ಕೊಪ್ಪಳ: ಸತತ ಪ್ರಯತ್ನ ಸಾಧನೆಯ ರಹಸ್ಯ ಎಂದು ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇವಣ್ಣ ಗುರಿಕಾರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಬಡತನ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಸಮಾಜ ನಿಮ್ಮ ಸ್ಥಾನಮಾನ ನಿರ್ಧರಿಸುತ್ತದೆ. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು. ಪದವಿ ಓದುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಬೇಕು ಕಠಿಣ ಅಭ್ಯಾಸವು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ. ಗುರಿ ದೊಡ್ಡದಿರಲಿ, ಅದಕ್ಕೆ ಸಮರ್ಪಣೆ ಮನೋಭಾವನೆ ನಿರಂತರ ಪ್ರಯತ್ನ ಇರಲಿ. ಪುಸ್ತಕಗಳನ್ನು ಪದೇ ಪದೇ ಓದಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ., ವ್ಯಕ್ತಿ ಸಾಧನೆ ಮೇಲೆ ಸ್ಥಾನಮಾನ ನಿರ್ಧಾರವಾಗುತ್ತದೆ. ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆಗಳು ಓದಬೇಕು. ವಾರ್ತೆ ಕೇಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ಸುಲಭವಾಗುತ್ತದೆ. ಉದ್ಯೋಗ ಪಡೆಯಬೇಕಾದರೆ ಪದವಿ ಜತೆ ಮಾರ್ಗದರ್ಶನ ಪಡೆಯಿರಿ ಎಂದು ತಿಳಿಸಿದರು.ಸಂಚಾಲಕ ಡಾ.ಪ್ರದೀಪ್ ಕುಮಾರ ಮಾತನಾಡಿ, ಇಂದು ದುಡ್ದಿಗಿಂತ ವಿದ್ಯೆಗೆ ಹೆಚ್ಚು ಬೆಲೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಕ್ರಿಯಾಶೀಲದಿಂದ ವಿದ್ಯಾಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಮಾರ್ಗದರ್ಶಕ ಹೊನ್ನಿಕೇರಿ ಮಲ್ಲಪ್ಪ ಮಾತನಾಡಿ, ಗುರಿ, ದೃಷ್ಟಿಕೋನ ಮತ್ತು ಉದ್ದೇಶ ಇಟ್ಟುಕೊಂಡು ಅಧ್ಯಯನ ಮಾಡಬೇಕು. ಪೂರ್ವ ತಯಾರಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂದರು.ಶಿಕ್ಷಕ ಶ್ರೀಕಾಂತ ಬೆಟಗೇರಿ ಮಾತನಾಡಿ, ವಿದ್ಯಾರ್ಥಿಗಳು ತಂದೆ ತಾಯಿ ಮತ್ತು ಶಿಕ್ಷಕರ ಪ್ರೇರಣೆ ಪಡೆಯಬೇಕು ಎಂದರು.
ಈಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯಲ್ಲಾಲಿಂಗ, ಡಾ. ಅಶೋಕ ಕುಮಾರ್, ಡಾ. ನರಸಿಂಹ, ಹನುಮೇಶ್ ಯಾದವ ಇದ್ದರು. ಕಾರ್ಯಕ್ರಮವನ್ನು ಶಾಹಿನಿ ನಿರೂಪಿಸಿದರು. ಮೂಕಮ್ಮ ಪ್ರಾರ್ಥನೆ ಗೀತೆ ಹಾಡಿದರು. ಡಾ. ಪ್ರದೀಪ್ ಕುಮಾರ ಸ್ವಾಗತಿಸಿದರು. ಡಾ.ನರಸಿಂಹ ವಂದಿಸಿದರು.