ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಪುತ್ಥಳಿ ಅನಾವರಣ, ಗ್ರಂಥಾಲಯ, ಭವನಗಳು, ನೋಟ್ ಪುಸ್ತಕ ವಿತರಣೆಗಳು ಸೇರಿದಂತೆ ಭಾವನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಗ್ರಾಮೀಣ ಭಾಗದಲ್ಲಿ ಇಂತಹ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭವನಗಳು ಗ್ರಂಥಾಲಯಗಳನ್ನಾಗಿ ಮಾರ್ಪಾಡುತ್ತಿರುವುದು ಬಾಬಾಸಾಹೇಬರ ಚಿಂತನೆಗೆ ಪೂರಕವಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ತಾಲೂಕಿನ ಬಿಜಿಪುರ ಹೋಬಳಿಯ ಕಿರಗಸೂರು ಗ್ರಾಮದಲ್ಲಿ ಭಾನುವಾರ ಡಾ.ಭೀಮ್ ರಾವ್ ಅಂಬೇಡ್ಕರ್ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿ, ಶೋಷಿತರು, ಎಲ್ಲಾ ವರ್ಗದ ಜನರು ಶಿಕ್ಷಣ ಹಾಗೂ ಅರಿವಿನ ಮುಖಾಂತರ ದೇಶ ಸದೃಢವಾಗಿರಲು ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನ ಅರಿತುಕೊಳ್ಳಬೇಕೆಂದು ತಿಳಿಸಿದರು.
ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಪುತ್ಥಳಿ ಅನಾವರಣ, ಗ್ರಂಥಾಲಯ, ಭವನಗಳು, ನೋಟ್ ಪುಸ್ತಕ ವಿತರಣೆಗಳು ಸೇರಿದಂತೆ ಭಾವನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಗ್ರಾಮೀಣ ಭಾಗದಲ್ಲಿ ಇಂತಹ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಈ ಒಂದು ಪುಟ್ಟ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಿರುವುದು ತುಂಬಾ ಸಂತೋಷವಾಗಿದೆ. ಇದಕ್ಕೆ ಹೋರಾಟ ಮತ್ತು ವಿದ್ಯೆ ಮುಖ್ಯವಾಗಿದೆ ಎಂದರು.
ಮೈಸೂರಿನ ಉರಿಲಿಂಗಪೆದ್ದ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಪುತ್ಥಳಿ ಅನಾವರಣಗೊಂಡು ಗ್ರಾಮದಲ್ಲಿ ಮದ್ಯಪಾನ ನಿಷೇಧ ಆಗಿರುತ್ತದೆಯೋ ಆ ಗ್ರಾಮದಲ್ಲಿ ಅಂಬೇಡ್ಕರ್ ಅವರು ಜೀವಂತವಾಗಿ ಇರುತ್ತಾರೆ ಎಂಬುದಕ್ಕೆ ಈ ಕಿರಗಸೂರು ಗ್ರಾಮವೇ ಸಾಕ್ಷಿಯಾಗಿದೆ ಎಂದರು.
ಈ ಗ್ರಾಮದಲ್ಲಿ ಯಾವ ಒಬ್ಬ ವ್ಯಕ್ತಿವು ಮದ್ಯಪಾನ ಮಾಡಿದವರನ್ನು ನಾನು ನೋಡಲೇ ಇಲ್ಲ. ಇತ್ತೀಚೆಗೆ ಮೂಢನಂಬಿಕೆ ಹೆಚ್ಚುತ್ತಿದ್ದು ಪ್ರಸ್ತುತ ಯುವಕರು ಇದರಿಂದ ಹೊರ ಬರಬೇಕು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ಕೊಡಿಸಬೇಕು, ಅಂಬೇಡ್ಕರ್ ಚಿಂತನೆ ಮೈಗೂಡಿಸಿಕೊಂಡು ಪ್ರತಿಯೊಬ್ಬರು ಸ್ವಾಭಿಮಾನಿಯಾಗಿ ಬದುಕುಬೇಕೆಂದು ಕರೆ ನೀಡಿದರು.
ಅಕ್ಕ ಐಎಎಸ್ ಅಕಾಡೆಮಿ ಮೈಸೂರು ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ, ಯಾವ ಗ್ರಾಮದಲ್ಲಿ ಅರಿವು ಇಲ್ಲವೋ ಅಂತಹ ಗ್ರಾಮಗಳು ಅಭಿವೃದ್ಧಿಯಿಂದ ಹಿಂದುಳಿಯುತ್ತದೆ. ಅಂಬೇಡ್ಕರ್ ಅವರನ್ನು ದಲಿತರ ಬೆಳಕು ಎನ್ನುವ ಬದಲು ಜಗತ್ತಿನ ಬೆಳಕು ಹಾಗೂ ಭಾರತ ಸೂರ್ಯ ಎಂದು ಕರೆಯಬೇಕು ಎಂದರು.
ಮೊದಲು ಗ್ರಾಮದ ಯುವಕ ಸಂಘದ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ವಿವಿಧ ದಲಿತ ಸಂಘಟನೆ ಮುಖಂಡರು ಬೆಳಕವಾಡಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯಿಂದ ತೆರೆದ ವಾಹನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ಮೂಲಕ ಕಿರಗಸೂರು ಗ್ರಾಮಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ಮಂಗಳ ವಾದ್ಯಗಳು, ತಮಟೆ ನಗಾರಿ ಗಮನ ಸೆಳೆದ್ದವು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಟಿ.ನರಸೀಪುರದ ನಳಂದ ಬುದ್ಧ ವಿಹಾರದ ಪೂಜ್ಯಪಂತೆ ಬೋಥಿರತ್ನರತ್ನವರು ವಹಿಸಿದರು. ಮೈಸೂರು ಕಾನೂನು ಮಾಪಕಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕಾಧಿಕಾರಿ ಕೆ.ಎಂ.ಮಹದೇವಸ್ವಾಮಿ, ಭಾರತೀಯ ಬೌದ್ಧ ಮಹಾಸಭಾ ಯುವಕ ಘಟಕದ ರಾಜ್ಯಾಧಕ್ಷ ದರ್ಶನ್ ಸೋಮಶೇಖರ್, ಚಿತ್ರನಟ ಚೇತನ್ ಅಹಿಂಸ, ಎ.ಎಸ್.ಎಸ್.ಎ.ಸಂಸ್ಧಾಪಕ ಅಧ್ಯಕ್ಷ ಸಂದೇಶ್, ಸಾಹಿತಿ ಮಹದೇವಸ್ವಾಮಿ, ಕಗ್ಗಲೀಪುರ ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮಿ ಗುರುಮೂರ್ತಿ, ಸದಸ್ಯರಾದ ವರಲಕ್ಷ್ಮಿನಾಗಮಾಧು, ಕೆ.ಎಸ್.ರಾಜೇಂದ್ರ ಪ್ರಸಾದ್, ಮುಖಂಡರಾದ ವಿಷಕಂಠ, ರಘುರಾಜು, ಎಸ್ ಎಸ್ ಕನ್ವೆನ್ಷನ್ ಹಾಲ್ ಮಾಲೀಕ ಸಾವುಕಯ್ಯ, ಮಾರಿಮಾದಯ್ಯ, ಎನ್.ದೇವರಾಜು, ಮೋಹನ್, ಮಹದೇವಯ್ಯ, ಶಿವಣ್ಣ, ನಿವೃತ್ತ ಯೋಧ ಸಿದ್ದರಾಜು, ಆಶೋಕ್ ಸೇರಿದಂತೆ ಹಲವು ಗ್ರಾಮದ ಮುಖಂಡರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.