ಕಾರವಾರ: ಹೊನ್ನಾವರ ರೋಟರಿ ಕ್ಲಬ್‌ನಿಂದ ನ. 19, 20, 21 ರಂದು ದೃಷ್ಟಿದೋಷವುಳ್ಳ ಜೂನಿಯರ್ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ ಸಾರಂಗ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಪೂರ್ಣ ಮತ್ತು ಅರೆದೃಷ್ಟಿವುಳ್ಳ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊನ್ನಾವರ ತಾಲೂಕಿನ ಕಾಸರಕೋಡಿನ ಮಯೂರಿ ಇಕೊ ಬೀಚ್ ರೆಸಾರ್ಟ್‌ನಲ್ಲಿ ಮೂರು ದಿನಗಳ ಪಂದ್ಯ ನಡೆಯಲಿದ್ದು, ರಾಜ್ಯದಲ್ಲಿ ಇದುವರೆಗೆ ದೃಷ್ಟಿವುಳ್ಳ ಜೂನಿಯರ್ಸ್ ಚಾಂಪಿಯನ್‌ಶಿಪ್ ಒಂದು ಬಾರಿ ನಡೆದಿದ್ದು, ಈಗ ಎರಡನೇ ಬಾರಿ ಈ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಅದು ಕೂಡ ಹೊನ್ನಾವರದಲ್ಲಿಯೇ ಆಗಿದೆ. ಇದೊಂದು ಸವಾಲಿನ ಕೆಲಸವಾದರೂ ನಮ್ಮ ಸಾಮರ್ಥ್ಯ ನೋಡಿ ಆಯೋಜನೆಗೆ ರಾಷ್ಟ್ರೀಯ ಚೆಸ್ ಅಸೋಸಿಯೇಷನ್ ಅವಕಾಶ ನೀಡಿದೆ ಎಂದರು.
ಆಲ್ ಇಂಡಿಯನ್ ಚೆಸ್ ಫೆಡರೇಶನ್ ಫಾರ್ ದಿ ಬ್ಲೆಂಡ್ ಮತ್ತು ಕರ್ನಾಟಕ ಸ್ಟೇಟ್ ಚೆಸ್ ಅಸೋಷಿಯೇಷನ್ ಫಾರ್ ವಿಷುವಲಿ ಚಾಲೆಂಜ್ ಟೂರ್ನಿಗೆ ಸಹಭಾಗಿತ್ವ ನೀಡಲಿದ್ದಾರೆ ಎಂದರು. ಈವೆಂಟ್ ಚೇರ್ಮನ್ ಶ್ರೀಕಾಂತ ನಾಯ್ಕ ಮಾತನಾಡಿ, ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದವರು ಸೇರಿದಂತೆ ಒಟ್ಟು ನಾಲ್ಕು ಆಟಗಾರರು ಯಾರೋಪ್ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.ಅವರಿಗೆ ಉಳಿದುಕೊಳ್ಳಲು ಮಯೂರಿ ಈಕೋ ಬೀಚ್ ರೆಸಾರ್ಟ್‌ನಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಹೊರ ರಾಜ್ಯಗಳಿಂದ ಬರುವ ಸ್ಪರ್ಧಿಗಳು ರೈಲ್ವೆ ಮೂಲಕ ಆಗಮಿಸುತ್ತಿದ್ದು, ಹೊನ್ನಾವರ ಮತ್ತು ಮುರುಡೇಶ್ವರ ರೈಲು ನಿಲ್ದಾಣಗಳಿಂದ ಅವರನ್ನು ಕರೆತರಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಚೆಸ್ ಪಂದ್ಯಗಳನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪಶ್ಚಿಮ ಬಂಗಾಲ, ಗುಜರಾತ್, ನ್ಯೂಡೆಲ್ಲಿ, ಮಹಾರಾಷ್ಟ್ರ, ಉತ್ತರಪ್ರದೇಶ, ತಮಿಳನಾಡು ಹಾಗು ನಮ್ಮ ರಾಜ್ಯದ ಒಟ್ಟು 60 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧಾಗಳೊಂದಿಗೆ ಅವರ ಸಹಾಯಕರು ಕೂಡಾ ಆಗಮಿಸಲಿದ್ದು, ದೇಶದ ವಿವಿಧ ಭಾಗಗಳಿಂದ ಅಂದಾಜು 100 ಜನರು ಈ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.