ಮಾಗಡಿ: ಸೊಸೈಟಿ ಅಭಿವೃದ್ಧಿಗೆ ಸದಸ್ಯರು, ನಿರ್ದೇಶಕರ ಸಹಕಾರ ಮುಖ್ಯ ಎಂದು ಅಧ್ಯಕ್ಷ ಎಚ್.ಜೆ.ಪುರುಷೋತ್ತಮ್ ಹೇಳಿದರು.
ಪಟ್ಟಣದ ಒಕ್ಕಲಿಗರ ಸಂಘದ ಶಾಲೆಯಲ್ಲಿ ಭಾನುವಾರ ನಡೆದ ದಿ ಭಾರತ್ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಡಾ.ಶಿವಕುಮಾರಸ್ವಾಮಿ ವೃತ್ತದಲ್ಲಿ ಸಂಘದ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷದ ವಾರ್ಷಿಕ ಸಭೆಯನ್ನು ನೂತನ ಕಟ್ಟಡದಲ್ಲಿಯೇ ನಡೆಸಲಾಗುವುದು,ಸೊಸೈಟಿಯಲ್ಲಿ ಮನೆ ಕಟ್ಟುವವರಿಗೆ ಶೇ.16ರಷ್ಟು ಬಡ್ಡಿ ದರವನ್ನು ಕಡಿಮೆ ಮಾಡಲಾಗಿದೆ. ಚಿನ್ನಾಭರಣದ ಮೇಲಿನ ಬಡ್ಡಿ ದರವೂ ಕಡಿಮೆ ಮಾಡಲಾಗಿದೆ. ಸದಸ್ಯರಿಗೆ ಸೊಸೈಟಿಯಲ್ಲಿ ಠೇವಣಿ ಇಟ್ಟವರಿಗೆ ಹಿಂದಿಗಿಂತ ಹೆಚ್ಚಿನ ಬಡ್ಡಿ ದರ ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ 1.50 ಕೋಟಿ ರು. ಹೆಚ್ಚಿನ ಠೇವಣಿ ಸಂಗ್ರಹಿಸಲಾಗಿದೆ ಎಂದರು.
ಕಳೆದ ಸಾಲಿನಲ್ಲಿ 21.12 ಲಕ್ಷ ಲಾಭ ಗಳಿಸಿದ್ದು, ಸೊಸೈಟಿಯಲ್ಲಿ 180 ದಿನಗಳಿಂದ 6 ವರ್ಷದವರೆಗೆ ನಿಶ್ಚಿತ ಠೇವಣಿ ಸ್ವೀಕರಿಸುತ್ತಿದೆ. ಸದಸ್ಯರು ಉಳಿತಾಯ ಖಾತೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಇ-ಸ್ಟಾಂಪಿಂಗ್ ಸೌಲಭ್ಯವಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಠೇವಣಿಗಳ ಮೇಲೆ ಶೇ.1ರಷ್ಟು ಹೆಚ್ಚಿನ ಬಡ್ಡಿ ನೀಡುತ್ತಿದ್ದು, ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಚ್.ಜೆ.ಪುರುಷೊತ್ತಮ್ ಮನವಿ ಮಾಡಿದರು.ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಇಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಷೇರುದರಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ಸಭೆಯಲ್ಲಿ ಸೊಸೈಟಿ ಉಪಾಧ್ಯಕ್ಷರಾದ ಪ್ರೇಮ, ನಿರ್ದೇಶಕರಾದ ಟಿ.ಕೆ.ರಾಮು, ಶ್ರೀನಿವಾಸಯ್ಯ, ಜಿ.ಸಿ.ನಾಗರಾಜ್, ಕಿರಣ್‌ಕುಮಾರ್, ವೆಂಕಟೇಶಮೂರ್ತಿ, ಶಾಂತಕುಮಾರ್, ಪಿ.ಎನ್.ಯತೀಶ್, ಜಯಮ್ಮ, ವಿ.ಶೃತಿ, ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಕಾರ್ಯದರ್ಶಿ ಟಿ.ಜಯರಾಮ್, ಭಾಗ್ಯಮ್ಮ, ವಿಜಯಕೃಷ್ಣ, ನಾರಾಯಣ್, ಕುಮಾರಸ್ವಾಮಿ ಇತರರು ಭಾಗವಹಿಸಿದ್ದರು.