ಆರೋಗ್ಯವಂತ ಜೀವನಕ್ಕೆ ಅನುಕೂಲ

KannadaprabhaNewsNetwork |  
Published : Jun 23, 2024, 02:00 AM IST
ಗುಬ್ಬಿ ತಾಲೂಕಿನ ನಿಟ್ಟೂರಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ವಿವಿದ ಶಾಲೆಗಳ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯಯನ್ನು ಆಚರಿಸಲಾಯಿತು, | Kannada Prabha

ಸಾರಾಂಶ

ಆರೋಗ್ಯವಂತ ಜೀವನ ಮಾಡುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಾಂಶುಪಾಲ ರಾಮದಾಸ್ ಹೇಳಿದರು.

ಗುಬ್ಬಿ: ಆರೋಗ್ಯವಂತ ಜೀವನ ಮಾಡುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಾಂಶುಪಾಲ ರಾಮದಾಸ್ ಹೇಳಿದರು.

ತಾಲೂಕಿನ ನಿಟ್ಟೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ಅತ್ಯುತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗ ಭಾರತದಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ. ಯೋಗದ ಮಹತ್ವ ಏನೆಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದರು.

ಯೋಗ ದಿನದ ಅಂಗವಾಗಿ ಪ್ರಾಣಯಾಮ, ಮರ್ಕಾಟಸನ, ಸೇತುಬಂಧಾಸನ, ಉರ್ಧಾಧನುರ್ವಾಸ, ಚಕ್ರಸಾನ, ನವಾಸನ, ಮರೀಚಸನ, ಗೋಮುಖಸನ, ವಜ್ರಸನ, ಸೌಂದರ್ಯಕಸನ, ಶಶಂಕಾಸನ, ಮಂಡೂಕಸನ. ಸಿಂಹಾಸನ, ಸೂರ್ಯ ನಮಸ್ಕಾರ, ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ಮಲ್ಲೇಶ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಯಪ್ರಕಾಶ್, ಪದ್ಮನಾಮ, ಯೋಗ ಗುರು ಮಹಾವೀರ್, ಸುಮಂಗಳ, ಅಪರ್ಣ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!
ಹೊಸ ವರ್ಷ: ದೇವಾಲಯಗಳಿಗೆ ಭಕ್ತರ ದಾಂಗುಡಿ