ಧಾರವಾಡ:
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಬೇಸಿಗೆಯಲ್ಲಿ ಕುಡಿಯುವ ನೀರು, ಜಾನುವಾರು ಮೇವು ಹಾಗೂ ಅಕಾಲಿಕ ಮಳೆಯಿಂದ ಆಗಿರುವ ಹಾನಿ ಮತ್ತು ಪರಿಹಾರ ಕೈಗೊಂಡಿರುವ ಕುರಿತು ಪರಿಶೀಲಿಸಿ ಮಾತನಾಡಿದರು.
ಕಲಘಟಗಿ ಪಪಂ ವ್ಯಾಪ್ತಿಯಲ್ಲಿ 19 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ನಿತ್ಯ 3 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ₹ 35.38 ಕೋಟಿ ವೆಚ್ಚದ ನಿರಂತರ ನೀರು ಯೋಜನೆ ಕಾಮಗಾರಿಯು ಮೇ 18, 2024ರಂದು ಆರಂಭವಾಗಿದ್ದು, ಏ. 24, 2026ಕ್ಕೆ ಮುಕ್ತಾಯವಾಗುವ ಒಪ್ಪಂದವಾಗಿತ್ತು. ಗುತ್ತಿಗೆದಾರ ವಿಸ್ತರಣಾ ಅವಧಿ ಪಡೆದು, ಪ್ರಸ್ತಕ ತಿಂಗಳು ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದು ಜೂ. 15ರಿಂದ ಆರಂಭಿಸಲಾಗುವುದು ಎಂದರು.ಅಣ್ಣಿಗೇರಿ, ನವಲಗುಂದ, ಕುಂದಗೋಳ ಪಟ್ಟಣದಲ್ಲೂ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, 24/7 ನೀರು ಪೂರೈಸಲಾಗುವುದು ಎಂದ ಅವರು, ವರದಿ ಪ್ರಕಾಣ ಜಿಲ್ಲೆಯ ಎಲ್ಲ ಪಟ್ಟಣಗಳ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೆಲವೆಡೆ ತಾಂತ್ರಿಕ ಕಾರಣಗಳಿದ್ದು, ಅವುಗಳನ್ನು ಪರಿಹರಿಸಿ ಸುಗಮ ಮತ್ತು ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಸಚಿವರು ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೊಂಡಿದೆ. ಇಂತಹ ಬೇಸಿಗೆ ಸಮಯದಲ್ಲಿಯೂ ಪಾಲಿಕೆ ವ್ಯಾಪ್ತಿಯಲ್ಲಿ 4ರಿಂದ 5 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಹಿಂದೆ 8, 10, 15 ದಿನಗಳಿಗೆ ಇದ್ದ ಸರಬರಾಜು ವ್ಯವಸ್ಥೆ ಈಗ 4 ದಿನಕ್ಕೆ ಬಂದಿದೆ. ಆದಷ್ಟು ಶೀಘ್ರ ಅವಳಿ ನಗರದಲ್ಲಿ ನಿರಂತರ ನೀರು ಯೋಜನೆ ಆರಂಭವಾಗಲಿದೆ ಎಂದರು.ಬೀಜ-ಗೊಬ್ಬರು ದಾಸ್ತಾನು ಇರಲಿ:
16 ಗ್ರಾಮಕ್ಕೆ ಕೊಳವೆಬಾವಿ ನೀರು:
ಸಭೆಯಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಎಡಿಸಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.