ಕನ್ನಡಪ್ರಭ ವಾರ್ತೆ ಬಾದಾಮಿಸಮಗ್ರ ಕನ್ನಡಗರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾವೇರಿ ನೀರಿನ ಹೋರಾಟಕ್ಕಾಗಿ ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಸಮಗ್ರ ಕನ್ನಡಗರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾವೇರಿ ನೀರಿನ ಹೋರಾಟಕ್ಕಾಗಿ ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ ತಿಳಿಸಿದರು. ನಗರದ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ, ಕಳಸಾ ಬಂಡೂರಿ, ಉತ್ತರ ಕರ್ನಾಟಕ ಅಭಿವೃದ್ಧಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದ ಅವರು, ಸಮಗ್ರ ಕನ್ನಡಗರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಂದ್ ನಡೆಯಲಿದ್ದು, ವಾಹನ, ಬಸ್, ಅಟೋ, ಹೋಟೆಲ್ ಮಾಲೀಕರು ಸೇರಿದಂತೆ ಎಲ್ಲರೂ ಬೆಂಬಲ ಕೊಡುತ್ತಿದ್ದಾರೆ. ಮಳೆಯಾಗಿದೆ ನೀರು ಬಂದಿದೆ ಬಂದ್ ಮಾಡುವುದು ಬೇಡ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ತಮಿಳುನಾಡಿನ ವಿರುದ್ಧ ಬಂದ್ ಮಾಡಿಯೇ ತಿರುತ್ತೇವೆ. ಬಂದ್ ಎಷ್ಟೇ ಅಪಪ್ರಚಾರ ಮಾಡಿದರೂ ನಿಲ್ಲಲ್ಲ. ಬಂದ್ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಬಂದ್ ಶಾಂತಿಯುತವಾಗಿರುತ್ತದೆ. ಎಲ್ಲ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ. ಜನತೆ ಇದಕ್ಕೆ ಕಿವಿಕೊಡಬೇಡಿರಿ ಬಂದ್ ಗೆ ಬೆಂಬಲ ನೀಡಲು ಮನವಿ ಮಾಡಿದರು.ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಟಾಪನೆ ಆಗಲಿ; ಚಾಲುಕ್ಯರ ನಾಡಿನಲ್ಲಿ ಇಮ್ಮಡಿ ಪುಲಿಕೇಶಿಯ ಮೂರ್ತಿ ಪ್ರತಿಷ್ಟಾಪನೆ ಆಗದೇ ಇರುವುದು ದುರಂತ. ಕನ್ನಡಿಗರಿಗೆ ಐತಿಹಾಸಿಕ ದಾಖಲೆ, ಚಾಲುಕ್ಯರ ಕೋಟೆ ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಟಾಪನೆ ಆಗಬೇಕು ಎಂದರು. ಕೇಸ್ ಹಿಂಪಡೆಯಬೇಕು; ಜನರ ಗೋಷ್ಕರ ಹೋರಾಟ ಮಾಡಿದ ಹೋರಾಟಗಾರರ ಮೇಲೆ, ರೈತರ ಮೇಲೆ, ಹಾಕಿದ ಕೇಸ್ ಗಳನ್ನು ಸರಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಶ್ವೇತಪತ್ರ ಹೊರಡಿಸಲು ಆಗ್ರಹ; ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದರು. ಬನಶಂಕರಿದೇವಿ ದರ್ಶನ ಪಡೆದ ವಾಟಾಳ್; ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿದ ಕನ್ನಡ ಚಳುವಳಿಯ ನಾಯಕ ವಾಟಾಳ್ ನಾಗರಾಜ ಬಾದಾಮಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಮೀಪದ ಸುಕ್ಷೇತ್ರ ಬನಶಂಕರಿದೇವಿ ದರ್ಶನ ಪಡೆದರು.