ಗದಗ: ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಾನಸಿಕ ಹಾಗೂ ದೈಹಿಕ ಸದೃಢತೆ ಅವಶ್ಯಕ. ಆಟ-ಪಾಠಗಳೊಂದಿಗೆ ನಿರಂತರ ಓದು-ಬರಹ ವಿದ್ಯಾರ್ಥಿಗಳಲ್ಲಿ ಆಸಕ್ತಿದಾಯಕ ಕಲಿಕೆಯನ್ನುಂಟು ಮಾಡುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅಂತಾರಾಷ್ಠ್ರೀಯ ಸಂಸ್ಥೆ ಇನ್ನರ್ ವೀಲ್ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಗೆ ಬೇಕಾದ ಸಾಮಗ್ರಿ ಹಾಗೂ ಶಾಲೆಯ ಭೌತಿಕ ಅವಶ್ಯಕತೆಗಳನ್ನು ಪೂರೈಸಿ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ನಮ್ಮ ಶಿಕ್ಷಣ ಇಲಾಖೆ ಇವರಿಗೆ ಅಭಾರಿಯಾಗಿದೆ ಎಂದರು.
ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಮಾತನಾಡಿ, ಗದಗ 4 ಹಾಗೂ ಗ್ರಾಮೀಣ ಭಾಗದ 1 ಶಾಲೆಯನ್ನು ಈ ವರ್ಷಕ್ಕೆ ದತ್ತು ಪಡೆಯಲಾಗಿದ್ದು, ಶಾಲೆಯ ಕಲಿಕಾ ಚಟುವಟಿಕೆಗಳಿಗೆ ಪೂರಕವಾಗಿ ಶ್ರಮಿಸಲಾಗುತ್ತಿದೆ ಎಂದರು.ಕ್ಲಬ್‌ನ ಸಿಎಲ್‌ಸಿಸಿ ಸುಮಾ ಪಾಟೀಲ ಮಾತನಾಡಿ, ಅತ್ಯಂತ ಹಳೆಯದಾದ ಸರ್ಕಾರಿ ಮಾದರಿ ನಂ.1 ಶಾಲೆಯನ್ನು ನಾವು ದತ್ತು ಪಡಯಲು ನಮಗೆ ಹೆಮ್ಮೆಯಾಯಿತು. ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಇಂದು ದೇಶದ ಎಲ್ಲ ಕಡೆ ಇದ್ದು ಶತಮಾನೋತ್ಸವ ಸಂಭ್ರಮಾಚರಣೆ ಜರುಗಲಿ ಎಂದರು.
ಪ್ರಾಯೋಜಕತ್ವವನ್ನು ಕ್ಲಬ್‌ನ ಅನ್ನಪೂರ್ಣ ವರವಿ, ಶಾಂತಾ ನಿಂಬಣ್ಣವರ, ಮೀನಾಕ್ಷಿ ಕೊರವನವರ ವಹಿಸಿಕೊಂಡಿದ್ದರು.ಕ್ಲಬ್‌ನ ಪಿಡಿಸಿ ಪ್ರೇಮಾ ಗುಳಗೌಡ್ರ, ಕಾರ್ಯದರ್ಶಿ ವೀಣಾ ತಿರ್ಲಾಪೂರ, ಪುಷ್ಪಾ ಬಂಡಾರಿ, ಮೀನಾಕ್ಷಿ ಕೊರವನವರ, ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಾ ಜಕರಡ್ಡಿ, ಸಹಶಿಕ್ಷಕರಾದ ಪವಿತ್ರಾ ಹಿರೇಮಠ, ವಿಜಯಲಕ್ಷ್ಮೀ ಕುಂಟೋಜಿ, ಪ್ರೀಯಾ ಪವಾರ ಉಪಸ್ಥಿತರಿದ್ದರು.