿಕಾಗೋಷ್ಟಿ ನಡೆಸಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಹೈಕೋರ್ಟ್‌ಲ್ಲಿ ತಡೆಯಾಜ್ಞೆ ಇದ್ದರೂ ಭೂದರ ನಿಗದಿ ಸಭೆ ನಡೆಸಿದ ಕೆಐಎಡಿಬಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ ಎಂದು ರೈತ ಹೋರಾಟಗಾರ ಹನುಮಂತಪುರ ವಿಜಯ್ ಕುಮಾರ್ ಇಲಾಖೆ ಮತ್ತು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ದಾಬಸ್‍ಪೇಟೆ: ಹೈಕೋರ್ಟ್‌ಲ್ಲಿ ತಡೆಯಾಜ್ಞೆ ಇದ್ದರೂ ಭೂದರ ನಿಗದಿ ಸಭೆ ನಡೆಸಿದ ಕೆಐಎಡಿಬಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ ಎಂದು ರೈತ ಹೋರಾಟಗಾರ ಹನುಮಂತಪುರ ವಿಜಯ್ ಕುಮಾರ್ ಇಲಾಖೆ ಮತ್ತು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಪುರ ಹೋಬಳಿ ಹನುಮಂತಪುರ, ತ್ಯಾಮಗೊಂಡ್ಲು ಹೋಬಳಿ ಬಿದಲೂರು, ಕೋಡಿಪಾಳ್ಯ ಗ್ರಾಮಗಳಲ್ಲಿನ 387 ಎಕರೆ ಜಮೀನಿಗೂ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ದಾಬಸ್‍ಪೇಟೆಯಲ್ಲಿ ನಡೆದ ಭೂದರ ನಿಗದಿ ಸಭೆಯಲ್ಲಿ 116 ಎಕರೆ ಬಿಟ್ಟು 271 ಎಕರೆ ಭೂಮಿಗೆ ತರಾತುರಿಯಲ್ಲಿ ಕೆಐಎಡಿಬಿ ಅಧಿಕಾರಿಗಳು ಭೂ ದರ ಸಭೆ ನಡೆಸಿರುವುದು ನ್ಯಾಯಾಲಯವನ್ನೇ ಪ್ರಶ್ನಿಸುವಂತಿದೆ. ನಾವೇಲ್ಲಾ ಸಭೆಗೆ ಹಾಜರಾಗದೆ, ಭೂದರ ನಿಗದಿ ಸಭೆ ಬಹಿಷ್ಕರಿಸಿದ್ದೇವೆ ಎಂದು ಹೇಳಿದರು.

ಪ್ರಭಾವಿ ಮಂತ್ರಿಗಳು, ಭೂಗಳ್ಳರ ಕೈವಾಡ:

ತರಾತುರಿಯಲ್ಲಿ ಭೂ ದರ ನಿಗದಿ ಮಾಡುವ ಪ್ರಕ್ರಿಯೆಯ ಹಿಂದೆ ಪ್ರಭಾವಿ ಮಂತ್ರಿಗಳು ಮತ್ತು ಭೂಗಳ್ಳರ ಕೈವಾಡವಿದೆ, ಹೈಕೋರ್ಟ್ ತೀರ್ಪಿಗೆ ದಾರಿತಪ್ಪಿಸುವಂತೆ ಕೆಐಎಡಿಬಿ ಅಧಿಕಾರಿಗಳು ನಡೆದುಕೊಂಡಿದ್ದಾರೆ, 6-8 ಕೋಟಿ ಬೆಲೆ ಬಾಳುವ ಜಮೀನನ್ನು ಕಡಿಮೆ ಬೆಲೆಗೆ ನಾವು ಕೊಡುವುದಿಲ್ಲ. ಭೂ ದರ ನಿಗದಿ ಸಭೆ ನ.11 ನಿಗದಿಯಾಗಿದೆ ಎಂದು ಎರಡು ದಿನಗಳ ಹಿಂದೆ, ನೋಟಿಸ್ ನೀಡಿ ಮನೆ-ಮನೆಗೆ ತೆರಳಿ ಕೆಐಎಡಿಬಿ ಅಧಿಕಾರಿಗಳು ರೈತರ ದಿಕ್ಕುತಪ್ಪಿಸಿ, ಒಕ್ಕಲೆಬ್ಬಿಸುತ್ತಿದ್ದಾರೆ. ಮಧ್ಯವರ್ತಿಗಳ ಮಾತನ್ನು ರೈತರು ಕೇಳಬಾರದು ಎಂದು ಹೇಳಿದರು.

