ಧಾರ್ಮಿಕ ಕಾರ್ಯಗಳಿಗೆ ಸಹಕರಿಸಿ: ಸ್ವಾಮೀಜಿ

KannadaprabhaNewsNetwork |  
Published : Aug 01, 2025, 12:00 AM IST
31 HRR 01ಹರಿಹರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ೬ನೇ ವರ್ಷದ ವಿನಾಯಕ ಮಹೋತ್ಸದ ಹಂದರಗಂಬ ಪೂಜಾ ಕಾರ್ಯಕ್ರಮದಲ್ಲಿ ಶಾರದೇಶಾನಂದ ಶ್ರೀ ಹಾಗೂ ಜಗದೀಶ್ವರ ಶ್ರೀ ಸಾನಿಧ್ಯವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಸನಾತನ ಹಿಂದೂ ಸಂಸ್ಕೃತಿಯನ್ನು ಬಿಂಬಿಸುವಂತ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಣೇಶ ಹಬ್ಬದ ಮಹೋತ್ಸವ ಆಚರಿಸುವಂತಾಗಲಿ ಎಂದು ಹರಿಹರದ ಶ್ರೀ ರಾಮಕೃಷ್ಣ ಪರಮಹಂಸ ಆಶ್ರಮದ ಶಾರದೇಶಾನಂದ ಶ್ರೀ ನುಡಿದಿದ್ದಾರೆ.

- ಹರಿಹರದಲ್ಲಿ ವಿನಾಯಕ ಮಹೋತ್ಸದ ಹಂದರಗಂಬ ಪೂಜಾ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಹರಿಹರ

ಸನಾತನ ಹಿಂದೂ ಸಂಸ್ಕೃತಿಯನ್ನು ಬಿಂಬಿಸುವಂತ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಣೇಶ ಹಬ್ಬದ ಮಹೋತ್ಸವ ಆಚರಿಸುವಂತಾಗಲಿ ಎಂದು ಹರಿಹರದ ಶ್ರೀ ರಾಮಕೃಷ್ಣ ಪರಮಹಂಸ ಆಶ್ರಮದ ಶಾರದೇಶಾನಂದ ಶ್ರೀ ನುಡಿದರು.

ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ೬ನೇ ವರ್ಷದ ವಿನಾಯಕ ಮಹೋತ್ಸದ ಹಂದರಗಂಬ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಧಾರ್ಮಿಕ ಹಬ್ಬಗಳಿಗೆ ಸಾರ್ವಜನಿಕರು ತನು ಮನ ಮತ್ತು ಧನದ ಸಾಕಾರ ನೀಡಿದಾಗ ಯಶಸ್ವಿ ಕಾರ್ಯಕ್ರಮ ಜರಗಲು ಸಾಧ್ಯ. ಇದಕ್ಕೆ ಎಲ್ಲರೂ ಸಹಕಾರವನ್ನು ನೀಡಬೇಕೆಂದರು.

ಕೋಡಿಯಾಳ ಹೊಸಪೇಟೆ ಗ್ರಾಮದ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿದರು.

ಆರಂಭದಲ್ಲಿ ಗೋ ಪೂಜೆ, ಭಾರತ ಮಾತೆ ಪೂಜೆ ಹಾಗೂ ಹಂದರಗಂಬ ಪೂಜೆಯಲ್ಲಿ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಪಾಲ್ಗೊಂಡಿದ್ದರು. ಬಿಜೆಪಿ ಮುಖಂಡರಾದ ಗಾಯತ್ರಿ ಸೀದ್ದೇಶ್ವರ, ನಗರಸಭಾ ಸದಸ್ಯ ಎಂ.ಜಂಬಣ್ಣ, ಎಸ್.ಎಂ ವಸಂತ್, ಆಟೋ ಹನುಮಂತಪ್ಪ, ಅಶ್ವಿನಿ ಕೃಷ್ಣ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಪೈಲ್ವಾನ್ ಚಂದಾಪುರ್, ರಾಘವೇಂದ್ರ ಉಪಾಧ್ಯ, ವಿವಿಧ ಸಮಿತಿ ಅಧ್ಯಕ್ಷರಾದ ಶೇಖರ್‌ಗೌಡ ಪಾಟೀಲ್ ಇತರರಿದ್ದರು.

- - -

-31 HRR 01:

ಹರಿಹರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಗುರುವಾರ ವಿನಾಯಕ ಮಹೋತ್ಸದ ಹಂದರಗಂಬ ಪೂಜಾ ಕಾರ್ಯಕ್ರಮ ನಡೆಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