ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಪಂಚಾಯತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಗುರುವಾರ ವಿಶೇಷ ಚೇತನರಿಂದ ನಡೆದ ಮತದಾನ ಜಾಗೃತಿ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ ಮಾತನಾಡಿ, ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಅಂದಾಗ ಮಾತ್ರ ಮತದಾನದಿಂದ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ತಿಳಿಸಿದರು.ಲಚ್ಚಪ್ಪ ಗೋಡಚಿ, ರಾಜೇಶ್ವರಿ ಪಟ್ಟಣಶೆಟ್ಟಿ, ಎಸ್.ಬಿ.ಜವಳಿ, ಯಲ್ಲಪ್ಪ ಹುಲಮನಿ, ಪ್ರಕಾಶ ಗುಂಡಗಾವಿ, ಅನ್ನಪೂರ್ಣ ವಕ್ಕುಂದ, ಲಕ್ಷ್ಮೀ ವಾಲಿಕಾರ, ಮಡಿವಾಳಿ ಚಿನ್ನನವರ, ತಾಪಂ ಕಚೇರಿ ಸಿಬ್ಬಂದಿ, ತಾಲೂಕಿನ ಗ್ರಾಪಂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಪಾಲ್ಗೊಂಡಿದ್ದರು.