- ಹರಿಹರ ಮುಖ್ಯ ಲೈಬ್ರರಿಯಲ್ಲಿ ಗ್ರಂಥಪಾಲಕರ ದಿನಾಚರಣೆಗೆ
- - -ಹರಿಹರ: ಮನುಷ್ಯನ ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸಿಕೊಳ್ಳಲು ಉತ್ತಮ ಪುಸ್ತಕಗಳ ನಿರಂತರ ಅಧ್ಯಯನದಿಂದ ಮಾತ್ರ ಸಾಧ್ಯವಿದೆ ಎಂದು ಹರಿಹರ ಗ್ರಂಥಾಲಯ ಶಾಖಾ ಪ್ರಭಂಧಕ ರವಿಕುಮಾರ್ ಅಭಿಪ್ರಾಯಪಟ್ಟರು.
ನಗರದ ಪೇಟೆ ಆಂಜನೇಯ ಸ್ವಾಮಿ ರಸ್ತೆಯ ಮುಖ್ಯ ಗ್ರಂಥಾಲಯದಲ್ಲಿ ಮಂಗಳವಾರ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗ್ರಂಥಪಾಲಕರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಉನ್ನತಿಗೆ ಪುಸ್ತಕಗಳ ಅವಶ್ಯಕತೆ ಅರಿತು ಗ್ರಂಥಾಲಯ ಸ್ಥಾಪನೆಗೆ ಒತ್ತು ನೀಡಿದವರು ರಂಗನಾಥ. ಅವರು ಪುಸ್ತಕಗಳ ಮೌಲ್ಯವನ್ನು ಇಡೀ ದೇಶದ ಜನತೆಗೆ ಸಾರಿದರು ಎಂದರು.ವೃತ್ತಪತ್ರಿಕೆಗಳನ್ನು, ಪುಸ್ತಕಗಳನ್ನು ಓದುವುದರಿಂದ ಸಾಕಷ್ಟು ಹೊಸ, ವಿಶೇಷ ಮಾಹಿತಿಗಳು ತಿಳಿಯುತ್ತವೆ. ಈ ಹಿನ್ನೆಲೆಯಲ್ಲಿ ಅನೇಕ ಶಾಲಾ- ಕಾಲೇಜುಗಳಲ್ಲಿಯೂ ಗ್ರಂಥಾಲಯ ಸ್ಥಾಪಿಸಲಾಗಿರುತ್ತದೆ. ಅನೇಕ ವಿದ್ವಾಂಸರು, ಬುದ್ಧಿಜೀವಿಗಳು, ಮಹಾನುಭಾವರು ಬರೆದ ಪುಸ್ತಕಗಳು ವ್ಯಕ್ತಿಯ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇಂಥ ಪುಸ್ತಕಗಳನ್ನು ಸುರಕ್ಷಿತವಾಗಿ ಇಡಲು ಗ್ರಂಥಪಾಲಕರ ಕರ್ತವ್ಯ. ಈ ನಿಟ್ಟಿನಲ್ಲಿ ಅವರ ಅಗತ್ಯ ಹೆಚ್ಚಿದೆ. ಪ್ರತಿಯೊಬ್ಬರೂ ಗ್ರಂಥಾಲಯದ ಸದಸ್ಯತ್ವ ಪಡೆದು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಂಥಗಳು ಹಾಗೂ ಗ್ರಂಥಾಲಯಗಳ ಬಗ್ಗೆ ಆಸಕ್ತಿ ಮುಡಿಸಲು ಗ್ರಂಥಾಲಯದಲ್ಲಿ ನೂತನ ಪಠ್ಯ ಪುಸ್ತಕ, ವಿವಿಧ ಸ್ಪರ್ಧಾತ್ಮಕ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಓದುಗರಾದ ಗುತ್ತೂರು ಹನುಮಂತಪ್ಪ, ಎಸ್. ಕೇಶವ, ರಮೇಶ್ ಬೆಳ್ಳೂಡಿ ಎಚ್.ಎಸ್. ಅರುಣ್, ಪ್ರದೀಪ್, ಮರೀದೇವ, ಪ್ರವೀಣ್, ಗಜೇಂದ್ರ, ಸೋಮಶೇಖರ್, ಚೇತನ, ಚಂದನಾ, ದೀಪಾ, ಪೂಜಾ ಹಾಗೂ ಉಪಸ್ಥಿತರಿದ್ದರು.- - -
-13ಎಚ್‍ಆರ್‍ಆರ್01.ಜೆಪಿಜಿ:ಹರಿಹರದ ಮುಖ್ಯ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗ್ರಂಥಪಾಲಕರ ದಿನ ಆಚರಿಸಲಾಯಿತು.