ನ್ಯಾಯವಾದಿಗಳಲ್ಲಿ ನಿರಂತರ ಅಧ್ಯಯನ ಶೀಲತೆ ಅಗತ್ಯ

KannadaprabhaNewsNetwork | Published : Apr 27, 2025 1:34 AM

ಸಾರಾಂಶ

ದೊಡ್ಡಬಳ್ಳಾಪುರ: ನ್ಯಾಯಾಂಗದ ವಿಚಾರಗಳಲ್ಲಿ ಪೂರ್ವಸಿದ್ಧತೆ ಮತ್ತು ವಿಷಯಜ್ಞಾನ ಇಲ್ಲದಿದ್ದರೆ ಸಂದರ್ಭಗಳನ್ನು ನಿಭಾಯಿಸುವುದು ಕಷ್ಟಸಾಧ್ಯ ಎಂದು ರಾಜ್ಯ ಹೈಕೋರ್ಟ್‌ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಹೇಳಿದರು.

ದೊಡ್ಡಬಳ್ಳಾಪುರ: ನ್ಯಾಯಾಂಗದ ವಿಚಾರಗಳಲ್ಲಿ ಪೂರ್ವಸಿದ್ಧತೆ ಮತ್ತು ವಿಷಯಜ್ಞಾನ ಇಲ್ಲದಿದ್ದರೆ ಸಂದರ್ಭಗಳನ್ನು ನಿಭಾಯಿಸುವುದು ಕಷ್ಟಸಾಧ್ಯ ಎಂದು ರಾಜ್ಯ ಹೈಕೋರ್ಟ್‌ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಹೇಳಿದರು.

ಇಲ್ಲಿನ ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದಿಂದ ನ್ಯಾಯಾಲಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಂಥಾಲಯ ಹಾಗೂ ಇ-ಗ್ರಂಥಾಲಯಕ್ಕೆ ಚಾಲನೆ ನೀಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಂ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಕೀಲರು ಸಂವಿಧಾನದ ಆಶಯ ಈಡೇರಿಸಬೇಕು. ಪ್ರತಿಯೊಬ್ಬ ಪ್ರಜೆಗೂ ತಮ್ಮ ಹಕ್ಕು ಬಾಧ್ಯತೆ ಪ್ರತಿಪಾದಿಸುವುದೇ ಪ್ರಜಾಪ್ರಭುತ್ವದ ಧ್ಯೇಯ ಎನ್ನುವುದನ್ನು ಮನಗಾಣಬೇಕು.ನ್ಯಾಯಾಲಯದಲ್ಲಿ ವಾದ ಮಂಡನೆಗೂ ಮುನ್ನ ವಕೀಲರು ಸಾಕಷ್ಟು ಸಿದ್ಧತೆ ನಡೆಸಬೇಕು. ಇದಕ್ಕೆ ಗ್ರಂಥಾಲಯದ ಪುಸ್ತಕಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

''''''''ಜ್ಞಾನ'''''''' ಕಳುವಾಗದ ವಸ್ತು. ಜ್ಞಾನದ ಜೊತೆಗೆ ಮಾನವೀಯತೆ ಹಾಗೂ ಹೃದಯವಂತಿಕೆ ಇರಬೇಕು. ಗ್ರಂಥಾಲಯಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜ್ಞಾನದ ದಾಹ ಇಂಗಿಸಲು ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ. ಪುಸ್ತಕದ ಮೂಲಕ ಸಿಗುವ ಜ್ಞಾನ ಹೆಚ್ಚು ಪ್ರಭಾವಶಾಲಿಯಾಗಿದೆ. ವಕೀಲರು ನ್ಯಾಯಾಲಯಗಳಲ್ಲಿ ಜಾಮೀನು ಸಿಗುವ ಪ್ರಕರಣಗಳು ಹಾಗೂ ಸಿಗದೇ ಇರುವ ಪ್ರಕರಣಗಳು ಯಾವುದು ಎನ್ನುವುದರ ಬಗ್ಗೆ ಅರಿವಿರಬೇಕು. ಎಂದು ತಿಳಿಸಿದರು.

ಇ-ಗ್ರಂಥಾಲಯಕ್ಕಿಂತ ಪುಸ್ತಕದ ಓದು ಹೆಚ್ಚು ಪ್ರಭಾವಶಾಲಿ. ಗ್ರಂಥಾಲಯವ ನ್ನು ವಕೀಲರು ಸದುಪಯೋಗ ಪಡಿಸಿ-ಕೊಳ್ಳಬೇಕು. ವಕೀಲರ ಸಂಘಕ್ಕೆ ತಮ್ಮ ಕಡೆಯಿಂದ ಆಗಬಹುದಾದ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.

ಜ್ಞಾನ ಸಂಪಾದನೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆಲ್ಲ ಮಾದರಿ, ಸಮಾನತೆ ಹಾಗೂ ದೇಶದ ಜನರು ಸಾಮರಸ್ಯದಿಂದ ಬದುಕುವ ವೇದಿಕೆ ಕಲ್ಪಿಸಿದರು. ಶೋಷಣೆ ಮತ್ತು ತುಳಿತಕ್ಕೊಳ-ಗಾದ ಎಲ್ಲ ಜನರ ದನಿಯಾಗಿದ್ದ-ವರು. ಶಿಕ್ಷಣ ಹಿಂದುಳಿದವರಿಗೆ ಮಹಿಳೆಯರಿಗೆ ಸೇರಿದಂತೆ ಎಲ್ಲರಿಗೂ ಸಿಗಬೇಕು ಎಂದು ಪ್ರತಿಪಾದಿಸಿದ್ದರು ಎಂದು ಹೇಳಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿಮಾವಿನಕುಂಟೆ ಮಾತನಾಡಿ, ವಕೀಲರ ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಗ್ರಂಥಾಲಯದ ಆಶಯ ಈಗ ಈಡೇರಿದೆ. ಗ್ರಂಥಾಲಯಕ್ಕೆ ಎಲ್ಲಾ ವಕೀಲರು, ಹಿತೈಷಿಗಳು ಅಗತ್ಯ ನೆರವನ್ನು ನೀಡಿದ್ದು, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಗುತ್ತಿದೆ. ಸುಮಾರು 400 ಜನ ಇರುವ ವಕೀಲ ಮಿತ್ರರು ಗ್ರಂಥಾಲಯದ ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಎ.ಶಿಲ್ಪ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಜೆ.ಎಸ್.ಪ್ರವೀಣ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃ-ಷ್ಣಮೂರ್ತಿ, ಉಪಾಧ್ಯಕ್ಷ ಎಂ.ಆರ್. ಸುರೇಶ, ಖಜಾಂಚಿ ಎಂ.ಮುನಿರಾಜು, ಜಂಟಿ ಕಾರ್ಯದರ್ಶಿ ವಿಜಯಕುಮಾ‌ರ್ ಇತರರಿದ್ದರು.

26ಕೆಡಿಬಿಪಿ3-

ದೊಡ್ಡಬಳ್ಳಾಪುರ ನ್ಯಾಯಾಲಯ ಆವರಣದಲ್ಲಿ ನಿರ್ಮಿಸಿರುವ ಗ್ರಂಥಾಲಯವನ್ನು ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಸೋಮಶೇಖರ್ ಉದ್ಘಾಟಿಸಿದರು. ಶಾಸಕ ಧೀರಜ್ ಮುನಿರಾಜು ಇತರರಿದ್ದರು.

Share this article