ರೋಟರಿ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಪ್ರಭು, ಕಾರ್ಯದರ್ಶಿ ಎಂ.ಎಂ. ಹೆಗಡೆ, ಎಸ್.ಎಂ. ಭಟ್, ಡಿ.ಜೆ. ನಾಯ್ಕ ಇದ್ದರು.18 ಲಕ್ಷ ವೆಚ್ಚದಲ್ಲಿ 10 ಕೆರೆ ಅಭಿವೃದ್ಧಿಶಿರಸಿ: ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಮೂಲಕ ತಾಲೂಕಿನಲ್ಲಿ ೨೭೭೮ ಸಂಘಗಳಿದ್ದು, ೨೦೧೯೦ ಸಂಘದ ಸದಸ್ಯರಿದ್ದಾರೆ. ಶಿರಸಿ ಜಿಲ್ಲೆಯಲ್ಲಿ ೧೬೧೬೮ ಸಂಘಗಳು ೧.೨೬ ಲಕ್ಷ ಸದಸ್ಯರು ಇದ್ದಾರೆ. ಶಾಶ್ವತ ಅಭಿವೃದ್ಧಿಗಾಗಿ ಸಮಗ್ರ ಯೋಜನೆಗಾಗಿ ಕಾರ್ಯ ಮಾಡುತ್ತಿದ್ದೇವೆ ಎಂದು ಶಿರಸಿ ಜಿಲ್ಲೆಯ ನಿರ್ದೇಶಕ ಬಾಬು ನಾಯ್ಕ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವ್ಯವಹಾರದ ಮಧ್ಯವರ್ತಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಬ್ಯಾಂಕಿನಿಂದ ಸಾಲ ಪಡೆದ ಹಣವನ್ನು ವಾರ ವಾರ ಮರಳಿ ಕೊಡಿಸುತ್ತಿದೆ. ಸಂಘದ ಆಧಾರದಲ್ಲಿ ಸಾಲ ಕೊಡಲಾಗುತ್ತಿದೆ. ನಾವು ಸಾಲ ಕೊಡುವುದಿಲ್ಲ, ಕೊಡಿಸಲಾಗುತ್ತಿದೆ ಎಂದರು.ಈಗಾಗಲೇ ಮಾಸಾಶನ, ವಾಟರ್ ಬೆಡ್, ಅನಾರೋಗ್ಯ ಉಳ್ಳ ಉಳ್ಳವರಿಗೆ ನೆರವು, ಸಂಪೂರ್ಣ ಸುರಕ್ಷಾ ನೀಡಲಾಗಿದೆ. ಕಳೆದ ಹದಿನೆಂಟು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ೨೨೨ ಜನರಿಗೆ ₹೨೦ ಲಕ್ಷದವರೆಗೆ ಆರೋಗ್ಯ ರಕ್ಷಾ ಕ್ಲೇಮ್ ನೀಡಲಾಗಿದೆ. ರಾಜ್ಯದಲ್ಲಿ ₹೩೭೦೦ ಕೋಟಿಗೂ ಅಧಿಕ ಉಳಿತಾಯ ಮಾಡಲಾಗಿದೆ. ಶಿರಸಿ ತಾಲೂಕಿನಲ್ಲಿ ₹೧.೫೬ ಕೋಟಿ ಉಳಿತಾಯ ಮಾಡಲಾಗಿದೆ ಎಂದ ಅವರು, ಈವರೆಗ ತಾಲೂಕಿನಲ್ಲಿ ₹೧೮ ಲಕ್ಷ ಮೊತ್ತದಲ್ಲಿ ೧೦ ಕೆರೆ ಅಭಿವೃದ್ಧಿ ಮಾಡಲಾಗಿದೆ. ೩೧ ದೇವಸ್ಥಾನ ಅಭಿವೃದ್ದಿಗಾಗಿ ₹೩೫ ಲಕ್ಷ ವಿನಿಯೋಗಿಸಲಾಗಿದೆ. ಸುಜ್ಞಾನ ನಿಧಿ ೮೯೫ ಸದಸ್ಯರಿಗೆ ₹೧೦೫ ಕೋಟಿ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ ಇದ್ದರು.