ʻಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮʼ ಕೊಡುಗೆ

KannadaprabhaNewsNetwork |  
Published : Mar 08, 2026, 02:45 AM IST
 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳು ಘೋಷಣೆಯಾಗಿವೆ. ಕೊಡವ ಮತ್ತು ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ವಿವಿಧ ಯೋಜನೆಗಳ ಅನುಷ್ಠಾನ ಮಾಡುವುದಾಗಿ ಉಲ್ಲೇಖಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳು ಘೋಷಣೆಯಾಗಿವೆ. ಕೊಡವ ಮತ್ತು ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ವಿವಿಧ ಯೋಜನೆಗಳ ಅನುಷ್ಠಾನ ಮಾಡುವುದಾಗಿ ಉಲ್ಲೇಖಿಸಿದ್ದಾರೆ.

ಮಾನವ ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಮಾನವ-ವನ್ಯಜೀವಿ ಸಂಘರ್ಷ ನಿವಾರಣೆ ಕಾರ್ಯತಂತ್ರ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಿನ ಐದು ವರ್ಷದಲ್ಲಿ 1500 ಕೋಟಿ ರು. ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಇರುಳ, ಸೋಲಿಗ, ಜೇನು ಕುರುಬ, ಕಾಡು ಕುರುಬ, ಕುಡಿಯ, ಸಿದ್ದಿ ಮತ್ತು ಇತರೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡದ ಪಿವಿಟಿಜಿಗೆ ʻಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮʼ ಸ್ಥಾಪನೆ ಘೋಷಣೆ ಮಾಡಲಾಗಿದೆ.

ಹಾರಂಗಿ ಬಲದಂಡೆ ಕಾಲುವೆ ಆಧುನೀಕರಣ:ಹಾರಂಗಿ ಜಲಾಶಯದ ಕೆಳ ಭಾಗದಲ್ಲಿ ಸೇತುವೆ ನಿರ್ಮಾಣ. ಹಾರಂಗಿ ಎಡದಂಡೆ ನಾಲೆಯ ಅಡಿಯಲ್ಲಿ ಸುಧಾರಣೆ,

ಮಡಿಕೇರಿ–ಕುಶಾಲನಗರ ಪ್ರದೇಶದಲ್ಲಿ ಚೆಕ್ ಡ್ಯಾಂ ಮತ್ತು ನಾಲೆ ನಿರ್ಮಾಣ ಕಾಮಗಾರಿ ಮಾಡುವುದಾಗಿ ಉಲ್ಲೇಖಿಸಲಾಗಿದೆ. ಪೊನ್ನಂಪೇಟೆ ಭಾಗದಲ್ಲಿ ಚೆಕ್ ಡ್ಯಾಂ ಹಾಗೂ ನಾಲೆ ನಿರ್ಮಾಣ. ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕಿನ ಕಿರಿಕೊಡ್ಲಿ ಕೆರೆ ಅಭಿವೃದ್ಧಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.ಮಡಿಕೇರಿ ತಾಲೂಕಿನ ಕುಂಜಿಲ ಸಾರ್ವಜನಿಕ ಕೆರೆ ಅಭಿವೃದ್ಧಿ, ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕಿನ ಐಗೂರು-ಅರೆಯೂರಿನಲ್ಲಿ ನಾಲೆ ಹಾಗೂ ತಡೆಗೋಡೆ ಅಭಿವೃದ್ಧಿ ಘೋಷಣೆ ಮಾಡಲಾಗಿದೆ. ವಿರಾಜಪೇಟೆ ತಾಲೂಕು ಭಾಗದಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣ, ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಇದೊಂದು ನಿರಾಸದಾಯಕ ಬಜೆಟ್. ಈ ಬಜೆಟ್ ಘೋಷಣೆ, ಭರವಸೆಯಿಂದ ಕೂಡಿದೆಯೇ ಹೊರತು ಅನುಷ್ಠಾನ ಆಗುವಂಥದ್ದು ಯಾವುದೂ ಇಲ್ಲ. ಕೊಡಗಿನ ಪಾಲಿಗಂತೂ ಏನೇನೂ ಇಲ್ಲದ ಬಜೆಟ್ ಆಗಿದೆ. ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ವಾರ್ಷಿಕ 100 ಕೋಟಿ ರೂ. ಕೊಡಲಾಗುತ್ತಿತ್ತು. ಆದರೆ ಈಗ ಈ ಯೋಜನೆಯೇ ಇಲ್ಲ. ಕಳೆದ ವರ್ಷ ವಿರಾಜಪೇಟೆಗೆ 20 ಕೋಟಿ ರು. ಕೊಡಲಾಗಿತ್ತು. ಈ ವರ್ಷ ಅದೂ ಇಲ್ಲ.

