ನರಗುಂದ: ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನವನ್ನು ಕಿರಿಯ ನ್ಯಾಯವಾದಿಗಳು ಪಡೆದುಕೊಳ್ಳಬೇಕು. ನ್ಯಾಯವಾದಿಗಳ ವೃತ್ತಿ ಗೌರವಯುತವಾದ ಉನ್ನತ ವೃತ್ತಿಯಾಗಿದೆ. ನ್ಯಾಯವಾದಿಗಳಿಗೆ ಗುರಿ ಮತ್ತು ನಿರಂತರ ಕಲಿಕೆ ಇರಬೇಕು ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಹನುಮಂತ ಅರಳಿ ತಿಳಿಸಿದರು.
ಹಿರಿಯ ನ್ಯಾಯವಾದಿ ಎಂ.ಟಿ. ಪಾಟೀಲ ಮಾತನಾಡಿ, ನ್ಯಾಯವಾದಿಗಳು ಸಮಯಕ್ಕೆ ಹೆಚ್ಚು ಮಹತ್ವವನ್ನು ಕೊಡಬೇಕು. ಪ್ರಾಮಾಣಿಕತೆ ಜತೆಗೆ ಶಿಸ್ತುಬದ್ಧ ಕೆಲಸ ಮಾಡಬೇಕು. ಯಾರೇ ಆಗಲಿ, ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಂಡು ಬೆಳೆಯಬೇಕು. ಸಮಾಜದಲ್ಲಿ ನ್ಯಾಯವಾದಿಗಳಗೆ ಹೆಚ್ಚು ಗೌರವ ಇದೆ. ಇದನ್ನು ಅರಿತುಕೊಂಡು ನಮ್ಮ ವೃತ್ತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.ನ್ಯಾಯವಾದಿ ಎಫ್.ವೈ. ದೊಡಮನಿ ಮಾತನಾಡಿ, ದೇಶದ ಪ್ರಥಮ ರಾಷ್ಟ್ರಾಧ್ಯಕ್ಷ ಡಾ. ಬಾಬು ರಾಜೇಂದ್ರ ಪ್ರಸಾದ ಅವರು ನ್ಯಾಯವಾದಿಗಳಾಗಿದ್ದರಿಂದ ಅವರ ಜನ್ಮದಿನವನ್ನು ನ್ಯಾಯವಾದಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿ 50 ಪೂರೈಸಿದ ಹಿರಿಯ ನ್ಯಾಯವಾದಿಗಳಾದ ಬಿ.ಎಸ್. ಪಾಟೀಲ ಹಾಗೂ ಎಂ.ಟಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಬಿ.ಎನ್. ಭೋಸಲೆ, ಎಸ್.ಆರ್. ಪಾಟೀಲ, ವಿ.ಎಸ್. ದೇಶಪಾಂಡೆ, ಆರ್.ಸಿ. ಪಾಟೀಲ, ರಮೇಶ ನಾಯ್ಕರ, ಆನಂದ ಭೋಸಲೆ, ಕೆ.ಎಸ್. ಹೂಲಿ, ಜೆ.ಸಿ. ಭೋಗಾರ, ಎಸ್.ಎಸ್. ಅಂಗಡಿ, ವಿ.ಎ. ಮೂಲಿಮನಿ, ಎಸ್.ಬಿ. ಮುದೇನಗುಡಿ, ಎಂ.ಎಚ್. ತಹಶೀಲ್ದಾರ, ಎಸ್.ಎಂ. ಗುಗ್ಗರಿ, ಎ.ಎಸ್. ದೇವರಮನಿ, ಎಚ್.ಪಿ. ಮುದ್ದನಗೌಡ್ರ, ವಿಠ್ಠಲ ಗಾಯಕವಾಡ, ಇದ್ದರು.ವೈಭವದ ದತ್ತ ಜಯಂತಿ ಆಚರಣೆಗಜೇಂದ್ರಗಡ: ಪಟ್ಟಣದ ಮಸ್ಕಿಯವರ ಬಡಾವಣೆಯ ಗುರು ದತ್ತಾತ್ರೇಯ ಮಂದಿರದಲ್ಲಿ ದತ್ತ ಜಯಂತಿ ಅಂಗವಾಗಿ ಸ್ವಾಮಿಯ ತೊಟ್ಟಿಲೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.ಬೆಳಗ್ಗೆ ಕಲ್ಲಿನಾಥಭಟ್ಟ ಜೀರೆ ಅವರಿಂದ ಗುರುದತ್ತ ಸ್ವಾಮಿಯ ಸ್ಥಿರಪಾದುಕೆಗೆ ವಿಶೇಷ ಪೂಜೆಯೊಂದಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ವಿವಿಧ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ದತ್ತಸ್ವಾಮಿಗೆ ವಿವಿಧ ಬಗೆಯ ಅಭಿಷೇಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ ಬಳಿಕ ಸುಮಂಗಲೆಯರು ದತ್ತಸ್ವಾಮಿ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿ ನಾಮಕರಣ ಮಾಡಿದರು.ಈ ವೇಳೆ ಡಾ. ಉಮಾ ಜೀರೆ ಮಾತನಾಡಿ, ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ತಪಸ್ಸಿನಿಂದ ಆತ್ಮಬಲ ವೃದ್ದಿಸುತ್ತದೆ ಎಂದ ಅವರು, ವಿದೇಶಿ ಪ್ರಭಾವ ಮತ್ತು ನಾಗರಿಕತೆ ಬೆಳೆದಂತೆಲ್ಲ ಯುವಜನತೆ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಿ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಮೂಲ ಸಂಸ್ಕೃತಿಯನ್ನು ಮರೆಯಬಾರದು. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಯುವಕರು ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಶಶಿಧರ ಕುಲಕರ್ಣಿ, ರಘುನಾಥ ತಾಸಿನ, ವಿನಾಯಕ ಜೀರೆ ಹಾಗೂ ರಾಧಾ ಜೀರೆ, ಸುಧಾಬಾಯಿ ಜೀರೆ ,ಶಾರದಾ ತಾಸಿನ, ನೇತ್ರಾ ಹೆಗಡೆ, ಲಕ್ಷ್ಮೀ ಕುಲಕರ್ಣಿ, ಶಾರದಾಬಾಯಿ ಜೀರೆ, ರೂಪಾ ಕುಲಕರ್ಣಿ, ರಾಧಾ ಇಟಗಿ, ಸವಿತಾ ಕೊಡಗಾನೂರ, ರಂಜಿತಾ ಕುಲಕರ್ಣಿ, ನಿರ್ಮಲಾ ಕುಲಕರ್ಣಿ, ಅನುರಾಧಾ ದೇಸಾಯಿ, ಲತಾ ರಾಜಪುರೋಹಿತ ಇತರರು ಇದ್ದರು.