ಅಧಿಕಾರಿಗಳ ಸಭೆ । ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಾಹ ಕಾರ್ಯಕ್ರಮ । ವಧು-ವರರಿಗೆ ಅಗತ್ಯ ಸೌಲಭ್ಯ
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಆ.21ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲು ಎಲ್ಲರೂ ಸಹಕಾರ ನೀಡಬೇಕೆಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಆ.21ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲು ಎಲ್ಲರೂ ಸಹಕಾರ ನೀಡಬೇಕೆಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ಹನೂರಿನಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಆ.21ರಂದು ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 63 ಜೋಡಿಗಳು ಅಂತಿಮವಾಗಿ ನೋಂದಣಿ ಮಾಡಿಕೊಂಡಿದ್ದು ಆ.21ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಧುವಿಗೆ ನಾಲ್ಕು ಗ್ರಾಂ ಚಿನ್ನದ ತಾಳಿ, ಸೀರೆ, ಕಾಲುಂಗುರ, ವರನಿಗೆ ಪಂಚೆ, ಶರ್ಟ್, ಶಲ್ಯ ವಿತರಣೆ ಮಾಡಲಿದ್ದೇವೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಶಾಸಕರ ಗಮನಕ್ಕೆ ತಂದರು. ಈ ವೇಳೆ ವಧು ವರರಿಗೆ ನೀಡುವ ಬಟ್ಟೆಗಳನ್ನು ಶಾಸಕ ಎಂ.ಆರ್. ಮಂಜುನಾಥ್ ಪರಿಶೀಲಿಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಂದು ಮೆಗಾವ್ಯಾಟ್ ಸೋಲಾರ್ ಪವರ್ ಸ್ಟೇಷನ್, ದೊಡ್ಡಕೆರೆ ಮೈದಾನ, ಮ್ಯೂಸಿಯಂ, 27 ಕೋಟಿ ರು. ವೆಚ್ಚದ ಯುಜಿಡಿ ಕಾಮಗಾರಿಗಳು ಉದ್ಘಾಟನೆ ಆಗಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸದೆ ಇರುವುದರಿಂದ ಯಾವುದೇ ಉದ್ಘಾಟನಾ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಕೇವಲ ಸಾಮೂಹಿಕ ವಿವಾಹ ಮಾತ್ರ ನೆರವೇರಲಿದೆ ಎಂದರು.
ಉಪ ಕಾರ್ಯದರ್ಶಿ ಚಂದ್ರಶೇಖರ್ , ದೇವಾಲಯದ ಆಗಮಿಕರಾದ ಕರವೀರ ಸ್ವಾಮಿ, ಪ್ರಸಾದ್, ಬೇಡಗಂಪಣ ಸಮುದಾಯದ ಹಿರಿಯ ಅರ್ಚಕ ಕೆ.ವಿ. ಮಾದೇಶ್, ಇನ್‌ಸ್ಪೆಕ್ಟರ್ ಜಗದೀಶ್, ಸಿಬ್ಬಂದಿ ಸರಗೂರು ಮಹದೇವಸ್ವಾಮಿ, ಜನಾರ್ಧನ್, ದಾಸೋಹ ಉಸ್ತುವಾರಿ ಸ್ವಾಮಿ, ಪಾರು ಪತ್ತೆದಾರ ಮಹಾಲಿಂಗನ ಕಟ್ಟೆ ಮಹದೇವಸ್ವಾಮಿ, ಮಲ್ಲಿಕಾರ್ಜುನ್ ನಾಗರಾಜು, ಎಇಇ ಚಿನ್ನಣ್ಣ, ಮಹೇಶ್ ಹಾಜರಿದ್ದರು.