ಕಾನೂನಿನ ಹೋರಾಟ ಮುಂದುವರಿಕೆ:

ರೈತ ಹೋರಾಟಗಾರ ಬಿದಲೂರು ಬಿ.ವಿ.ನರಸಿಂಹಯ್ಯ ಮಾತನಾಡಿ, ಸೋಂಪುರದಲ್ಲಿ ನಡೆದ ಸಭೆಯಲ್ಲಿ ರಾತ್ರೋರಾತ್ರಿ ರೈತರ ಜಮೀನಿನಲ್ಲಿ ಬೃಹತ್ ಗಿಡಗಳನ್ನು ನೆಡಿಸಿದ ಮಧ್ಯವರ್ತಿಗಳು ಮತ್ತು ದೊಡ್ಡ ವಿದ್ಯುತ್ ತಂತಿ ಹಾದು ಹೋಗಿರುವ ರೈತರು ಸಭೆಯಲ್ಲಿ ಭಾಗವಹಿಸಿದ್ದಾರೆ. ಅಧಿಕಾರಿಗಳು ಪೊಲೀಸ್ ಬಲ ಪ್ರಯೋಗಿಸಿ ರೈತರನ್ನು ಒಕ್ಕಲೆಬ್ಬಿಸಿದ್ದಾರೆ. ನಮ್ಮ ಜಮೀನು ಕಿತ್ತು ಜಾನುವಾರುಗಳನ್ನು ಕಸಾಯಿಖಾನೆಗೆ ದೂಡುವ ಪರಿಸ್ಥಿತಿಗೆ ಅಧಿಕಾರಿಗಳು ತರುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೆ ನಮ್ಮ ಜಮೀನು ಬಿಡುವುದಿಲ್ಲ, ಕಾನೂನಿನ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟಗಾರರಾದ ಮುನಿಯಪ್ಪ, ಕುಮಾರ್, ಪ್ರಸನ್ನ ಕುಮಾರ್, ರವಿಕುಮಾರ್, ತೋಪಯ್ಯ, ಗ್ರಾ.ಪಂ.ಸದಸ್ಯ ಕೆರೆಕತ್ತಿಗನೂರು ರಂಗಸ್ವಾಮಯ್ಯ, ಮತ್ತಿತರ ರೈತರು ಹಾಜರಿದ್ದರು.

ಕೋಟ್ ................

ಕೆಐಎಡಿಬಿ ಭೂ ದರ ನಿಗದಿ ಸಭೆಯ ನೋಟಿಸ್ ಅ.29ರಂದು ನೀಡಿದೆ, ನ.4ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ರಾಜ್ಯ ಸರ್ಕಾರದ ಕಾನೂನು ಸಲಹೆಗಾರ ಶಶಿಕಿರಣ್ ಶೆಟ್ಟಿ, ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸದೆ ರಾಜ್ಯದ 7 ಕೋಟಿ ಜನರಿಗೆ ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಸಾರ್ವಜನಿಕ ಪ್ರಕಟಣೆ ಪತ್ರದಲ್ಲೂ ಕೆಐಎಡಿಬಿ ಉನ್ನತ ಅಧಿಕಾರಿಗಳ ಸಹಿ ಇಲ್ಲದೆ ಕರಪತ್ರ ಹಂಚಿದ್ದಾರೆ. ಒಟ್ಟಾರೆ ರೈತರ ಜಮೀನು ಹೊಡೆಯುವ ಹುನ್ನಾರ ನಡೆದಿದೆ.

-ಶಿವರುದ್ರಯ್ಯ, ರೈತ ಹೊರಾಟಗಾರ

ಫೆÇೀಟೋ 4 :

ಸೋಂಪುರ ಹೋಬಳಿಯ ಹನುಮಂತಪುರ ಗೇಟ್ ಬಳಿ ರೈತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು