ಬ್ರಾಹ್ಮಣ ವಾರ್ಷಿಕ ಮಹಾಸಭೆಬೇಲೂರು: ನಮ್ಮ ದೇಶದ ಸಂಸ್ಕೃತಿ, ಧಾರ್ಮಿಕ ಪರಂಪರೆ ಉಳಿಸುವಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹೇಳಿದರು. ಪಟ್ಟಣದ ಕೋಟೆ ಶೃಂಗೇರಿ ಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬ್ರಾಹ್ಮಣ ಮಹಾಸಭಾದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ರಾಜ ಮಹಾರಾಜರ ಕಾಲದಲ್ಲಿ ರಾಜಗುರುವಾಗಿ ಮಾರ್ಗದರ್ಶನ ನೀಡುತ್ತ ಉತ್ತಮ ಆಡಳಿತ ನಡೆಸುವಲ್ಲಿ ಅವರ ಸೇವೆ ಅವಿಸ್ಮರಣೀಯ. ಪುರಾತನ ಸಂಸ್ಕೃತಿ, ಧಾರ್ಮಿಕತೆಗೆ ಹೆಸರಾಗಿರುವ ಭಾರತ ದೇಶ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯದತ್ತ ವಾಲುತ್ತಿರುವುದು ವಿಷಾದನೀಯ. ಬ್ರಾಹ್ಮಣ ಸಮಾಜ ಸಂಸ್ಕೃತಿ, ಧಾರ್ಮಿಕ ಪರಂಪರೆ ಉಳಿಸುವಲ್ಲಿ ಸಾಕಷ್ಟು ಪ್ರಯತ್ನ ಪಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಿ.ಆರ್. ವಿಜಯ್ ಕೇಶವ್, ವಿಪ್ರ ಮಹಿಳಾ ಒಕ್ಕೂಟ ಅಧ್ಯಕ್ಷ ಶ್ರೀವಿದ್ಯಾ ಶ್ರೀಹರಿ, ಚನ್ನಕೇಶವ ದೇಗುಲ ಆಗಮಿಕ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷರಾದ ಕೆ.ಆರ್. ಮಂಜುನಾಥ್ ತೊ.ಚ ಅನಂತ ಸುಬ್ಬರಾಯ, ತೊ.ಚ ನರಸಿಂಹಮೂರ್ತಿ, ಅನಂತಮೂರ್ತಿ, ರಘೋತ್ತಮ, ಚೈತನ್ಯ, ಕೋಟೆ ಶ್ರೀನಿವಾಸ್, ಶ್ರೀನಿಧಿ, ಶ್ರೀವತ್ಸ, ರಾಘವೇಂದ್ರ ಹೊಳ್ಳ, ಅಮಿತ್ ಶೆಟ್ಟಿ ಇದ್ದರು.
ಬೇಲೂರು ತಾಲೂಕು ಬ್ರಾಹ್ಮಣ ಮಹಾಸಭಾದ ವಾರ್ಷಿಕ ಮಹಾಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿದರು.