- ಮತ್ತಾವರ ಮೀಸಲು ಅರಣ್ಯ ಪ್ರದೇಶ ಒತ್ತುವರಿ । 20 ಎ.11 ಗುಂಟೆ ತೆರವು । 200 ಸಿಬ್ಬಂದಿ ನಿಯೋಜನೆ
ಅರಣ್ಯ ಒತ್ತುವರಿ ತೆರವಿಗೆ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಖಡಕ್ ಸೂಚನೆ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯ ಅರಣ್ಯ ಇಲಾಖೆಯವರು ಫುಲ್ ಅಲರ್ಟ್ ಆಗಿದ್ದಾರೆ.
ಕಾಡು ಪ್ರಾಣಿಗಳು ಹಾಗೂ ಮಾನವ ಸಂಘರ್ಷಗಳು ಹೇಗೆ ಆಗಾಗ ರಿಪೀಟ್ ಆಗುತ್ತಲೇ ಇರುತ್ತದೆಯೋ, ಒತ್ತುವರಿ ತೆರವು ಸಂಬಂಧ ಅರಣ್ಯ ಇಲಾಖೆ ಮತ್ತು ಒತ್ತುವರಿದಾರರ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ರಾಜಕೀಯ ಮಧ್ಯಸ್ಥಿಕೆ ಯಿಂದಾಗಿ ತೆರವು ಕಾರ್ಯಾಚರಣೆ ಮೂಲೆ ಹಿಡಿದಿತ್ತು.ಮೀಸಲು ಅರಣ್ಯ ಒತ್ತುವರಿ ತೆರವುಗೊಳಿಸಬೇಕು ಇಲ್ಲದೆ ಹೋದರೆ ಸಂಬಂಧಿಸಿದ ಅರಣ್ಯಾಧಿಕಾರಿಗಳನ್ನು ಹೊಣೆಗಾರ ರನ್ನಾಗಿ ಮಾಡಲಾಗುವುದು ಎಂದು ಸುಪ್ರಿಂ ಕೋರ್ಟ್‌ನ ಹಸಿರು ಪೀಠ ಹಲವು ಪ್ರಕರಣಗಳಲ್ಲಿ ಪುನರುಚ್ಚರಿಸುತ್ತಲೇ ಬಂದಿದೆ. ಆದರೆ, ಅಧಿಕಾರಿಗಳು ಸ್ಥಳೀಯ ಪರಿಸ್ಥಿತಿಯನ್ನು ಎದುರಿಸಲಾಗದೆ ಅಸಹಾಯಕರಾಗಿದ್ದರು.
ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದ ಸರ್ವೆ ನಂ. 369ರಲ್ಲಿನ ಮತ್ತಾವರ ಬ್ಲಾಕ್ 2ರಲ್ಲಿನ 20 ಎಕರೆ 11 ಗುಂಟೆ ಮೀಸಲು ಅರಣ್ಯ ಪ್ರದೇಶವನ್ನು ಡಿ.ಆರ್. ರಮೇಶ್ ಒತ್ತುವರಿ ಮಾಡಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದು, ತೀರ್ಪು ಕೂಡ ಅರಣ್ಯ ಇಲಾಖೆ ಪರವಾಗಿ ಬಂದಿತ್ತು.
--- ಬಾಕ್ಸ್ ----ಚಿಕ್ಕಮಗಳೂರು ವಿಭಾಗದಲ್ಲಿ 2500 ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಒಟ್ಟು 1245 ಪ್ರಕರಣಗಳಲ್ಲಿ 3 ಎಕರೆ ಯೊಳಗೆ 845 ಹಾಗೂ 3 ಎಕರೆ ಮೇಲ್ಪಟ್ಟು 400 ಪ್ರಕರಣಗಳು ಇವೆ. ಸದ್ಯ 3 ಎಕರೆ ಮೇಲ್ಪಟ್ಟ ಒತ್ತುವರಿ ತೆರವು ಗೊಳಿಸಲಾಗುತ್ತಿದೆ.- ರಮೇಶ್‌ಬಾಬು
ಚಿಕ್ಕಮಗಳೂರು ವಿಭಾಗ