ಭೂಮಿಯ ಫಲವತ್ತತೆ ನಾಶಮಾಡುವ ರಸಗೊಬ್ಬರ ನಿಯಂತ್ರಿಸಿ

KannadaprabhaNewsNetwork |  
Published : Jun 18, 2026, 01:15 AM IST
9999 | Kannada Prabha

ಸಾರಾಂಶ

ಭೂಮಿಯ ಫಲವತ್ತತೆ ಕಾಪಾಡಲು ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಬದಲು ಸಾವಯವ ಗೊಬ್ಬರ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟು ಪರಿಸರಸ್ನೇಹಿ, ಸಾಂಪ್ರದಾಯಕ ಕೃಷಿ ಪದ್ದತಿ ಅನುಸರಿಸಲು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುಭೂಮಿಯ ಫಲವತ್ತತೆ ಕಾಪಾಡಲು ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಬದಲು ಸಾವಯವ ಗೊಬ್ಬರ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟು ಪರಿಸರಸ್ನೇಹಿ, ಸಾಂಪ್ರದಾಯಕ ಕೃಷಿ ಪದ್ದತಿ ಅನುಸರಿಸಲು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸಲಹೆ ಮಾಡಿದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ 12 ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಖೇತ್ ಬಚಾವೋ ಅಭಿಯಾನ್‌ ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿ ಉತ್ತೇಜಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುವುದನ್ನು ತಪ್ಪಿಸಲು ರೈತರು ನೈಸರ್ಗಿಕ ಕೃಷಿ ಪದ್ದತಿ ಆನುಸರಿಸಬೇಕು. ಸಾವಯವ ಕೃಷಿ ಪ್ರೋತ್ಸಾಹಿಸಲು ನರೇಂದ್ರ ಮೋದಿಯವರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆತಂದಿದೆ.ರೈತರು ಯೋಜನೆಗಳ ಪ್ರಯೋಜನ ಪಡೆದುದೇಶದಆಹಾರಧಾನ್ಯಉತ್ಪಾದನೆ ಹೆಚ್ಚಾಗಲು ಕೈ ಜೋಡಿಸಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಪ್ರಧಾನಮಂತ್ರಿ ಮೋದಿಯವರ ಮಹತ್ವಾಕಾಂಕ್ಷೆಯ ನೈಸರ್ಗಿಕ ಕೃಷಿ ಪದ್ದತಿ ಅನುಸರಿಸಿ ಭೂಮಿಯ ಫಲವತ್ತತೆಯನ್ನು ರಕ್ಷಣೆ ಮಾಡಬೇಕು.ರೈತ ಮೋರ್ಚಾ ಮುಖಂಡರು, ಕಾರ್ಯಕರ್ತರು ರೈತರಲ್ಲಿ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಮೋರ್ಚಾ ಕಾರ್ಯಕರ್ತರೇ ನೈಸರ್ಗಿಕ ಕೃಷಿ ಅನುಸರಿಸಿ ರೈತರಿಗೆ ಪ್ರೇರಣೆಯಾಗಬೇಕು ಎಂದರು. ರಸಗೊಬ್ಬರಗಳ ಬದಲು ಕೊಟ್ಟಿಗೆ ಗೊಬ್ಬರ, ಹಸಿರು ಗೊಬ್ಬರ, ಜೀವಾಮೃತ ಬಳಕೆಯನ್ನು ಹೆಚ್ಚು ಮಾಡಬೇಕು. ಆರಂಭದಲ್ಲಿ ಇಳುವರಿ ಕಡಿಮೆಯಾದರೂ ಭೂಮಿಯ ಫಲವತ್ತತೆ ಹೆಚ್ಚಾದಂತೆ ಇಳುವರಿಯೂ ಹೆಚ್ಚುತ್ತದೆ. ಎಲ್ಲಾ ಮಂಡಲಗಳಲ್ಲಿ, ನೈಸರ್ಗಿಕ ತೋಟಗಳಲ್ಲಿ ರೈತ ಮೋರ್ಚಾದಿಂದ ರೈತರ ಸಭೆಗಳನ್ನು ಆಯೋಜಿಸಿ ಪ್ರಚಾರ ಮಾಡಬೇಕು ಎಂದು ಹೇಳಿದರು.ಪ್ರಾಸ್ತಾವಿಕ ಮಾತುಗಳಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮೋದಿಯವರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಹೀಗೇ ಮುಂದುವರೆದರೆ ಮುಂದೆ ಭೂಮಿಯಲ್ಲಿ ಏನೂ ಬೆಳೆಯಲಾಗದೆ ಭೂಮಿ ಬರಡಾಗುವ ಅಪಾಯವಿದೆ. ರೈತರಾದವರು ತಮ್ಮ ಜಮೀನಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಸಗಣಿ, ಹಸಿರು ಗೊಬ್ಬರ ಬಳಸಿ ನೈಸರ್ಗಿಕವಾಗಿ ಭೂಮಿಯ ಫಲವತ್ತತೆ ಹೆಚ್ಚಿಸಬೇಕು.ಈ ಬಗ್ಗೆ ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಕಾಳಜಿಯಿಂದ ಕಾರ್ಯಕ್ರಮ ರೂಪಿಸಿ ರೈತರಿಗೆ ಮನವರಿಕೆ ಮಾಡಿಕೊಡಬೇಕು. ರೈತ ಮೋರ್ಚಾದಿಂದ ಪ್ರತಿ ಮಂಡಲಗಳಲ್ಲಿ ರೈತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಂತರ ಕೃಷಿ ತಜ್ಞರುರೈತರಿಗಾಗಿ ನೈಸರ್ಗಿಕ ಕೃಷಿ ಕುರಿತ ಕಾರ್ಯಾಗಾರ ನಡೆಸಿಕೊಟ್ಟರು.ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಡಾ.ಎನ್. ಯೋಗಾನಂದನ್, ಕೃಷಿ ಇಲಾಖೆ ನಿರ್ದೇಶಕಡಾ.ದಿವಾಕರ್, ಬಿಜೆಪಿ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಶಿವಕುಮಾರ್, ಭೈರಣ್ಣ, ರವಿಶಂಕರ್, ಹೇಮಂತಕುಮಾರ್, ಗಿರೀಶ್, ಚೈತ್ರ ಮಂಜುನಾಥ್, ಶಶಿಧರ್, ರಾಜಶೇಖರ್, ಧನುಷ್ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಧಿಕಾರಿಗಳಿಂದ ರೈತರಿಂದ ಅರ್ಜಿಗಳ ಸ್ವೀಕಾರ
ಕಾಮಗಾರಿಗೆ ಶಾಸಕ ಸುರೇಶ್‌ಗೌಡ ಚಾಲನೆ