30ರಂದು ಜಗಳೂರಲ್ಲಿ ವಿಕಲಚೇತನರ ಸಮಾವೇಶ, ಅಭಿಯಾನ

KannadaprabhaNewsNetwork |  
Published : Aug 28, 2026, 04:30 AM IST
26ಕೆಡಿವಿಜಿ5-ದಾವಣಗೆರೆಯಲ್ಲಿ ಬುಧವಾರ ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಬ್ರಹ್ಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ಸುಮಾರು 18 ಲಕ್ಷ ವಿಕಲಚೇತನರಿಗೆ ಸೂಕ್ತ ಸಾಮಾಜಿಕ, ಆರ್ಥಿಕ ಭದ್ರತೆ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿಕಲಚೇತನರ ಅಭಿವೃದ್ಧಿ ಸಂಘದಿಂದ ಜಿಲ್ಲಾಮಟ್ಟದ ವಿಕಲಚೇತನರ ಸಮಾವೇಶ ಹಾಗೂ 1 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ಆ.30ರಂದು ಜಗಳೂರು ಪಟ್ಟಣದ ಗುರು ಭವನದಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಬ್ರಹ್ಮ ತಿಳಿಸಿದ್ದಾರೆ.

- ವಿಕಲಚೇತನರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಕಲ್ಪಿಸಲು ಮಹಾಂತೇಶ ಬ್ರಹ್ಮ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಸುಮಾರು 18 ಲಕ್ಷ ವಿಕಲಚೇತನರಿಗೆ ಸೂಕ್ತ ಸಾಮಾಜಿಕ, ಆರ್ಥಿಕ ಭದ್ರತೆ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿಕಲಚೇತನರ ಅಭಿವೃದ್ಧಿ ಸಂಘದಿಂದ ಜಿಲ್ಲಾಮಟ್ಟದ ವಿಕಲಚೇತನರ ಸಮಾವೇಶ ಹಾಗೂ 1 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮ ಆ.30ರಂದು ಜಗಳೂರು ಪಟ್ಟಣದ ಗುರು ಭವನದಲ್ಲಿ ನಡೆಯಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಬ್ರಹ್ಮ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 1 ಗಂಟೆಗೆ ಸಮಾವೇಶ ಉದ್ಘಾಟನೆಗೊಳ್ಳಲಿದೆ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ವಿಕಲಚೇತನರಿಗೆ ಸಂಬಂಧಿಸಿದ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರ, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಮುಂದಿಡಲಾಗುವುದು ಎಂದರು.

ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿಂದ ವಂಚಿತರಾದ ವಿಕಲಚೇತನರ ಜೀವನ ಸಂಕಷ್ಟದಲ್ಲಿದೆ. ಸರ್ಕಾರದ ಅನ್ಯ ಯೋಜನೆಗಳಿಗೆ ಹೋಲಿಸಿದರೆ ವಿಕಲಚೇತನರಿಗೆ ನೀಡುತ್ತಿರುವ ಸೌಲಭ್ಯಗಳಲ್ಲಿ ತೀವ್ರ ತಾರತಮ್ಯ ಎದ್ದು ಕಾಣುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ₹2 ಸಾವಿರ ನೀಡಲಾಗುತ್ತಿದೆ. ಶಕ್ತಿಯಡಿ ಆಧಾರ್ ಕಾರ್ಡ್ ತೋರಿಸಿದರೆ ಮಹಿಳೆಯರಿಗೆ ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವಿದೆ. ಆದರೆ, ವಿಕಲಚೇತನರಿಗೆ ಅಂತಹ ಅವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂತರ್ಜಾತಿ ವಿವಾಹಕ್ಕೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ. ಆದರೆ, ವಿಕಲಚೇತನರಿಗೆ ಕೇವಲ ₹800 ಮಾಸಾಶನ, ₹600 ಗಳಿಗೆ ಕೇವಲ 100 ಕಿಮೀ ವ್ಯಾಪ್ತಿಗೆ ಬಸ್‌ ಪಾಸ್, ವಿಕಲಚೇತನರ ವಿವಾಹಕ್ಕೆ ₹50 ಸಾವಿರ ಪ್ರೋತ್ಸಾಹಧನ ಮಾತ್ರ ನೀಡಲಾಗುತ್ತಿದೆ. ಸರ್ಕಾರ ಎಲ್ಲ ಬಗೆಯ ವಿಕಲಚೇತನರಿಗೆ ಕನಿಷ್ಠ ₹6 ಸಾವಿರ ಮಾಸಾಶನ ನೀಡಲಿ. ರಾಜ್ಯಾದ್ಯಂತ ಸಂಪೂರ್ಣ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲಿ. ವಿವಾಹ ಪ್ರೋತ್ಸಾಹಧನ ₹5 ಲಕ್ಷಕ್ಕೆ ಹೆಚ್ಚಿಸಬೇಕು. ಮಾಸಾಶನಕ್ಕೆ ಯಾವುದೇ ಆದಾಯ ಮಿತಿ ನಿಗದಿ ಪಡಿಸಬಾರದು ಎಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಬರ್ಕತ್ ಅಲಿ, ಕೆ.ಬಿ.ತಿಪ್ಪಣ್ಣ, ಪೆದ್ದಣ್ಣ, ಖಲೀಲ್ ಸಾಬ್ ಇತರರು ಇದ್ದರು.

- - -

(ಬಾಕ್ಸ್‌)

* ಪ್ರಮುಖ ಬೇಡಿಕೆಗಳು - ವಿಕಲಚೇತನರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.

- ರಾಜ್ಯದ ಪ್ರತಿ ತಾಲೂಕಿನಲ್ಲಿ ವಿಕಲಚೇತನರ ಭವನ ನಿರ್ಮಿಸಬೇಕು.

- ಪ್ರತಿ ತಿಂಗಳು ತಾಲೂಕು ಆಡಳಿತದಿಂದ ವಿಕಲಚೇತನರ ಕುಂದುಕೊರತೆ ಸಭೆ ನಡೆಸಬೇಕು.

- ಸೇವೆಯಲ್ಲಿರುವ ವಿಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯು ನೌಕರರನ್ನು ಕಾಯಂಗೊಳಿಸಬೇಕು.

- 5 ತಿಂಗಳಿನಿಂದ ಖಾಲಿ ಇರುವ ವಿಕಲಚೇತನರ ಹಕ್ಕುಗಳ ರಾಜ್ಯ ಆಯುಕ್ತರ ಹುದ್ದೆ ಭರ್ತಿ ಮಾಡಬೇಕು.

- ಹೊರ ಗುತ್ತಿಗೆ ಹಾಗೂ ದಿನಗೂಲಿ ಆದಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು.

- - -

-26ಕೆಡಿವಿಜಿ5:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆ ಒತ್ತುವರಿ ತೆರವುಗೊಳಿಸಿ: ಬಡದಾಳ ರೈತರ ಆಗ್ರಹ
ಸುಪ್ರೀಂ ಕೋರ್ಟ್‌ ಸಿಜೆ ಭಾಗಿಗೆ ವಿರೋಧ:ಕಾನೂನು ಶಾಲೆಯ ಘಟಿಕೋತ್ಸವವೇ ರದ್ದು