ದೇಶದ ರೈತರಿಗೆ ನಿರಂತರ ಮೋಸ: ಹಾಡ್ಯ ರಮೇಶ್ ರಾಜು

KannadaprabhaNewsNetwork |  
Published : Mar 06, 2025, 12:33 AM IST
೪ಕೆಎಂಎನ್‌ಡಿ-೧೨ಮಂಡ್ಯದ ವಿ.ವಿ. ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ‌್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಅಭಿವೃದ್ಧಿಯ ವೇಗದಲ್ಲಿ ರೈತ ಹಿಂದುಳಿದಂತೆ ತೋರುತ್ತಿದ್ದಾನೆ. ರಾಷ್ಟ್ರದ ಅನೇಕ ಸಂಸ್ಥೆಗಳು ಈ ಅಸಂಗತತೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿವೆ. ಆದರೆ, ಅವುಗಳಲ್ಲಿ ಹೆಚ್ಚಿನವು ಕೆಲವು ವ್ಯಕ್ತಿಗಳ ಮುಖವಾಣಿಗಳಾಗಿವೆ. ಅಥವಾ ರಾಜಕೀಯ ಪಕ್ಷಗಳ ಸಂಬಂಧ ಹೊಂದಿವೆ. ಇವು ರೈತರನ್ನು ತಮ್ಮ ಸ್ವಾರ್ಥ ಉದ್ದೇಶಗಳನ್ನು ಪೂರೈಸಲು ಹಾಗೂ ಉನ್ನತ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಬಳಸುತ್ತಿವೆ.

ಮಂಡ್ಯ: ಭಾರತೀಯ ಗ್ರಾಮ ಆಧಾರಿತ ರೈತರು ಪ್ರತಿನಿತ್ಯ ಬೇರೆಯವರಿಂದ ಮೋಸ ಹೋಗುತ್ತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್‌ ರಾಜು ತಿಳಿಸಿದರು.

ನಗರದ ವಿ.ವಿ. ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಭಾರತೀಯ ಕಿಸಾನ್ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೃಷಿ ಆಧಾರಿತ ವ್ಯವಹಾರಗಳೇ ರೈತನ ಶಕ್ತಿ. ರೈತರು ಮತ್ತು ಕೃಷಿ ಇಲ್ಲದೆ ರಾಷ್ಟ್ರದ ಅಭಿವೃದ್ಧಿ ಅಸಾಧ್ಯವಾದದ್ದು. ವಿಶ್ವದಾದ್ಯಂತ ಇಂತಹ ಬೆಳವಣಿಗೆ ಮತ್ತು ಅಭಿವೃದ್ಧಿಯ ಹೊರತಾಗಿಲ್ಲ ಎಂದು ಹೇಳಿದರು.

ಅಭಿವೃದ್ಧಿಯ ವೇಗದಲ್ಲಿ ರೈತ ಹಿಂದುಳಿದಂತೆ ತೋರುತ್ತಿದ್ದಾನೆ. ರಾಷ್ಟ್ರದ ಅನೇಕ ಸಂಸ್ಥೆಗಳು ಈ ಅಸಂಗತತೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿವೆ. ಆದರೆ, ಅವುಗಳಲ್ಲಿ ಹೆಚ್ಚಿನವು ಕೆಲವು ವ್ಯಕ್ತಿಗಳ ಮುಖವಾಣಿಗಳಾಗಿವೆ. ಅಥವಾ ರಾಜಕೀಯ ಪಕ್ಷಗಳ ಸಂಬಂಧ ಹೊಂದಿವೆ. ಇವು ರೈತರನ್ನು ತಮ್ಮ ಸ್ವಾರ್ಥ ಉದ್ದೇಶಗಳನ್ನು ಪೂರೈಸಲು ಹಾಗೂ ಉನ್ನತ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಬಳಸುತ್ತಿವೆ ಎಂದು ತಿಳಿಸಿದರು.

ದೇಶದ ನಾಗರಿಕರಾಗಿ ತಮ್ಮ ಕರ್ತವ್ಯಗಳನ್ನು ಮರೆಯದೆ ತಮ್ಮ ನ್ಯಾಯಯುತ ಹಕ್ಕುಗಳನ್ನು ಸೃಜನಾತ್ಮಕವಾಗಿ ಸಾಧಿಸುವತ್ತ, ರೈತರನ್ನು ಜಾಗೃತಗೊಳಿಸಬಲ್ಲ ರಾಜಕೀಯೇತರ ಸಂಘಟನೆಯನ್ನು ಹೊಂದಿರುವ ಉದ್ದೇಶದಿಂದ, ದೇಶದ ಶ್ರೇಷ್ಠ ಚಿಂತಕರಾದ ದತ್ತೋಪಂತ್ ಠೇಂಗಡಿರವರು ರಾಜಕೀಯೇತರ ರಾಷ್ಟ್ರೀಯತಾವಾದಿ ಸಿದ್ಧಾಂತದೊಂದಿಗೆ ಭಾರತೀಯ ರೈತರನ್ನು ಒಗ್ಗೂಡಿಸಬೇಕೆಂಬ ಸದುದ್ದೇಶದಿಂದ ಭಾರತೀಯ ಕಿಸಾನ್ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಅಪ್ಪಾಜಿ ಬೂದನೂರು, ಜಿಲ್ಲಾ ಕಾರ್ಯದರ್ಶಿ ಬಸವರಾಜು ಜೈಪುರ, ಪಾಂಡವಪುರ ತಾಲೂಕು ಅಧ್ಯಕ್ಷ ಸೋಮಶೇಖರ್, ಮಳವಳ್ಳಿ ತಾಲೂಕು ಅಧ್ಯಕ್ಷ ಮಹಾದೇವ, ಮಂಡ್ಯ ತಾಲೂಕು ಅಧ್ಯಕ್ಷ ಜಯರಾಮ ತೂಬಿನಕೆರೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾದ ಅಚ್ಚುತ ದುರ್ಗೇಶ್, ಹೇಮಂತ್, ಶಿವಣ್ಣ, ನಾಗಣ್ಣ, ರಾಜೇಗೌಡ, ಮಹಿಳಾ ಪ್ರಮುಖರಾದ ನೇತ್ರಾವತಿ ಸರಸ್ವತಿ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