-ಕೆ.ಜಿ. ಬೋಪಯ್ಯ, ಮಾಜಿ ಸ್ಪೀಕರ್ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ ಒಂದು ಸಾವಿರ ಕೋಟಿ ರು. ಘೊಷಣೆ ಮಾಡಬಹುದೆನ್ನುವ ನಿರೀಕ್ಷೆ ಇತ್ತು. ಆದರೆ ಇದು ದುರದೃಷ್ಟದ ಬಜೆಟ್. ಬಡವರು, ಎಸ್‌ಸಿ, ಎಸ್‌ಟಿಗೆ ಪ್ರಯೋಜನ ಇಲ್ಲದ ಬಜೆಟ್. ಉದ್ಯೋಗ ಸೃಷ್ಟಿಗೂ ಯಾವುದೇ ಯೋಜನೆಗಳು ಕಂಡು ಬರುತ್ತಿಲ್ಲ. ಗುತ್ತಿಗೆದಾರರಿಗೆ ಉಳಿಸಿಕೊಂಡಿರುವ ಸಾವಿರಾರು ಕೋಟಿ ರು. ಪಾವತಿಸುವ ಬಗ್ಗೆಯೂ ಚಕಾರ ಇಲ್ಲ. ಶಿಕ್ಷಣಕ್ಕೆ ಕಳೆದ ವರ್ಷ ಶೇ.12ರಷ್ಟು ಅನುದಾನ ಇಡಲಾಗಿತ್ತು. ಈ ಬಾರಿ ಶೇ. 10ಕ್ಕೆ ಇಳಿಸಿರುವುದು ಸರಿಯಲ್ಲ. ಮೂಲ ಸೌಕರ್ಯಗಳನ್ನೂ ನಿರ್ಲಕ್ಷಿಸಲಾಗಿದೆ.

-ಎಂ.ಪಿ. ಅಪ್ಪಚ್ಚುರಂಜನ್ಮಾಜಿ ಸಚಿವರುಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರನ್ನು ಸಾಲದ ಶೂಲಕ್ಕೆ ತಳ್ಳಿದ ದಾಖಲೆಯನ್ನೂ ಬರೆದಿದ್ದಾರೆ. ಈ ಬಜೆಟ್ ನಲ್ಲಿ ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿವೆ. ಸರಕಾರಕ್ಕೆ ಕಾವೇರಿ ತವರು ಜಿಲ್ಲೆ ಕೊಡಗಿನ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಕಾಣುತ್ತಿಲ್ಲ. ಜಿಲ್ಲೆಗೆ ಹೊಸ ಯೋಜನೆಗಳನ್ನೇ ಘೋಷಿಸಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಉಲ್ಲೇಖವಿಲ್ಲ. ವನ್ಯಜೀವಿಗಳ ದಾಳಿ ತಡೆಗೆ ವಿಶೇಷ ಅನುದಾನ ಘೋಷಿಸಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಿಲ್ಲ, ಜೀವನದಿ ಕಾವೇರಿ ಕಲುಷಿತ ತಡೆಗೆ ಯೋಜನೆ ರೂಪಿಸಿಲ್ಲ, ಬಡವರಿಗೆ ನಿವೇಶನ, ವಸತಿ ಸೌಲಭ್ಯ ನೀಡುವ ಕುರಿತು ಸರಕಾರದ ಭರವಸೆಗಳಿಲ್ಲ.

-ಚೆಪ್ಪುಡಿರ ರಾಕೇಶ್ ದೇವಯ್ಯ

ವಿರಾಜಪೇಟೆ ಬಿಜೆಪಿ ಮಂಡಲ ವಕ್ತಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೈಕ್‌ಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಸಂಚಾರ: ಪ್ರಕರಣ ದಾಖಲು
ಸಾಲದ ಹೊರೆ ಹೆಚ್ಚಿಸಿ, ಕರಾವಳಿ ಕಡೆಗಣಿಸಿದ ಬಜೆಟ್: ಕಾಮತ್‌