ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಹಾನಗಲ್ ಕುಮಾರ ಮಹಾಸ್ವಾಮೀಜಿ ಅವರ 157ನೇ ಜಯಂತಿ ಮಹೋತ್ಸವ, ಕಾಯಕಯೋಗಿ ನಾಗನೂರ ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿ 30ನೇ ಪುಣ್ಯ ಸ್ಮರಣೋತ್ಸವ ಹಾಗೂ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ರಚಿಸಿದ ತ್ರಿಕಾಲ ಪೂಜಾನಿಷ್ಠ ಶತಾಯುಷಿ ಡಾ.ಶಿವಬಸವ ಸ್ವಾಮೀಜಿ ನಾಗನೂರ ಕುರಿತು ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿವಯೋಗಿಗಳು ಸಹಬಾಳ್ವೆ, ಸಮಾನತೆಯಿಂದ ದಿವ್ಯ ಶಕ್ತಿಯಾಗಿದ್ದಾರೆ. ಹಾನಗಲ್ ಕುಮಾರ ಸ್ವಾಮೀಜಿ, ಮುರುಘೇಂದ್ರ ಶಿವಯೋಗಿಗಳು, ಮುರಗೋಡ ಮಹಾಂತ ಶಿವಯೋಗಿಗಳು, ಗುರು ಸಿದ್ಧಾರೂಢರು ಸಮಾಜದ ಬದಲಾವಣೆ, ನಾಡು-ನುಡಿಗಾಗಿ ಅವಿರತ ಶ್ರಮಿಸಿದ್ದು, ಆ ಮಹಾತ್ಮರು ಸದಾ ಸ್ಮರಣೆಯಲ್ಲಿರಬೇಕು. ಯುವಕರು ಅಧ್ಯಾತ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ದೇಶ ಸುಭದ್ರವಾಗಲು ಸಾಧ್ಯವೆಂದರು.ಸಾನ್ನಿಧ್ಯ ವಹಿಸಿದ್ದ ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಸುಮಾರು ವರ್ಷಗಳಿಂದ ಬೈಲಹೊಂಗಲ ನಾಡಿನಲ್ಲಿ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಶಿವಯೋಗ ಮಂದಿರ ನಿರ್ಮಾಣದ ಕರ್ತೃ ಲಿಂ.ಹಾನಗಲ್ ಕುಮಾರೇಶ್ವರರ ಜಯಂತಿ ಕಾರ್ಯಕ್ರಮ ಏರ್ಪಡಿಸಿ ಈ ಭಾಗದ ಜನರನ್ನು ಸುಜ್ಞಾನರನ್ನಾಗಿಸಿ ಆ ಮೂಲಕ ಮುಖ್ಯ ವಾಹಿಣಿಗೆ ತರುವಲ್ಲಿ ಪ್ರಯತ್ನದ ಕಾರ್ಯ ಮೆಚ್ಚುವಂತದ್ದು ಎಂದರು.
ಡಾ.ಮಹಾಂತಪ್ರಭು ಸ್ವಾಮೀಜಿ ಅವರಿಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಕುರಿತು ಪ್ರವಚನ ಜರುಗಿತು. ರೋಟರಿ ಮಾಜಿ ಅಧ್ಯಕ್ಷ ಮಹೇಶ ಬೆಲ್ಲದ ಸ್ವಾಗತಿಸಿದರು. ಶರಣೆ ಶೋಭಾ ಛಬ್ಬಿ ನಿರೂಪಿಸಿ, ವಂದಿಸಿದರು.