- ಚನ್ನಗಿರಿ ತಾಲೂಕು ಸಂತೇಬೆನ್ನೂರಿನ ಪಿ.ಎಸ್.ಗೌಡರ್ ಮೃತ ವ್ಯಕ್ತಿ
- - -- ಕೃಷಿ ಇಲಾಖೆಯಲ್ಲಿ ಕೈಗೊಂಡಿದ್ದ ಕಾಮಗಾರಿ ಬಿಲ್ ಮಂಜೂರಾಗಿರಲಿಲ್ಲ
- ಪತ್ನಿ ವಸಂತಕುಮಾರಿ, ಮಗಳು ಕುಂಚ ಗೌಡರ್‌ಗೆ ನ್ಯಾಯ ಕಲ್ಪಿಸಲು ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆಕೌಟುಂಬಿಕ ಆಸ್ತಿ ವಿಚಾರ ಹಾಗೂ ಕೃಷಿ ಇಲಾಖೆಯಲ್ಲಿ ಕೈಗೊಂಡಿದ್ದ ಕಾಮಗಾರಿ ಬಿಲ್ ಮಂಜೂರಾಗದ ಹಿನ್ನೆಲೆ ಚನ್ನಗಿರಿ ತಾಲೂಕು ಸಂತೇಬೆನ್ನೂರು ಗ್ರಾಮದ ಗುತ್ತಿಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಂತೇಬೆನ್ನೂರಿನ ಪಿ.ಎಸ್. ಗೌಡರ್ (48) ಮೃತ ಗುತ್ತಿಗೆದಾರ. ಕಳೆದ ವರ್ಷ ಫೆಬ್ರುವರಿಯಲ್ಲಿ ಸಂತೇಬೆನ್ನೂರಿನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೆಲ ಕಾಮಗಾರಿ ಮುಗಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಬಿಲ್ ಕ್ಲಿಯರ್ ಮಾಡಿರಲಿಲ್ಲ. ಅಲ್ಲದೇ, ತಮ್ಮ ಸಹೋದರರು ಪೂರ್ವಜರ ಆಸ್ತಿ ಬಿಟ್ಟುಕೊಡಲು ಸಿದ್ಧರಿಲ್ಲದ ಕಾರಣಕ್ಕೆ ಮನನೊಂದಿದ್ದ ಗೌಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಾಮಗಾರಿ ಬಿಲ್ ಕ್ಲಿಯರ್ ಆಗದಿದ್ದುದು, ಪೂರ್ವಜರ ಆಸ್ತಿ ತಮ್ಮ ಪಾಲಿಗೆ ಬಾರದ್ದರಿಂದ ಪಿ.ಎಸ್.ಗೌಡರ್ ತೀವ್ರ ನೊಂದಿದ್ದರು. ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡಗಳಿಂದಾಗಿ ಆತ್ಮಹತ್ಯೆ ನಿರ್ಧಾರ ತೆಳೆದಿದ್ದಾರೆ. ತಮ್ಮ ಸಾವಿಗೆ ಅಣ್ಣ ಜಿ.ಎಸ್.ನಾಗರಾಜ, ಕಿರಿಯ ಸಹೋದರ ಗೌಡರ್ ಶ್ರೀನಿವಾಸ ಹಾಗೂ ಕಾಮಗಾರಿ ಬಿಲ್ ಮಾಡಿಕೊಡದ ಕೆಆರ್‌ಐಡಿಎಲ್ (ಕರ್ನಾಟಕ ರೂರಲ್ ಇನ್‌ಫ್ರಾಸ್ಟಕ್ಚರ್ ಡೆವಲಪ್ ಮೆಂಟ್ ಲಿಮಿಟೆಡ್) ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ತಮ್ಮ ಪತ್ನಿ ವಸಂತಕುಮಾರಿ, ಮಗಳು ಕುಂಚ ಗೌಡರ್ ಅವರಿಗೆ ನ್ಯಾಯ ಕೊಡಿಸುವಂತೆಯೂ ಮನವಿ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಪಿ.ಎಸ್.ಗೌಡರ್ ಪತ್ನಿ ವಸಂತಕುಮಾರಿ ಸಂತೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊನ್ನೆಯಷ್ಟೇ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಗುತ್ತಿಗೆದಾರರೊಬ್ಬರು ಕುಟುಂಬದ ಆಸ್ತಿ ವಿಚಾರ ಹಾಗೂ ತಾವು ಮಾಡಿದ್ದ ಸರ್ಕಾರಿ ಗುತ್ತಿಗೆ ಕಾಮಗಾರಿ ಹಣ ಬರದಿದ್ದರಿಂದ ಸಾವಿಗೆ ಶರಣಾಗಿರುವುದು ಸರ್ಕಾರವನ್ನು ಮತ್ತಷ್ಟು ಮುಜುಗರ ಉಂಟುಮಾಡಿದೆ.- - - -31ಕೆಡಿವಿಜಿ7, 8: ಪಿ.ಎಸ್.ಗೌಡರ್, ಗುತ್ತಿಗೆದಾರ