ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹಾಡೋನಹಳ್ಳಿ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಟೊಮೆಟೋ ಬೆಳೆಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನ ಅಥವಾ ರೈತ ಉತ್ಪಾದಕ ಸಂಸ್ಥೆಗಳಿಂದ ಮತ್ತು ಇತರ ಕೃಷಿ ಪರಿಕರಗಳ ಕಂಪನಿಗಳಿಂದ ತಾಂತ್ರಿಕ ಮಾಹಿತಿ ಪಡೆದು ಸಕಾಲ ಹಾಗೂ ನಿರ್ದಿಷ್ಟ ಪ್ರಮಾಣದಲ್ಲಿ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಿ ಹೆಚ್ಚು ಇಳುವರಿ ಮತ್ತು ಗುಣಮಟ್ಟದ ಫಸಲನ್ನು ಪಡೆಯಲು ಸಲಹೆ ನೀಡಿದರು.ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ಟೊಮೆಟೋ ಬೆಳೆಯಲ್ಲಿ ತಾಂತ್ರಿಕ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿದರು. ಆಧುನಿಕ ತಾಂತ್ರಿಕತೆಗಳಾದ ಹನಿ ನೀರಾವರಿ ಮತ್ತು ರಸಾವರಿ ಪದ್ಧತಿ, ಹೊದಿಕೆ, ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಂಡು ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಲ್ಲಿ ರೈತರ ಹೆಚ್ಚು ಉತ್ಪಾದನೆ ಜೊತೆಗೆ ಗುಣಮಟ್ಟದ ಇಳುವರಿ ಪಡೆಯಬಹುದೆಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆ ಬೇಸಾಯದಲ್ಲಿ ಜೈವಿಕ ಗೊಬ್ಬರಗಳು, ಜೈವಿಕ ಪೀಡೆ ನಾಶಕಗಳು ಮತ್ತು ಇತರೆ ಜೈವಿಕ ಪ್ರಚೋದಕಗಳನ್ನು ಹೆಚ್ಚು ಬಳಸಿ, ಬೆಳೆಯನ್ನು ಸಂರಕ್ಷಿಸಿಕೊಂಡು ರಾಸಾಯನಿಕ ಮುಕ್ತ ಫಸಲು ಪಡೆಯಬೇಕೆಂದು ಮಾಹಿತಿ ನೀಡಿದರು.ಅರ್ಕಾವತಿ ರೈತ ಉತ್ಪಾದಕ ಸಂಸ್ಥೆಯ ಭಾಸ್ಕರ್, ಮುನಿಕೃಷ್ಣ ಹಾಗೂ ಗ್ರೀನ್‌ಸ್ಟಾರ್ ಫರ್ಟಿಲೈಸರ್ ಲಿಮಿಟೆಡ್‌ನ ದರ್ಶನ್, ಶ್ರೀನಿವಾಸ್, ಕೆ., ಶ್ರೀಧರ್, ಮೈತ್ರಿ ಸರ್ವ ಸೇವಾ ಸಮಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರೀಶ್‌ಬಾಬು ಮತ್ತು ಬಸವೇಶ್ವರ ಆಗ್ರೋ ಕೇಂದ್ರದ ಮಾಲೀಕರಾದ ಸುಬ್ಬೇಗೌಡ, ರೈತ ಹಾಗೂ ರೈತ ಮಹಿಳೆಯರು, ರೈತ ಉತ್ಪಾದಕ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.